newsfirstkannada.com

ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡ ಯಾವುದೆಂದು ತಿಳಿಸಿದ ಸೌರವ್ ಗಂಗೂಲಿ

Share :

Published June 29, 2024 at 3:05pm

    ‘ವಿರಾಟ್ ಕೊಹ್ಲಿ-ರೋಹಿತ್ ಬ್ಯಾಟಿಂಗ್​ ಆರಂಭಿಸಬೇಕು’

    ‘ಕೊಹ್ಲಿ ಕೂಡ ಮನುಷ್ಯ, ಫಾರ್ಮ್ ಕಳೆದುಕೊಳ್ಳೋದು ಸಹಜ’

    ರೋಹಿತ್ ಕ್ಯಾಪ್ಟನ್ಸಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು..?

ಈ ಬಾರಿ ಟೀಂ ಇಂಡಿಯಾ ಖಂಡಿತವಾಗಿಯೂ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಎರಡನೇ ಬಾರಿಗೆ T20 ವಿಶ್ವ ಚಾಂಪಿಯನ್ ಆಗುವ ಕನಸು ಕಾಣ್ತಿದೆ. ಬಾರ್ಬಡೋಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ರಾತ್ರಿ 8 ಗಂಟೆಯಿಂದ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲು ದಿಢೀರ್ ಸಭೆ ಕರೆದ ಐಸಿಸಿ.. ಏನಾಯ್ತು..?

ಫೈನಲ್ ಪಂದ್ಯದ ಬಗ್ಗೆ ಮಾತನಾಡಿದ ಗಂಗೂಲಿ.. ಭಾರತ ತಂಡವು ಸೋಲಿಲ್ಲದೇ ಫೈನಲ್ ಪ್ರವೇಶ ಮಾಡಿದೆ. ಇದು ತುಂಬಾ ಸಂತೋಷದ ವಿಚಾರ. ರೋಹಿತ್ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡ್ತಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.
6 ತಿಂಗಳ ಹಿಂದೆ ODI ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲಿನಿಂದ ಭಾರತ ನಿರಾಶೆ ಅನುಭವಿಸಿತ್ತು.

ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್​​ನಲ್ಲೂ ಫೈನಲ್ ತಲುಪಿದ್ದು, ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ. ಈ ಬಾರಿ ಟೀಂ ಇಂಡಿಯಾ ಖಂಡಿತವಾಗಿಯೂ ಟ್ರೋಫಿ ಎತ್ತಿ ಹಿಡಿಯಲಿದೆ. ಒಂದು ವೇಳೆ ಕೆಲವೇ ತಿಂಗಳುಗಳ ಅಂತರದಲ್ಲಿ ಭಾರತ ಫೈನಲ್​​ನಲ್ಲಿ ಸೋತರೆ ರೋಹಿತ್ ಶರ್ಮಾ ಬಾರ್ಬಡೋಸ್​ನಲ್ಲಿರುವ ಸಮುದ್ರಕ್ಕೆ ಜಿಗಿಯುತ್ತಾರೆ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:ಗುಡ್​ ನ್ಯೂಸ್​.. ಫೈನಲ್ ಪಂದ್ಯವನ್ನೂ ನೀವು ಥಿಯೇಟರ್​​ನಲ್ಲೂ ನೋಡಬಹುದು..!

ಇದೇ ವೇಳೆ ಕಿಂಗ್ ಕೊಹ್ಲಿ ಕಳಪೆ ಫಾರ್ಮ್​​ ಬಗ್ಗೆ ಮಾತನಾಡಿ.. ಕೊಹ್ಲಿ ಕೂಡ ಮನುಷ್ಯ. ಫಾರ್ಮ್ ಕಳೆದುಕೊಳ್ಳೋದು ಸಹಜ. ಆದರೆ ಇವತ್ತಿನ ಪಂದ್ಯದಲ್ಲಿ ಅವರಿಂದ ಅದ್ಭುತ ಇನ್ನಿಂಗ್ಸ್​ ನಿರೀಕ್ಷೆ ಮಾಡಬಹುದು. ರೋಹಿತ್ ಶರ್ಮಾ ಜೊತೆ ಅವರು ಓಪನಿಂಗ್ ಬ್ಯಾಟಿಂಗ್ ಮಾಡಲು ಬರಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ ಸಿಗುತ್ತೆ.. ರನ್ನರ್​​ ಅಪ್​​ಗೂ ಇದೆ ಬಂಪರ್ ಲಾಟರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡ ಯಾವುದೆಂದು ತಿಳಿಸಿದ ಸೌರವ್ ಗಂಗೂಲಿ

https://newsfirstlive.com/wp-content/uploads/2024/06/GANGULY-3.jpg

Load More