newsfirstkannada.com

WATCH: ಮನೆಗಳ ಮೇಲೆ ಕುಸಿದ ದೊಡ್ಡ ಬೆಟ್ಟ; ಪ್ರವಾಹ, ಭೂಕುಸಿತಕ್ಕೆ ತತ್ತರಿಸಿದ ದಕ್ಷಿಣ ಕೊರಿಯಾದಲ್ಲಿ ಭೀಕರ ದೃಶ್ಯ

Share :

16-07-2023

    ಮಳೆಯಿಂದ 200 ರಸ್ತೆಗಳನ್ನು ಬಂದ್​ ಮಾಡಿದ ಸರ್ಕಾರ

    ಆರಾಮಾಗಿ ಮನೆಯಲ್ಲಿದ್ದವರ ಮೇಲೆ ಬಿತ್ತು ಬೆಟ್ಟದ ಮಣ್ಣು

    ಸಂಪೂರ್ಣ ಕತ್ತಲಲ್ಲಿ ಮುಳುಗಿದ 25 ಸಾವಿರ ಮನೆಗಳು

ಸಿಯೋಲ್: ಭೀಕರ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ 26 ಜನರು ಮೃತಪಟ್ಟು, 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕೊರಿಯಾದ ಮಧ್ಯ, ಆಗ್ನೇಯ ಭಾಗಗಳಲ್ಲಿ ನಡೆದಿದೆ. ಈ ಬಗ್ಗೆ ಅಲ್ಲಿನ ಆಂತರಿಕ ಮತ್ತು ಸುರಕ್ಷತೆ ಸಚಿವಾಲಯ ಮಾಹಿತಿ ನೀಡಿದೆ.

ಭಾರೀ ಮಳೆಯಿಂದ ದಕ್ಷಿಣ ಕೊರಿಯಾ ತತ್ತರಿಸಿ ಹೋಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿವರೆಗೆ ದೇಶದಲ್ಲಿ 26 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದರಲ್ಲಿ ಶನಿವಾರ ಬೆಳಗ್ಗೆ ಎತ್ತರ ಪ್ರದೇಶದಿಂದ ಮಣ್ಣು ಭಾರೀ ಪ್ರಮಾಣದಲ್ಲಿ ಕುಸಿದು ಮನೆಗಳ ಮೇಲೆ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವರುಣಾರ್ಭಟದಿಂದ ಪ್ರವಾಹ ಉಂಟಾಗಿ 10 ಜನರು ಕಾಣೆಯಾಗಿದ್ದಾರೆ.

ಜುಲೈ 9 ರಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಅಲ್ಲಿನ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೀಗಾಗಿ ಸರ್ಕಾರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 20 ವಿಮಾನಗಳ ಹಾರಾಟ ಕ್ಯಾನ್ಸಲ್ ಮಾಡಲಾಗಿದ್ದು 200 ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇಲ್ಲಿವರೆಗೆ 5,570 ಸಂತ್ರಸ್ಥರಿಗೆ ಆಶ್ರಯ ಕಲ್ಪಿಸಲಾಗಿದ್ದು ಸುಮಾರು 25,470 ಮನೆಗಳ ವಿದ್ಯುತ್​ ಸಂಪರ್ಕವನ್ನು ಕೆಲ ದಿನಗಳಿಂದ ಕಡಿತಗೊಳಿಸಲಾಗಿದೆ. ನಿನ್ನೆ 4,200 ಸಂತ್ರಸ್ಥರಿಗೆ ತಾತ್ಕಾಲಿಕ ಶೆಡ್​ಗಳನ್ನು ನಿರ್ಮಾಣ ಮಾಡಿ ಕೊಡಲಾಗಿದೆ ಎಂದು ದಕ್ಷಿಣ ಕೊರಿಯಾ ಸರ್ಕಾರ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಮನೆಗಳ ಮೇಲೆ ಕುಸಿದ ದೊಡ್ಡ ಬೆಟ್ಟ; ಪ್ರವಾಹ, ಭೂಕುಸಿತಕ್ಕೆ ತತ್ತರಿಸಿದ ದಕ್ಷಿಣ ಕೊರಿಯಾದಲ್ಲಿ ಭೀಕರ ದೃಶ್ಯ

https://newsfirstlive.com/wp-content/uploads/2023/07/SOUTH_KOREA_RAIN_1.jpg

Load More