‘ವಿ’ ಫಾರ್ ವಿಕ್ಟರ್, V3 ದಾಳಿಗೆ ಎದುರಾಳಿಗಳು ಢರ್
ಈ ತ್ರಿಮೂರ್ತಿಗಳಿಂದ ಸುಲಭವಾಗಿ ಒಲಿಯುತ್ತೆ ವಿಕ್ಟರಿ
ದೇಶಿ ಕ್ರಿಕೆಟ್ನಲ್ಲಿ ಈ ತ್ರಿವಳಿಗಳು ತಂಡದಲ್ಲಿದ್ರೆ ಸಾಕು
‘ವಿ’ ಫಾರ್ ವಿಕ್ಟರ್. ಈ ಮೂರು ಅಕ್ಷರದ ವಿಕ್ಟರಿ ಬೇಕು ಅಂದ್ರೆ ಈ ವಿ3 ತಂಡದಲ್ಲಿ ಇರಲೇಬೇಕು. ಈ ತ್ರಿಮೂರ್ತಿಗಳು ತಂಡದಲ್ಲಿದ್ರೆ ಗೆಲ್ಲೋದೇನು ಮಹಾ ಕಷ್ಟವೇನಲ್ಲ. ಹೌದು, ಪ್ರತಿ ಟೀಮ್ ಅಂಗಳದ ಮಹಾ ಕಾಳಗಕ್ಕೆ ಇಳಿಯೋದೇ ವಿಕ್ಟರಿಗಾಗಿ.
ಈ ವಿಕ್ಟರಿಗಾಗಿ ತಂಡಗಳು ಇನ್ನಿಲ್ಲದ ಕಸರತ್ತನ್ನೇ ನಡೆಸುತ್ವೆ. ಆದ್ರೆ ದೇಶಿ ಕ್ರಿಕೆಟ್ನಲ್ಲಿ ಈ ತ್ರಿವಳಿಗಳು ತಂಡದಲ್ಲಿದ್ರೆ ಸಾಕು.
ಗೆಲ್ಲೋದು ಅಸಾಧ್ಯದ ಮಾತೇ ಅಲ್ಲ. ಎಂತಹ ಘಟಾನುಘಟಿಗಳು ಕ್ರೀಸ್ನಲ್ಲಿದ್ರೂ, ಚಳ್ಳೆ ಹಣ್ಣು ತಿನ್ನಿಸೋ ಇವರಿಗೆ ಗೆಲುವು ಸುಲಭದ ತುತ್ತಾಗಿ ಮಾರ್ಪಟ್ಟಿದೆ. ಈ ವಿಕ್ಟರಿಯನ್ನು ಸುಲಭವಾಗಿ ನೀಡೋದೇ ವಿ3 ಗ್ಯಾಂಗ್. ಅಂದ್ಹಾಗೆ ಈ ವಿ3 ಗ್ಯಾಂಗ್ ಬೇಱರೂ ಅಲ್ಲ. ಕರ್ನಾಟಕದ ವೇಗಿಗಳಾದ ವಿದ್ವತ್.. ವೈಶಾಕ್.. ವಾಸುಕಿ ಕೌಶಿಕ್.
ಉದಯೋನ್ಮುಕ ವೇಗಿಗಳಾದ ಈ ಮೂವರೇ ವಿ3.. ದೇಶಿ ಕ್ರಿಕೆಟ್ನಲ್ಲಿ ದಿನದಿಂದ ದಿನಕ್ಕೆ ಡೇಂಜರಸ್ ಬೌಲರ್ಗಳಾಗಿ ಕಾಣುತ್ತಿರುವ ಇವರು, ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನವಾಗ್ತಿದ್ದಾರೆ. ಮಿಸೈನ್ಗಳಂತೆ ಎದುರಾಳಿ ಮೇಲೆ ಅಟ್ಯಾಕ್ ಮಾಡ್ತಿರೋ ಇವರು, ಡೆಡ್ಲಿ ಕಾಂಬಿನೇಷನ್ ಆಗಿ ದೇಶಿ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸ್ತಿದ್ದಾರೆ. ತಂಡದ ನಾಯಕನ ಕೆಲಸವನ್ನೇ ಸುಲಭವಾಗಿಸ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ದೇವದರ್ ಆ್ಯಂಡ್ ದುಲೀಪ್ ಟ್ರೋಫಿ..
ದೇವಧರ್ ಟ್ರೋಫಿಯಲ್ಲಿ ವಿ3 ದಾಳಿಗೆ ಎದುರಾಳಿ ಢರ್
ದೇವಧರ್ ಟ್ರೋಫಿ 4 ವರ್ಷಗಳ ಬಳಿಕ ಆಯೋಜಿಸಿರುವ ಪ್ರತಿಷ್ಠಾತ್ಮಕ ಟೂರ್ನಿ. ಸೌತ್ ಜೋನ್ ತಂಡದಲ್ಲಿ ಸ್ಥಾನ ಪಡೆದಿರೋ ಈ ಕರ್ನಾಟಕದ ಸೀಮರ್ಸ್, ನಾರ್ಥ್ ಜೋನ್ ಎದುರಿನ ಫಸ್ಟ್ ಮ್ಯಾಚ್ನಲ್ಲೇ ಧೂಳ್ ಎಬ್ಬಿಸಿದ್ರು. ವಿದ್ವತ್ ಉರಿದಾಳಿಗೆ ನಾರ್ಥ್ ಜೋನ್ ಉಡೀಸ್ ಆಗಿತ್ತು. ಈ ಪಂದ್ಯದಲ್ಲಿ 6 ಓವರ್ ಎಸೆದಿದ್ದ ವಿದ್ವತ್, 1 ಓವರ್ ಮೆಡನ್ ಸಹಿತ 5 ವಿಕೆಟ್ ಬೇಟೆಯಾಡಿದ್ರು.
ವಿದ್ವತ್ಗೆ ಸಾಥ್ ನೀಡಿದ ವೈಶಾಕ್, 2 ವಿಕೆಟ್ ಬೇಟೆಯಾಡಿದ್ರೆ, ವಾಸುಕಿ ಕೌಶಿಕ್ 5 ಓವರ್ಗಳಿಂದ 11 ರನ್ ನೀಡಿ 1 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ರು. ಈ ಡೆಡ್ಲಿ ಕಾಂಬಿನೇಷನ್ಗೆ ನಾರ್ಥ್ ಜೋನ್ ಜಸ್ಟ್ 60 ರನ್ಗಳಿಗೆ ಚಟ್ಟ ಕಟ್ಟಿತ್ತು.
ದುಲೀಪ್ ಟ್ರೋಫಿ ಫೈನಲ್ನಲ್ಲೂ ಇವರದ್ದೇ ಆರ್ಭಟ
ಸದ್ಯ ನಡೆದ ದೇವಧರ್ ಟ್ರೋಫಿಯಲ್ಲಿ ಮಾತ್ರವಲ್ಲ. ಇತ್ತಿಚೆಗೆ ಮುಕ್ತಾಯಗೊಂಡ ದುಲೀಪ್ ಟ್ರೋಫಿಯಲ್ಲೂ ಮ್ಯಾಜಿಕ್ ಮಾಡಿದ್ರು. ಈ ಮೂವರ ಅಟ್ಯಾಕಿಂಗ್ ಸ್ಪೆಲ್ಗೆ ವೆಸ್ಟ್ ಝೋನ್ನಲ್ಲಿದ್ದ ಪೃಥ್ವಿ ಶಾ, ಪ್ರಿಯಾಂಕ್ ಪಾಂಚಲ್, ಚೇತೇಶ್ವರ್ ಪೂಜಾರ, ಸೂರ್ಯಕುಮಾರ್ ಯಾದವ್, ದೇಶಿ ಕ್ರಿಕೆಟ್ನ ಬ್ರಾಡ್ಮನ್ ಖ್ಯಾತಿಯ ಸರ್ಫರಾಜ್ ಸಹಿತ ಹಲ್ಲಿಲ್ಲದ ಹಾವಿನಂತಾಗಿದ್ದರು.
ಇಲ್ಲೂ ಕೂಡ ನಡೆದಿದ್ದೂ ವಿ3 ಆಟವೇ ಅನ್ನೋದನ್ನು ಮರೆಯುವಂತಿಲ್ಲ. ವಿದ್ವತ್ ಕಾವೇರಪ್ಪ ಎರಡು ಇನ್ನಿಂಗ್ಸ್ಗಳಿಂದ ಒಟ್ಟು 8 ವಿಕೆಟ್ ಉರುಳಿಸಿದ್ರೆ, ವಾಸುಕಿ ಕೌಶಿಕ್ 5 ವಿಕೆಟ್ ಬೇಟೆಯಾಡಿದರು. ಈ ಇಬ್ಬರಿಗೆ ಉತ್ತಮ ಸಾಥ್ ನೀಡಿದ್ದ ವೈಶಾಕ್ 3 ವಿಕೆಟ್ ಉರುಳಿಸಿ ಫೈನಲ್ ಗೆಲುವಿನಲ್ಲಿ ಮೇನ್ ರೋಲ್ ಪ್ಲೇ ಮಾಡಿದ್ರು. ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನವನ್ನೇ ನೀಡಿದ್ರು.
ದುಲೀಪ್ ಟ್ರೋಫಿಯಲ್ಲಿ ಪ್ರದರ್ಶನ
ದುಲೀಪ್ ಟ್ರೋಫಿಯಲ್ಲಿ ವಿದ್ವತ್, 4 ಇನ್ನಿಂಗ್ಸ್ಗಳಿಂದ 15 ವಿಕೆಟ್ ಉರುಳಿಸಿದ್ರೆ, ವೈಶಾಕ್ 9 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಾಸುಕಿ 5 ವಿಕೆಟ್ ಬೇಟೆಯಾಡಿದರು.
ದಕ್ಷಿಣ ಭಾರತದ ಡೆಡ್ಲಿ ಪೇಸರ್ಗಳು ಈ ವಿ3
ದಕ್ಷಿಣ ಭಾರತ ಎಂದಾಕ್ಷಣ ನೆನಪಿಗೆ ಬರೋದು ಸ್ಪಿನ್ನರ್ಗಳ ಪ್ರಾಬಲ್ಯ. ಆದ್ರೆ ಈ ಲೆಕ್ಕಚಾರವನ್ನು ದೇಶಿ ಕ್ರಿಕೆಟ್ನಲ್ಲಿ ಉಲ್ಟಾ ಮಾಡ್ತಿರೋದು ವಿದ್ವತ್. ವೈಶಾಕ್.. ವಾಸುಕಿ ಕೌಶಿಕ್.. ರೆಡ್ ಬಾಲ್ ಆ್ಯಂಡ್ ವೈಟ್ ಬಾಲ್ನಲ್ಲಿ ಶೈನ್ ಆಗ್ತಿದ್ದಾರೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಮೋಸ್ಟ್ ಸಕ್ಸಸ್ಫುಲ್ ಬೌಲರ್ಗಳಾಗಿ ಕಾಣಿಸಿಕೊಳ್ಳುತ್ತ ಸೆಲೆಕ್ಷನ್ ಕಮಿಟಿ ಗಮನ ಕೂಡ ಸೆಳೆದಿದ್ದಾರೆ. ಈಗಾಗಲೇ ಟೀಮ್ ಇಂಡಿಯಾ ಬಾಗಿಲು ಬಡೆಯುತ್ತಿರುವ ಈ ಕನ್ನಡಿಗರು, ಇದೇ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಾ ಮುಂದೆ ಸಾಗಿದ್ರೆ, ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಎಂಟ್ರಿಯಂತೂ ಗ್ಯಾರಂಟಿ.
ಒಟ್ನಲ್ಲಿ.. ಸಿಕ್ಕ ಸಿಕ್ಕ ಚಾನ್ಸ್ನ ಸದ್ಭಳಕೆ ಮಾಡಿಕೊಳ್ಳುತ್ತ ಟೀಮ್ ಇಂಡಿಯಾ ಎಂಟ್ರಿಯ ಶಪಥ ಮಾಡಿರೋ ಇವರು, ಅದಷ್ಟು ಬೇಗ ಟೀಮ್ ಇಂಡಿಯಾ ಸೇರಲಿ ಅನ್ನೋದೇ ನಮ್ಮಲ್ಲರ ಆಶಯ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್