ಪ್ರಿಯಕರನಿಗಾಗಿ ಕೊರಿಯಾದಿಂದ ಬಂದ ಪ್ರಿಯತಮೆ
ಭಾರತೀಯ ಸಂಸ್ಕೃತಿಯಂತೆ ಪ್ರಿಯಕರನನ್ನು ವರಿಸಿದ ಯುವತಿ
ಇದು ಇಂಡಿಯಾ-ಕೊರಿಯನ್ ಕ್ಯೂಟ್ ಮ್ಯಾರೇಜ್ ಸ್ಟೋರಿ
ಇತ್ತೀಚೆಗೆ ವಿದೇಶದಿಂದ ಭಾರತಕ್ಕೆ, ಸ್ವದೇಶದಿಂದ ವಿದೇಶಕ್ಕೆ ಓಡಿ ಹೋಗುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿವೆ. ಕೆಲವೊಂದು ಪ್ರಕರಣ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಹುಟ್ಟುಹಾಕಿದ್ದು ಇದೆ. ಆದರೆ ಇಲ್ಲೊಬ್ಬಳು ಪ್ರಿಯತಮೆ ತನ್ನ ಪ್ರಿಯಕರನಿಗಾಗಿ ಕೊರಿಯಾದಿಂದ ಬಂದಿದ್ದಾಳೆ ಎಂದರೆ ನಂಬ್ತೀರಾ?.
ಉತ್ತರಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗೆಳೆಯನಿಗಾಗಿ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದ ಯುವತಿ, ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಸುಖ್‌ಜಿತ್ ಸಿಂಗ್ 4 ವರ್ಷಗಳ ಹಿಂದೆ ಉದ್ಯೋಗ ಅರಸಿ ದಕ್ಷಿಣ ಕೊರಿಯಾಕ್ಕೆ ತೆರಳಿದ್ದರು. ಆಗ ಕಾಫಿ ಶಾಪ್ನಲ್ಲಿ ಕೆಲಸ ಮಾಡುವಾಗ ಕಿಂಮ್ ಬೋಹ್ ನಿ ಪರಿಚಯವಾಯ್ತು, ಇಬ್ಬರ ಮಧ್ಯೆ ಪ್ರೀತಿ ಅರಳಿತ್ತು. 6 ತಿಂಗಳ ಹಿಂದೆ ಸುಖಜಿತ್ ಭಾರತಕ್ಕೆ ಮರಳಿದ್ದರೂ ಇಬ್ಬರ ಮಧ್ಯೆ ಸಂಪರ್ಕವಿತ್ತು. ಹಾಗೂ ಮದುವೆ ಆಗಲು ನಿರ್ಧರಿಸಿದ್ದರು. ಅದರಂತೆ ಗೆಳೆಯನನ್ನು ಅರಸಿ ಬಂದವಳು ಈಗ ಮದುವೆಯಾಗಿದ್ದಾಳೆ.
ಸದ್ಯ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ಇವರಿಬ್ಬರ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕಾಮೆಂಟ್ ಬರೆಯುವ ಮೂಲಕ ಶುಭಾಶಯ ಕೋರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ