newsfirstkannada.com

20 ವರ್ಷಗಳ ಬಳಿಕ ಕಿವೀಸ್​ ಮಣಿಸಿದ ಹರಿಣಗಳ ಪಡೆ; 190 ರನ್​​ಗಳ ಐತಿಹಾಸಿಕ ಗೆಲುವು

Share :

02-11-2023

  ಕಿವೀಸ್​​ ವಿರುದ್ಧ ಆಫ್ರಿಕಾಗೆ ಪ್ರಚಂಡ ಗೆಲುವು

  ದಕ್ಷಿಣ ಆಫ್ರಿಕಾ 357/4 - ನ್ಯೂಜಿಲೆಂಡ್​​​ 167/10

  ಬಲಿಷ್ಠ ಕಿವೀಸ್​​ ತಂಡಕ್ಕೆ ಹ್ಯಾಟ್ರಿಕ್ ಸೋಲು

ಒಂದೇ ಒಂದು ಸೋಲು, ಬಲಿಷ್ಠ ನ್ಯೂಜಿಲೆಂಡ್​​​​ ತಂಡದ ಕಾನ್ಫೀಡೆಂಟ್ಸ್​ ಅನ್ನ ಕುಗ್ಗಿಸಿದೆ. ಬರೀ ಗೆಲುವಿನ ರುಚಿ ಕಾಣ್ತಿದ್ದ ಬ್ಲ್ಯಾಕ್ಸ್​​ಕ್ಯಾಪ್ಸ್​ಗೆ ಹ್ಯಾಟ್ರಿಕ್ ಸೋಲಿನ ದರ್ಶನವಾಗಿದೆ. ಪುಣೆಯಲ್ಲಿ ಕಿವೀಸ್​ ತಂಡವನ್ನು ಹರಿಣ ಪಡೆ ಪುಡಿಗಟ್ಟಿದೆ. ಟಾಪ್​​ ಕ್ಲಾಸ್​ ಬ್ಯಾಟಿಂಗ್​​, ಡೆಡ್ಲಿ ಸ್ಪೆಲ್​​ಗೆ ಟಾಮ್ ಲಾಥಮ್​ ಪಡೆ ಮಟಾಶ್​ ಆಯ್ತು.

ಒಂದು ಐಸಿಸಿ ಟೂರ್ನಮೆಂಟ್​​ನ ಕನ್ಸಿಸ್ಟನ್ಸಿ ಟೀಮ್​​​. ಇನ್ನೊಂದು ಮೋಸ್ಟ್ ಡೇಂಜರಸ್​​​ ತಂಡ. ಹೀಗಾಗಿ ಪುಣೆ ಮೈದಾನದಲ್ಲಿ ಹೈಥ್ರಿಲ್ಲಿಂಗ್​​ ಗೇಮ್ಸ್​​ ಎಕ್ಸ್​​ಪೆಕ್ಟೇಶನ್​ ಆಗಿತ್ತು. ಆದ್ರೆ ಆ ಎಲ್ಲಾ ನಿರೀಕ್ಷೆ ಹುಸಿಯಾಯ್ತು. ಹರಿಣ ಪಡೆ ಸೈಲೆಂಟ್​ ಕಿಲ್ಲರ್​​​ ಕಿವೀಸ್​ ತಂಡವನ್ನು ಈಸಿಯಾಗಿ ಬೇಟೆಯಾಡಿ ಸೆಮಿಫೈನಲ್​ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ.

ಪುಣೆಯಲ್ಲಿ ಕಿವೀಸ್ ಬೆಂಡೆತ್ತಿದ ಫೈರಿ ಡಿಕಾಕ್​​​​

ಪುಣೆಯಲ್ಲಿ ಕಿವೀಸ್​ ತಂಡ ಟಾಸ್​​​​​​​ ಗೆದ್ದು ದಕ್ಷಿಣ ಆಫ್ರಿಕಾಗೆ ಬ್ಯಾಟಿಂಗ್ ಆಹ್ವಾನಿಸಿದ್ದೇ ಬಂತು. ಹರಿಣ ಬ್ಯಾಟ್ಸ್​​ಮನ್​​ಗಳು ರೌದ್ರ ನರ್ತವನ್ನ ತೋರಿದ್ರು. ಕ್ವಿಂಟನ್​ ಡಿಕಾಕ್​ ಹಾಗೂ ರಾಸಿ ವ್ಯಾನ್ ಡರ್​ ಡಸ್ಸೆನ್ ಕೊಟ್ಟ ಒಂದೊಂದು ಏಟಿಗೆ ಕಿವೀಸ್ ಬೌಲರ್ಸ್​ ಬೆವತು ಹೋದ್ರು.
ಡಿಕಾಕ್​​​-ಡಸ್ಸೆನ್​​​​​​​ ರದ್ದು ಅದ್ಯಾವ ಪರಿ ಆರ್ಭಟ ಅಂತೀರಾ? ಅದನ್ನ ಹೇಳೋದೆ ಬೇಡ ಬಿಡಿ. ಪುಣೆಯ ಅಷ್ಟದಿಕ್ಕಿಗೂ ಸಿಕ್ಸರ್​​-ಬೌಂಡ್ರಿ ಸುರಿಸ್ತಿದ್ರೆ ಪ್ರೇಕ್ಷಕರಿಗೆ ಹಬ್ಬವೋ ಹಬ್ಬ. ಬಲಿಷ್ಠ ನ್ಯೂಜಿಲೆಂಡ್​​​ ಬೌಲಿಂಗ್ ಕೋಟೆಯನ್ನ ಛಿದ್ರಗೊಳಿಸಿದ ಈ ಸೂಪರ್​​ ಜೋಡಿ 2ನೇ ವಿಕೆಟ್​ಗೆ ಡಬಲ್​ ಸೆಂಚುರಿ ಜೊತೆಯಾಟವಾಡ್ತು.

ಡಿಕಾಕ್​ 4ನೇ ಶತಕ.. ರೋಹಿತ್​​ ದಾಖಲೆ ಪುಡಿಗಟ್ತಾರಾ?

ಬ್ಲ್ಯಾಕ್​ಕ್ಯಾಪ್ಸ್​​ ಅನ್ನ ನಿರ್ದಯವಾಗಿ ದಂಡಿಸಿದ ಡಿಕಾಕ್​ ಪ್ರಸಕ್ತ ವಿಶ್ವಕಪ್​​ನಲ್ಲಿ 4ನೇ ಶತಕ ಸಿಡಿಸಿದ್ರು. ಆ ಮೂಲಕ ಟೂರ್ನಮೆಂಟ್​​ವೊಂದರಲ್ಲಿ ರೋಹಿತ್​ ಬಳಿಕ ಅತಿಹೆಚ್ಚು ಸೆಂಚುರಿ ಬಾರಿಸಿದ ಖ್ಯಾತಿಗೆ ಭಾಜನರಾದ್ರು. 116 ಎಸೆತ ಎದುರಿಸಿದ ಡಿಕಾಕ್ 114 ರನ್​ ಗಳಿಸಿ ನಿರ್ಗಮಿಸಿದ್ರು. ಇನ್ನೊಂದೆಡೆ ಡಿಕಾಕ್​​ಗೆ ಉತ್ತಮ ಸಾಥ್​​ ನೀಡಿದ ಡಸ್ಸೆನ್​ ಸಿಡಿಲಬ್ಬರದ ಆಟವಾಡಿದ್ರು. ಸ್ಫೋಟಕ 138 ರನ್​ ಸಿಡಿಸಿ ಕಿವೀಸ್​​ಗೆ ವಿಲನ್ ಆದರು. ಕೊನೆಯಲ್ಲಿ ಡೇವಿಡ್​ ಮಿಲ್ಲರ್​​ ಹಾಫ್​​ಸೆಂಚುರಿ ಬಾರಿಸಿದ್ರು. ಪರಿಣಾಮ ಆಫ್ರಿಕಾ ತಂಡ 50 ಓವರ್​​ಗಳಲ್ಲಿ 4 ವಿಕೆಟ್​ಗೆ 357 ರನ್​ ಕಲೆ ಹಾಕ್ತು.

ಕಿವೀಸ್ ವಿರುದ್ಧ ಆಫ್ರಿಕಾಗೆ 190 ರನ್​ಗಳ ಬಿಗ್ ವಿಕ್ಟರಿ

ಬಿಗ್ ಟಾರ್ಗೆಟ್​ ಬೆನ್ನಟ್ಟಿದ ಕಿವೀಸ್​​​​​​​​ ತಂಡ ಆಫ್ರಿಕಾದ ಡೆಡ್ಲಿ ದಾಳಿಗೆ ಬೆಚ್ಚಿ ಬಿತ್ತು. ಘಟಾನುಘಟಿ ಬ್ಯಾಟ್ಸ್​​ಮನ್​ಗಳಿದ್ರೂ ಪ್ರಯೋಜನಕ್ಕೆ ಬರ್ಲಿಲ್ಲ. ಕಾನ್ವೆ, ಯಂಗ್​​, ರಚಿನ್​ ರವೀಂದ್ರ, ಮಿಚೆಲ್​​​, ಲಾಥಮ್​​​​​​ ನಂತ ಪ್ಲೇಯರ್ಸ್​ ಕೈಕೊಟ್ರು. ಕೊನೆಯಲ್ಲಿ ಗ್ಲೆನ್​​ ಫಿಲೆಪ್ಸ್​​​​​ 60 ರನ್​ ಗಳಿಸಿದ್ರೂ ವ್ಯರ್ಥವಾಯ್ತು. ಫೈನಲಿ ಕಿವೀಸ್​ ತಂಡ 167ಕ್ಕೆ ಆಲೌಟಾಯ್ತು. ಆಫ್ರಿಕಾ ತಂಡ 190 ರನ್​ಗಳ ಪ್ರಚಂಡ ಗೆಲುವು ದಾಖಲಿಸ್ತು. ಈ ಮೂಲಕ ಒನ್ಡೆ ವಿಶ್ವಕಪ್​​ನಲ್ಲಿ ಆಫ್ರಿಕಾ ತಂಡ ಕಿವೀಸ್ ವಿರುದ್ಧ 20 ವರ್ಷಗಳ ಬಳಿಕ ಗೆದ್ದು 4 ವಿಶ್ವಕಪ್​​ ಸೋಲಿನ ರಿವೆಂಜ್ ತೀರಿಸಿಕೊಳ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

20 ವರ್ಷಗಳ ಬಳಿಕ ಕಿವೀಸ್​ ಮಣಿಸಿದ ಹರಿಣಗಳ ಪಡೆ; 190 ರನ್​​ಗಳ ಐತಿಹಾಸಿಕ ಗೆಲುವು

https://newsfirstlive.com/wp-content/uploads/2023/11/NZ-vs-SA.jpg

Load More