ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಅಗ್ನಿ ದುರಂತ
ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡ ನಿವಾಸಿಗಳು!
ಸರ್ಕಾರಿ ಕಟ್ಟಡದಲ್ಲಿ ಅಕ್ರಮವಾಗಿ ವಾಸವಿದ್ರಾ ಕ್ರಿಮಿನಲ್ಸ್?
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 70 ಜನರು ಸಾವನ್ನಪ್ಪಿದ್ದು, 73 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಹಸಾಹಸ ಪಟ್ಟಿದ್ದಾರೆ. ಇನ್ನೂ, ಹಲವು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.
ಇನ್ನು ಬೆಂಕಿಯಲ್ಲಿ ಬೆಂದು ಗಾಯಗೊಂಡವನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಕೂಡ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ನೂರಾರು ಇಂತಹ ಅಕ್ರಮ ಕಟ್ಟಡಗಳು ಇವೆ ಎನ್ನಲಾಗಿದೆ. 5 ಅಂತಸ್ತಿನ ಕಟ್ಟಡದ ಮೇಲೆ ಬೆಂಕಿ ಕಾಣಿಸಿಕೊಂಡ ಬಳಿಕ ಕೆಲವರು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿಯ ಜ್ವಾಲೆಗೆ ಸಿಲುಕಿ ಮಕ್ಕಳು ಕೂಡ ಬೆಂದು ಹೋಗಿದ್ದಾರೆ. ಘಟನೆಯಲ್ಲಿ ಬದುಕಿ ಬಂದ ಎಂಬೆಪಾ ಎಂಬುವರು ದುರಂತದ ಬಗ್ಗೆ ಮಾತನಾಡಿದ್ದಾರೆ. ಜನ ಬೆಂಕಿ ಬೆಂಕಿ ಅಂತ ಕೂಗಿಕೊಂಡರು. ಮಲಗಿದ್ದ ಎಲ್ಲರೂ ಎಚ್ಚರಗೊಂಡು ಓಡತೊಡಗಿದ್ದರು. ನಾನು ಕಿಟಕಿಗಾಜು ಒಡೆದು ಹೊರಬಂದು ಜೀವ ಉಳಿಸಿಕೊಂಡೆ ಎಂದಿದ್ದಾರೆ.
ಬೆಂಕಿ ದುರಂತದಿಂದ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ. ಕಿಟಕಿ, ಗಾಜುಗಳು, ಸುತ್ತಲೂ ಚೆಲ್ಲಾಪಿಲ್ಲಿಯಾಗಿರುವ ಬಟ್ಟೆಗಳು, ಕಟ್ಟಡದ ಅವಶೇಷಗಳು ಭೀಕರ ದುರಂತಕ್ಕೆ ಸಾಕ್ಷ್ಯ ನುಡಿಯುತ್ತಿವೆ. ಇನ್ನು ಘಟನೆ ಏನು ಕಾರಣ ಅಂತ ಇನ್ನೂ ತಿಳಿದು ಬಂದಿಲ್ಲ. ಸ್ಥಳೀಯ ಕಾಲಮಾನ ಮಧ್ಯರಾತ್ರಿ 1.30ರ ವೇಳೆ ನಿವಾಸಿಗಳು ಗಾಡನಿದ್ರೆಯಲ್ಲಿರುವಾಗ ದುರಂತ ಸಂಭವಿಸಿದೆ ಎನ್ನಲಾಗಿದೆ. ರಕ್ಷಣಾ ತಂಡಗಳಿಂದ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ.
ಸದ್ಯ ಬೆಂಕಿ ತಹಬದಿಗೆ ಬಂದಿದೆ. ಆದ್ರೆ ಅವಘಡ ಸಂಭವಿಸಿದ 12 ಗಂಟೆಗಳ ನಂತರವೂ ಕಟ್ಟಡದಲ್ಲಿ ಹೊಗೆಯಾಡ್ತಿದೆ. ಕಟ್ಟಡ ಮುನ್ಸಿಫಲ್ ಅಧಿಕಾರಿಗಳ ಒಡೆತನದಲ್ಲಿದೆ ಎನ್ನಲಾಗಿದೆ. ಕೆಲವು ಕೊಠಡಿಗಳನ್ನು ಕ್ರಿಮಿನಲ್ ಗ್ಯಾಂಗ್‌ಗಳು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಆದ್ರೆ ಕಟ್ಟಡದಲ್ಲಿ ಯಾಱರು ವಾಸವಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ