newsfirstkannada.com

ಮಟನ್​​ ಎಂದು ಗೊತ್ತಿಲ್ಲದೆ ಮೊಸಳೆ ಮಾಂಸ ತಿಂದಿದ್ದ ಸೌರವ್​ ಗಂಗೂಲಿ..! ಮುಂದೇನಾಯ್ತು?

Share :

16-07-2023

    ನಾನ್​ವೆಜ್ ಊಟ ತಿನ್ನೋಕೆ ದಾದಾ ಹಿಂದೆ ಮುಂದೆ ನೋಡಲ್ಲ

    ಕೋಲ್ಕತ್ತಾ ಪ್ರಿನ್ಸ್ ಗಂಗೂಲಿ​ಗೆ ಮಟನ್ ಅಂದ್ರೆ ತುಂಬಾ ಇಷ್ಟ

    ಒಳ್ಳೊಳ್ಳೆ ಹೋಟೆಲ್​ಗಳನ್ನೇ ಹುಡುಕಿಕೊಂಡು ಹೋಗ್ತಾರೆ ದಾದಾ

ಬೆಂಗಾಲ್ ಟೈಗರ್ ಸೌರವ್ ಗಂಗೂಲಿ ನಾನ್​ವೆಜ್ ಪ್ರಿಯ. ಒಂದೊಳ್ಳೆ ನಾನ್​ವೆಜ್ ಊಟ ತಿನ್ನೋಕೆ ದಾದಾ ಹಿಂದೆ ಮುಂದೆ ನೋಡಲ್ಲ. ಆದ್ರೆ, ಈ ಅತಿ ಆಸೆಯಿಂದ ಮೋಸಕ್ಕೆ ಒಳಗಾಗಿದ್ದ ದಾದಾ, ಒಮ್ಮೆ ಮೊಸಳೆ ತಿಂದಿದ್ದರಂತೆ!. ಅಂದಹಾಗೆಯೇ ಈ ಘಟನೆ ನಡೆದಿದ್ದೆಲ್ಲಿ? ಈ ಸ್ಟೋರಿ ಮಿಸ್​ ಮಾಡದೆ ಓದಿ.

ಸೌರವ್ ಗಂಗೂಲಿ, ಟೀಮ್ ಇಂಡಿಯಾದ ಸಕ್ಸಸ್​ಫುಲ್ ಕ್ಯಾಪ್ಟನ್​​​ಗಳಲ್ಲಿ ಒಬ್ಬರು. ಬೆಂಗಾಲ್ ಟೈಗರ್, ದಾದಾ ಅಂತಾನೇ ಕರೆಸಿಕೊಳ್ಳುವ ಈ ಕೋಲ್ಕತ್ತಾ ಪ್ರಿನ್ಸ್​ಗೆ ಏನ್ ಕೊಟ್ರು ತಿಂತಾರೆ. ಒಂದೊಳ್ಳೆ ಅಡುಗೆ ಮಾಡಿ, ಸಖತ್ ಟೇಸ್ಟಿಯಾಗಿದ್ರೆ ಸಾಕು ತಿನ್ನೋಕೆ ಹಿಂದೆ ಮುಂದೆನೂ ನೋಡಲ್ಲ.

ಗಂಗೂಲಿಗೆ ಮಟನ್ ಅಂದ್ರೆ ಇಷ್ಟ

ನಾನ್​ವೆಜ್ ಪ್ರಿಯ ಆಗಿರೋ ಗಂಗೂಲಿ, ಒಳ್ಳೊಳ್ಳೆ ಹೋಟೆಲ್​ಗಳನ್ನೇ ಹುಡುಕಿಕೊಂಡು ಹೋಗ್ತಿದ್ರಂತೆ. ಹೇಳಿ ಕೇಳಿ ಗಂಗೂಲಿಗೆ ಮಟನ್ ಅಂದ್ರೆ ತುಂಬಾ ಇಷ್ಟ. ಹೀಗಾಗೇ ಕೀನ್ಯಾದ ನೈರೋಬಿಯದಲ್ಲಿ ಗಂಗೂಲಿ, ಆರೇಳು ಸಹ ಆಟಗಾರರ ಜೊತೆ ಹೋಟೆಲ್ ಒಂದಕ್ಕೆ ಹೋಗಿದ್ರು. ಆಗ ಈಗಿನ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಗಂಗೂಲಿಗೆ ಕೆಲ ನಾನ್​ವೆಜ್ ಐಟಮ್ಸ್ ಟ್ರೈ ಮಾಡೋಕೆ ಹೇಳಿದ್ರಂತೆ. ಅಜಿತ್ ಮಾತನ್ನ ನಂಬಿದ್ದ ಗಂಗೂಲಿ, ಪ್ಲೇಟ್​​ನಲ್ಲಿದ್ದ ಊಟವನ್ನ ಹಿಂದು ಮುಂದೆ ನೋಡದೇ ತಿಂದೇಬಿಟ್ಟಿದ್ರು.

ಮೊಸಳೇ ಮಾಂಸ

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಆ ಪ್ಲೇಟ್​​ನಲ್ಲಿದ್ದದ್ದು ಮೊಸಳೆ ಮಾಂಸ. ಈ ವಿಚಾರ ಗಂಗೂಲಿಗೆ ತಿಳಿದೇ ಇರರ್ಲಿಲ್ಲ. ಎಲ್ಲಾ ತಿಂದು ಬಿಲ್ ಕೊಟ್ಟಮೇಲೆ ಅಗರ್ಕರ್ ಹೇಳ್ತಾರಂತೆ ಅದು ಮೊಸಳೆ ಮಾಂಸ ಅಂತಾ. ತಿಂದ್ಮೇಲೆ ಇನ್ನೇನು ಮಾಡ್ಲಿ, ಚೆನ್ನಾಗೇ ಇತ್ತು ಅಂತಾ ಹೋಟೆಲ್ ರೂಮ್​ನತ್ತ ಹೆಜ್ಜೆ ಹಾಕಿದ್ರಂತೆ. ಈ ವಿಚಾರವನ್ನ ಸ್ವತಃ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮಟನ್​​ ಎಂದು ಗೊತ್ತಿಲ್ಲದೆ ಮೊಸಳೆ ಮಾಂಸ ತಿಂದಿದ್ದ ಸೌರವ್​ ಗಂಗೂಲಿ..! ಮುಂದೇನಾಯ್ತು?

https://newsfirstlive.com/wp-content/uploads/2023/07/Ganguli-3.jpg

Load More