newsfirstkannada.com

ನಸುಕಿನ ಜಾವ ಹೊತ್ತಿ ಉರಿದ 5 ಅಂತಸ್ತಿನ ಕಟ್ಟಡ; 60ಕ್ಕೂ ಹೆಚ್ಚು ಜನರ ಸಾವು, 40 ಮಂದಿ ಗಂಭೀರ

Share :

31-08-2023

    ಸೂರ್ಯ ಉದಯಿಸುವಷ್ಟರಲ್ಲಿ ಭಯಾನಕ ಬೆಂಕಿ ಅವಘಡ

    ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ್ರೂ ಏನು..?

    ಹೊರಗೆ ಬರಲಾಗದೇ ಪ್ರಾಣ ಕಳೆದುಕೊಂಡ ಅಮಾಯಕರು

ಕೇಪ್ ಟೌನ್: ಬೆಳ್ಳಂ ಬೆಳಗ್ಗೆ  5 ಅಂತಸ್ತಿನ ಬಿಲ್ಡಿಂಗ್​ ಧಗಧಗನೇ ಹೊತ್ತಿ ಉರಿದಿರುವ ಘಟನೆ ಜೋಹಾನ್ಸ್‌ಬರ್ಗ್​ನ ಮಾರ್ಷಲ್‌ಟೌನ್‌ನ ಆಲ್ಬರ್ಟ್ ಸ್ಟ್ರೀಟ್‌ನಲ್ಲಿ ನಡೆದಿದೆ. ಧಗ ಧಗ ಬೆಂಕಿ ಹೊತ್ತಿ ಉರಿದಿದ್ದರಿಂದ ಸುಮಾರು 60 ಜನರು ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಲ್ಡಿಂಗ್​ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಒಟ್ಟು 63 ಜನರು ಇಲ್ಲಿವರೆಗೆ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಇದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದ ಹೊಗೆ ಹೆಚ್ಚಾಗಿ ತುಂಬಿದ್ದರಿಂದ ಹಲವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಡದಲ್ಲಿ ಸುಮಾರು 200 ಜನರು ನೆಲಸಿದ್ದರು ಎಂದು ಅಲ್ಲಿನ ತುರ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಟ್ಟಡದಲ್ಲಿ ಇನ್ನೂ ಯಾರಾದರೂ ಇದ್ದಾರೆಯೇ ಎಂದು ಶೋಧಕಾರ್ಯ ನಡೆಸಲಾಗುತ್ತಿದೆ. ಬಿಲ್ಡಿಂಗ್​ಗೆ ಬೆಂಕಿ ಹೊತ್ತಿಕೊಳ್ಳಲು ಏನು ಕಾರಣವೆಂದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆಯಿಂದಲೇ ಎಲ್ಲಾ ಗೊತ್ತಾಗಬೇಕಿದೆ. ಅಲ್ಲದೇ ತಮ್ಮವರನ್ನು ಕಳೆದುಕೊಂಡು ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಸುಕಿನ ಜಾವ ಹೊತ್ತಿ ಉರಿದ 5 ಅಂತಸ್ತಿನ ಕಟ್ಟಡ; 60ಕ್ಕೂ ಹೆಚ್ಚು ಜನರ ಸಾವು, 40 ಮಂದಿ ಗಂಭೀರ

https://newsfirstlive.com/wp-content/uploads/2023/08/Johannesburg.jpg

Load More