newsfirstkannada.com

ಆದಾಯದ ಮೂಲ ಹೆಚ್ಚಿಸಲು ಟಾರ್ಗೆಟ್ ಫಿಕ್ಸ್‌; ಅಬಕಾರಿ ಇಲಾಖೆಗೆ ಸಿಎಂ ಕೊಟ್ಟ ಹೊಸ ಟಾಸ್ಕ್ ಏನು?

Share :

09-06-2023

  ಉಚಿತ ಯೋಜನೆಗಳಿಗೆ ಹಣ ಹೊಂದಿಸಲು ಟಾರ್ಗೆಟ್​ ಫಿಕ್ಸ್​

  ‘ಕಿಕ್’​ ಪ್ರಿಯರಿಗೆ ಸಿದ್ದರಾಮಯ್ಯ ಸರ್ಕಾರದ ‘ಗ್ಯಾರೆಂಟಿ’ ಶಾಕ್​

  ದರ ಹೆಚ್ಚಿಸದಂತೆ ಸಿಎಂಗೆ ಮದ್ಯ ಪ್ರಿಯರ ಸಂಘದಿಂದ ಪತ್ರ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮುಂದಾಗಿರುವ ಸರ್ಕಾರ ಆದಾಯ ಮೂಲ ಹೊಂದಿರುವ ಇಲಾಖೆಗಳಿಗೆ ಸಿಎಂ ಟಾಸ್ಕ್ ನೀಡಲಾರಂಭಿಸಿದೆ. ಅದರಲ್ಲಿ ಮೊದಲ ಟಾಸ್ಕ್‌ ಕೊಟ್ಟಿರೋದು ಅಬಕಾರಿ ಇಲಾಖೆಗೆ. ಬರೊಬ್ಬರಿ 35 ಸಾವಿರ ಕೋಟಿ ಸಂಗ್ರಹದ ಬೃಹತ್​ ಗುರಿ ನೀಡಲಾಗಿದ್ದು, ಇದರ ಬೆನ್ನಲ್ಲೇ ಮದ್ಯದ ದರ ಹೆಚ್ಚಳ ಆಗಿದೆ. ಇದು ಮದ್ಯ ಪ್ರಿಯರನ್ನ ಕಂಗೆಡಿಸಿದ್ದು, ಮದ್ಯ ದರ ಹೆಚ್ಚಿಸದಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್​ ಸರ್ಕಾರಕ್ಕೆ ಗ್ಯಾರೆಂಟಿ ಯೋಜನೆಗಳ ಘೋಷಣೆಯೇ ದೊಡ್ಡ ಭಾರವಾಗಿ ಹೋಗಿದೆ. ಐದು ಗ್ಯಾರೆಂಟಿ ಯೋಜನೆಗಳಿಗೆ ವರ್ಷಕ್ಕೆ 59 ಸಾವಿರ ಕೋಟಿ ವೆಚ್ಚವಾಗುತ್ತೆ ಎಂದು ಮುಖ್ಯಮಂತ್ರಿಗಳೇ ಅಂದಾಜಿಸಿದ್ದಾರೆ. ಹೀಗಾಗಿ ಉಚಿತ ಯೋಜನೆಗಳಿಗೆ ಹಣ ಹೊಂದಿಸಲು ಸಿಎಂ ಸಿದ್ದರಾಮಯ್ಯನವರು ಹೆಣಗಾಡುತ್ತಿದ್ದಾರೆ. ಆದ್ದರಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡುವ ಸಲುವಾಗಿ, ಹೆಚ್ಚಿನ ಆದಾಯದ ಮೂಲ ಹೊಂದಿರುವ ಇಲಾಖೆಗಳಿಗೆ ಸರ್ಕಾರ ಕೈ ಹಾಕಿದೆ. ಅದರಲ್ಲೂ ಸರ್ಕಾರದ ಖಜಾನೆಗೆ ದೊಡ್ಡ ಮಟ್ಟದ ಆದಾಯ ತರುವ ಅಬಕಾರಿ ಇಲಾಖೆ ಮೇಲೆ ಹೆಚ್ಚಿನ ಹೊರೆ ಹಾಕಲು ಮುಂದಾಗಿದೆ. ಇದು ಮದ್ಯ ಪ್ರಿಯರನ್ನ ಕಂಗೆಡಿಸಿದೆ. ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಹಣ ಸಂಗ್ರಹದ ಗುರಿ ಇಟ್ಟುಕೊಂಡು, ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಕೈ ಹಾಕಿದೆ. ಹೀಗಾಗಿ ಆದಾಯ ಮೂಲ ಹೊಂದಿರುವ ಇಲಾಖೆಗಳಿಗೆ ಸಿಎಂ ಹೆಚ್ಚಿನ ಟಾಸ್ಕ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲೂ ಅಬಕಾರಿ ಇಲಾಖೆಯೊಂದಕ್ಕೇ 35 ಸಾವಿರ ಕೋಟಿ ಸಂಗ್ರಹದ ಟಾರ್ಗೆಟ್​ಅನ್ನು ಸಿಎಂ ಸಿದ್ದರಾಮಯ್ಯನವರು ನೀಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಹಣ ಸಂಗ್ರಹದ ಗುರಿಯನ್ನು ಫಿಕ್ಸ್​ ಮಾಡಿದ್ದಾರೆ.

ಕಳೆದ 2021-22ರ ಸಾಲಿನಲ್ಲಿ 25 ಸಾವಿರ ಕೋಟಿ ಸಂಗ್ರಹದ ಗುರಿ ಇಟ್ಟುಕೊಂಡಿದ್ದರು. ಆದ್ರೆ ಆ ವರ್ಷ, ಅಬಕಾರಿ ಇಲಾಖೆಯಿಂದ 26 ಸಾವಿರ ಕೋಟಿ ಸಂಗ್ರಹವಾಗಿತ್ತು. ಇನ್ನು 2022-23ರಲ್ಲಿ 29 ಸಾವಿರ ಕೋಟಿ ಆದಾಯ ಸರ್ಕಾರದ ಖಜಾನೆ ಸೇರಿತ್ತು. ನಿರೀಕ್ಷೆಗೂ ಮೀರಿ ಮದ್ಯದ ಆದಾಯ ಸಂಗ್ರಹವಾಗುತ್ತಿರುವ ಕಾರಣ, ಈ ವರ್ಷ ಬರೋಬ್ಬರಿ 35 ಸಾವಿರ ಕೋಟಿ ಆದಾಯ ಸಂಗ್ರಹದ ಗುರಿಯನ್ನು ಸರ್ಕಾರ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್​ಗೆ ನೀಡಿದ್ದಾರೆ. ಈಗಾಗಲೇ ಮದ್ಯ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಬಿಯರ್​ ಸೇರಿದಂತೆ ವಿವಿಧ ರೀತಿಯ ಮದ್ಯದ ದರಗಳಲ್ಲಿ ಶೇ.10-15ರಷ್ಟು ದರ ಹೆಚ್ಚಳ ಆಗಿದೆ.

ದರ ಹೆಚ್ಚಿಸದಂತೆ ಸಿಎಂಗೆ ಮದ್ಯ ಪ್ರಿಯರ ಸಂಘ ಪತ್ರ

ಮದ್ಯದ ದರ ಹೆಚ್ಚಳ ಪ್ರಸ್ತಾವಕ್ಕೆ ರಾಜ್ಯ ಮದ್ಯ ಪ್ರಿಯರ ಸಂಘವು ಅಸಮಾಧಾನ ಹೊರಹಾಕಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ದರ ಹೆಚ್ಚಳ ಮಾಡದಂತೆ ಮನವಿ ಮಾಡಿಕೊಂಡಿದೆ. ಮದ್ಯದ ಮೇಲಿನ ಸುಂಕ ಹೆಚ್ಚಳ ಪ್ರಸ್ತಾವವನ್ನು ಮರು ಪರಿಶೀಲನೆ ಮಾಡ್ಬೇಕು ಎಂದು ವಿನಂತಿಸಿಕೊಳ್ಳಲಾಗಿದೆ. ಇನ್ನು ಕರ್ನಾಟಕದಲ್ಲಿ ಮದ್ಯ ದರ ಭಾರೀ ಹೆಚ್ಚಳವಾಗಿದೆ ಎಂಬ ಸುದ್ದಿ ಹರಿದಾಡ್ತಿತ್ತು. ಈ ಬಗ್ಗೆ ಅಬಕಾರಿ ಇಲಾಖೆ ಸ್ಪಷ್ಟೀಕರಣ ನೀಡಿದೆ. ಲಿಕ್ಕರ್‌ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ದರ ಮಾತ್ರ ಏರಿಕೆ ಆಗಿದೆ. ಆದ್ರೆ, ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂಬ ವಾದ ಮಂಡಿಸಿದೆ. ಅದೇನೆ ಇರಲಿ, ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ, ಅದರ ಹೊರೆಯನ್ನು ಪರೋಕ್ಷವಾಗಿ ಜನರ ಮೇಲೆ ಹಾಕಲು ಹೊರಟಿದೆ. ಈಗಾಗಲೇ ವಿದ್ಯುತ್​ ಶಾಕ್​ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಮದ್ಯ ಪ್ರಿಯರಿಗೂ ಗ್ಯಾರೆಂಟಿ ಶಾಕ್​ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಾಯದ ಮೂಲ ಹೆಚ್ಚಿಸಲು ಟಾರ್ಗೆಟ್ ಫಿಕ್ಸ್‌; ಅಬಕಾರಿ ಇಲಾಖೆಗೆ ಸಿಎಂ ಕೊಟ್ಟ ಹೊಸ ಟಾಸ್ಕ್ ಏನು?

https://newsfirstlive.com/wp-content/uploads/2023/06/siddu-14.jpg

Load More