ಮಹಾಮಂಡಲೇಶ್ವರ ಸ್ವಾಮಿ ವೈರಾಗ್ಯಾನಂದ ಗಿರಿ ಅಲಿಯಾಸ್ ಮಿರ್ಚಿ ಬಾಬಾ
ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ವಿಶೇಷ ಯಜ್ಞ ಮಾಡಿ ಸುದ್ದಿಯಾಗಿದ್ದರು
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಸ್ವಕ್ಷೇತ್ರ ಬುಧ್ನಿ
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಕದನ ಕಣ ರಂಗೇರಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನ ಸೋಲಿಸಲು ಸಮಾಜವಾದಿ ಪಕ್ಷ ಪ್ರಬಲ ಎದುರಾಳಿಯನ್ನು ಕಣಕ್ಕಿಳಿಸಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭದ್ರಕೋಟೆಯಾದ ಬುಧ್ನಿ ವಿಧಾನಸಭಾ ಕ್ಷೇತ್ರದಲ್ಲಿ ಮಹಾಮಂಡಲೇಶ್ವರ ಸ್ವಾಮಿ ವೈರಾಗ್ಯಾನಂದ ಗಿರಿ ಅಲಿಯಾಸ್ ಮಿರ್ಚಿ ಬಾಬಾ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಮಿರ್ಚಿ ಬಾಬಾ ಅವರ ಸ್ಪರ್ಧೆಯಿಂದ ಬುಧ್ನಿ ಅಸೆಂಬ್ಲಿ ಕ್ಷೇತ್ರದ ಜಿದ್ದಾಜಿದ್ದಿ ಕುತೂಹಲ ಕೆರಳಿಸಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಸ್ವಕ್ಷೇತ್ರ ಬುಧ್ನಿ. ಇಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಚೌಹಾಣ್ ಅವರು ಸತತ 17 ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ. ಬುಧ್ನಿ ಮತದಾರರಿಗೆ ಸೋಲಿಲ್ಲದ ಸರದಾರ ಅನ್ನಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್ ಈ ಬಾರಿ ಅಗ್ನಿ ಪರೀಕ್ಷೆಗೆ ಗುರಿಯಾಗಿದ್ದಾರೆ. ಮುಖ್ಯಮಂತ್ರಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಸಮಾಜವಾದಿ ಪಕ್ಷ ವಿವಾದಿತ ಸ್ವಾಮೀಜಿ ವೈರಾಗ್ಯಾನಂದ ಗಿರಿ ಅಲಿಯಾಸ್ ಮಿರ್ಚಿ ಬಾಬಾ ಅವರನ್ನು ಕಣಕ್ಕಿಣಿಸಿದೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ ಇದೆ. ಸಮಾಜವಾದಿ ಪಕ್ಷ ಇಬ್ಬರ ಜಗಳದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸೋ ಲೆಕ್ಕಾಚಾರದಲ್ಲಿದೆ. ಸದ್ಯ 35 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರೋ ಸಮಾಜವಾದಿ ಪಕ್ಷ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸೋಲಿನ ರುಚಿ ತೋರಿಸೋ ವಿಶ್ವಾಸದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ವಯಂ ಘೋಷಿತ ಮಿರ್ಚಿ ಬಾಬಾ ಮೋಡಿ ಮಾಡೋದು ಪಕ್ಕಾ ಎನ್ನಲಾಗಿದೆ.
ಯಾರು ಈ ಮಿರ್ಚಿ ಬಾಬಾ? ಇವರ ಟ್ರ್ಯಾಕ್ ರೆಕಾರ್ಡ್ ಏನು?
ಬುಧ್ನಿ ವಿಧಾನಸಭಾ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷ ಮಹಾಮಂಡಲೇಶ್ವರ ಸ್ವಾಮಿ ವೈರಾಗ್ಯಾನಂದ ಗಿರಿ ಅಲಿಯಾಸ್ ಮಿರ್ಚಿ ಬಾಬಾ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಎಸ್‌ಪಿ ಘೋಷಿಸಿರೋ ಅಭ್ಯರ್ಥಿಯ ಟ್ರ್ಯಾಕ್ ರೆಕಾರ್ಡ್ ನಿಜಕ್ಕೂ ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದ ಮಿರ್ಚಿ ಬಾಬಾ ಮಹತ್ವದ ಚರ್ಚೆ ನಡೆಸಿದ್ದರು.
ಸ್ವಯಂಘೋಷಿತ ಮಹಾಮಂಡಲೇಶ್ವರ ಸ್ವಾಮಿ ವೈರಾಗ್ಯಾನಂದ ಅವರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ವಿಶೇಷ ಯಜ್ಞ ಮಾಡಿದ್ದರು. ಇದಾದ ಬಳಿಕ ಅಂದಿನ ಕಮಲನಾಥ್ ಸರ್ಕಾರ ಸಾರ್ವಜನಿಕ ವಲಯದ ನಿಗಮದ ಅಧ್ಯಕ್ಷ ಸ್ಥಾನ ನೀಡಿತ್ತು. ಇದು ರಾಜ್ಯ ಸಚಿವ ದರ್ಜೆಯ ಸ್ಥಾನಮಾನವಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.
ಸಾಕಷ್ಟು ಸುದ್ದಿಯಾಗಿದ್ದ ವಿವಾದಿತ ಮಿರ್ಚಿ ಬಾಬಾ ಅವರು ಅತ್ಯಾಚಾರ ಪ್ರಕರಣ ಒಂದರಲ್ಲಿ ಅಪರಾಧಿಯಾಗಿದ್ದರು. ರೇಪ್ ಕೇಸ್‌ನಲ್ಲಿ 13 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ್ದು ಮತ್ತೆ ಸುದ್ದಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ರಾಮಾಯಣ ಧಾರಾವಾಹಿಯಲ್ಲಿ ಹನುಮನ ಪಾತ್ರದಲ್ಲಿ ಅಭಿನಯಿಸಿದ್ದ ವಿಕ್ರಮ್ ಮಸ್ತಲ್ ಅವರು ಸ್ಪರ್ಧಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 17ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮೆಗಾ ಫಲಿತಾಂಶ ಹೊರಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ