newsfirstkannada.com

ಬಿತ್ತಿದ್ದು ಬೀಟ್​ರೂಟ್ ಬಂದಿದ್ದು ಮೂಲಂಗಿ.. ಕಂಗಾಲಾದ ರೈತ, ಇದೆಂಥಾ ಅಚ್ಚರಿ!

Share :

Published September 17, 2023 at 1:39pm

Update September 17, 2023 at 1:51pm

    ಒಂದೂವರೆ ಎಕರೆ ಜಮೀನಿನಲ್ಲಿ ಬೀಟ್​ರೂಟ್​ ಬಿತ್ತನೆ ಮಾಡಿದ್ದ ರೈತ

    ಕಳಪೆ ಬೀಜ ಬಿತ್ತನೆಯಿಂದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ ರೈತ

    ಆಗ್ರೋ ಸೆಂಟರ್​ನಿಂದ ಬಿತ್ತನೆ ಬೀಜ ಖರೀದಿ.. ಮೋಸ ಹೋದ ಕೃಷಿಕ

ಚಾಮರಾಜನಗರ: ರೈತನೋರ್ವ ಕಳಪೆ ಬಿತ್ತನೆ ಬೀಜದಿಂದ ಕಂಗಾಲಾಗಿದ್ದಾನೆ. ಬೀಟ್ರೂಟ್ ಬೆಳೆ ಬೆಳೆಯಲು ಬೀಜ ಬಿತ್ತನೆ ಮಾಡಿದ್ದಾನೆ. ಆದರೆ ಮೂಲಂಗಿ ರೀತಿಯಲ್ಲಿ ಬೀಟ್​ರೂಟ್​ ಬೆಳೆದಿದ್ದು, ಇದರಿಂದ ನೊಂದಿದ್ದಾನೆ.

ಹನೂರು ತಾಲ್ಲೂಕು ಬಿ.ಜಿ. ದೊಡ್ಡಿ ಗ್ರಾಮದ ಈ ಘಟನೆ ನಡೆದಿದೆ. ರೈತ ಷಡಕ್ಷರಿ ಎಂಬಾತ ಮೋಸ ಹೋಗಿದ್ದಾನೆ. ಒಂದೂವರೆ ಎಕರೆ ಜಮೀನಿನಲ್ಲಿ ಬೀಟ್​ರೂಟ್​ ಬಿತ್ತನೆ ಮಾಡಿದ್ದು, ಮೂಲಂಗಿ ರೀತಿ ಬೀಟ್ರೂಟ್ ಬೆಳೆ ಬಂದಿದ್ದನ್ನು ಕಂಡು ಅಚ್ಚರಿಗೊಂಡಿದ್ದಾನೆ.

ರೈತ ಷಡಕ್ಷರಿ ಒಡೆಯರಪಾಳ್ಯ ಗ್ರಾಮದ ನಾಗಜ್ಯೋತಿ ಆಗ್ರೋ ಸೆಂಟರ್ ನಲ್ಲಿ 9,800 ರೂಪಾಯಿ ಕೊಟ್ಟು ಸಾಕಾಟಾ ಎಂಬ ಕಂಪನಿಯ ಬೀಟ್​ರೂಟ್​ ಬೀಜ ಖರೀದಿಸಿದ್ದ. ಆದರೆ ಕಳಪೆ ಬೀಜ ಬಿತ್ತನೆಯಿಂದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ.

ರೈತ ಷಡಕ್ಷರಿ ಈ ಬಗ್ಗೆ ದೂರು ನೀಡಿದರೂ ಸಹ ಕಂಪನಿ ಮಾತ್ರ ಪರಿಹಾರ ನೀಡಿಲ್ಲ. ಮತ್ತೊಂದೆಡೆ ಕಳಪೆ ಬೀಜದಿಂದ ರೈತನ ಬದುಕು ಮೂರಾಬಟ್ಟೆಯಾಗಿದ್ದು, ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ನಷ್ಟ ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿತ್ತಿದ್ದು ಬೀಟ್​ರೂಟ್ ಬಂದಿದ್ದು ಮೂಲಂಗಿ.. ಕಂಗಾಲಾದ ರೈತ, ಇದೆಂಥಾ ಅಚ್ಚರಿ!

https://newsfirstlive.com/wp-content/uploads/2023/09/Beetroot.jpg

Load More