newsfirstkannada.com

ವಿಶ್ವಕಪ್​​ ಗೆದ್ದ ಬೆನ್ನಲ್ಲೇ ಮಹತ್ವದ ನಿರ್ಧಾರ.. ವಿರಾಟ್​​​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​​!

Share :

Published July 1, 2024 at 9:03pm

Update July 1, 2024 at 9:05pm

    ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ವಿರಾಟ್​ ಕೊಹ್ಲಿ

    ವಿರಾಟ್​ ಕೊಹ್ಲಿ ನಿವೃತ್ತಿ ಬೆನ್ನಲ್ಲೇ ಆರ್​​ಸಿಬಿ ಫ್ರಾಚೈಸಿಯಿಂದ ಗುಡ್​ನ್ಯೂಸ್..​​!

    ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಇತ್ತೀಚೆಗೆ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇನ್ನು, ಟಿ20 ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಆಗಿದ್ದಾರೆ ಅನ್ನೋ ಬೇಸರದಲ್ಲಿರೋ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಒಂದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಕೊಹ್ಲಿ ಬಗ್ಗೆ ಬಿಗ್​ ಅಪ್ಡೇಟ್​​ ನೀಡಿದೆ. ಸದ್ಯ ಕೊಹ್ಲಿ ಅಂತರಾಷ್ಟ್ರೀಯ ಮಹತ್ವದ ಜವಾಬ್ದಾರಿಗಳಿಂದ ಮುಕ್ತರಾಗಿದ್ದು, ಐಪಿಎಲ್​​ನಲ್ಲಿ ಮತ್ತೆ ಆರ್​​ಸಿಬಿ ತಂಡವನ್ನು ಮುನ್ನಡೆಸಲು ಕೊಹ್ಲಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಈಗ 40 ವರ್ಷ. ಹಾಗಾಗಿ ಐಪಿಎಲ್​​ನಿಂದ ಫಾಫ್​ ನಿವೃತ್ತಿ ಆಗೋ ಸಾಧ್ಯತೆ ಇದೆ. ಇದಾದ ಬಳಿಕ ಆರ್​​ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್​ ಬೇಕಿದ್ದಾರೆ. ಆದ್ದರಿಂದ ಮುಂದಿನ ಸೀಸನ್​ಗೆ ಕೊಹ್ಲಿ ಅವರಿಗೆ ಆರ್​​ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಗಂಭೀರ್​ ಕೋಚ್​​ ಆಗೋ ಮುನ್ನವೇ ಅಚ್ಚರಿ ಬೆಳವಣಿಗೆ; ಕೊಹ್ಲಿ, ರೋಹಿತ್​​ ನಿವೃತ್ತಿಗೆ ಅಸಲಿ ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್​​ ಗೆದ್ದ ಬೆನ್ನಲ್ಲೇ ಮಹತ್ವದ ನಿರ್ಧಾರ.. ವಿರಾಟ್​​​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​​!

https://newsfirstlive.com/wp-content/uploads/2024/05/Virat-Kohli-RCB.jpg

Load More