newsfirstkannada.com

ರಣಭೀಕರ ಮಳೆಗೆ ಅಮೆರಿಕ, ಯುರೋಪ್​​ ತತ್ತರ; ಎಲ್ಲೆಲ್ಲಿ ಏನಾಯ್ತು..?

Share :

05-09-2023

    ಪ್ರವಾಹದ ಪ್ರತಾಪಕ್ಕೆ ಯುರೋಪ್​ನ ಪರಿಸ್ಥಿತಿ ಅಯೋಮಯ

    ಉತ್ಸವಕ್ಕೆ ಬಂದು ಕೆಸರಿನಲ್ಲಿ ಸಿಲುಕಿದ ಸಾವಿರಾರು ವಾಹನಗಳು

    ಪ್ರವಾಹದಲ್ಲಿ ಮುಳುಗಿದ ರೆಸಾರ್ಟ್​​ಗಳ ನಗರಿ ಲಾಸ್​ ವೇಗಾಸ್!

ಒಂದು ಕಡೆ ಬರಗಾಲ. ಮತ್ತೊಂದೆಡೆ ಕಾಳ್ಗಿಚ್ಚು. ಇನ್ನೊಂದೆಡೆ ಪ್ರವಾಹ ಮಳೆ. ಇವೆಲ್ಲಾ ಪ್ರಕೃತಿ ಮುನಿದ್ರೆ ಏನಾಗುತ್ತೆ ಅನ್ನೋದಕ್ಕೆ ಉದಾಹರಣೆ. ಸದ್ಯಕ್ಕೆ ಈ ಮಾತು ಅಮೆರಿಕ ಹಾಗೂ ಯುರೋಪ್​ಗೆ ಅನ್ವಯಿಸುತ್ತಿದೆ. ಲಾಸ್​ ವೇಗಾಸ್ ಹಾಗೂ ಸ್ಪೇನ್​​ನಲ್ಲಿ ವರುಣ ಅಬ್ಬರಿಸಿ ಅವಾಂತರ ಸೃಷ್ಟಿಸಿದ್ದಾನೆ.

ರಣಭೀಕರ ಪ್ರವಾಹ ಮಳೆಗೆ ಅಮೆರಿಕದ ಲಾಸ್​ ವೇಗಾಸ್ ತತ್ತರಿಸಿದೆ. ನೆವಾಡಾ ರಾಜ್ಯದ ದೊಡ್ಡ ಜನಸಂಖ್ಯಾ ನಗರಿ ಎನಿಸಿದ್ದು ನೈಋತ್ಯ ಅಮೆರಿಕದಲ್ಲೇ 2ನೇ ದೊಡ್ಡ ನಗರಿ ಹಾಗೂ ರೆಸಾರ್ಟ್​​ಗಳ ನಗರಿ ಅಕ್ಷರಶಃ ಮಳೆ, ಪ್ರವಾಹ ನಗರಿಯಾಗಿದೆ. ಕಳೆದೊಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ವರುಣ ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾನೆ.

ವರುಣನ ಚೆಲ್ಲಾಟ.. ನಿವಾಸಿಗಳಿಗೆ ಪರದಾಟ!

ಲಾಸ್​ ವೇಗಾಸ್ ಸಿಟಿಗೆ ವರುಣ ದಿಗ್ಬಂಧನ ವಿಧಿಸಿದ್ದಾನೆ. ರಸ್ತೆಗಳಲ್ಲಿ ನದಿಯಂತೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ವಾಹನಗಳು ಆಟಿಕೆಗಳಂತೆ ತೇಲುತ್ತಿವೆ. ರಣಪ್ರವಾಹಕ್ಕೆ ಸಿಕ್ಕಸಿಕ್ಕ ವಸ್ತುಗಳನ್ನು ಕೊಚ್ಚಿಕೊಂಡು ಹೋಗ್ತಿದೆ. ಕೆಲವೆಡೆ ಮುಳುಗಿದ ರಸ್ತೆಗಳಲ್ಲಿ ಚಲಿಸಲಾರದೇ ವಾಹನ ಸವಾರರು ಪರದಾಟ ನಡೆಸಿದ್ದಾರೆ. ತಗ್ಗುಪ್ರದೇಶದ ಮನೆಗಳು, ಕಟ್ಟಡಗಳು ಜಲಗರ್ಭ ಸೇರಿವೆ. ನಿವಾಸಿಗಳು ಮನೆಗಳಿಂದ ಹೊರಬಾರದಂತದ ಸ್ಥಿತಿ ನಿರ್ಮಾಣ ಆಗಿದೆ.

ಉತ್ಸವಕ್ಕೆ ಬಂದು ಕೆಸರಿನಲ್ಲಿ ಸಿಲುಕಿದ ಸಾವಿರಾರು ವಾಹನಗಳು!

ಇನ್ನು, ನೆವಾಡದಲ್ಲಿ ನಡೆಯುತ್ತಿರುವ ಬರ್ನಿಂಗ್​​ಮ್ಯಾನ್ ಉತ್ಸವಕ್ಕೆ ವರುಣ ಕಂಟಕನಾಗಿ ಕಾಡಿದ್ದಾನೆ. ಉತ್ಸವ ನೋಡಲು ಬಂದಿದ್ದ 70 ಸಾವಿರಕ್ಕೂ ವಾಹನಗಳು ಕೆಸರಿನಲ್ಲಿ ಸಿಲುಕಿವೆ. ಮುಂದಕ್ಕೆ ಚಲಿಸಲಾಗದೇ ನಿಂತಲ್ಲೇ ನಿಂತಿವೆ.

ಪ್ರವಾಹದ ಪ್ರತಾಪಕ್ಕೆ ಪರಿಸ್ಥಿತಿ ಅಯೋಮಯ!

ಇತ್ತ, ಯುರೋಪ್​ನ ಸ್ಪೇನ್​ನಾದ್ಯಂತ ವರುಣ ಅಬ್ಬರಿಸ್ತಿದ್ದು ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾನೆ. ರಾಜಧಾನಿ ಮ್ಯಾಡ್ರಿಡ್ ಸೇರಿದಂತೆ ಹಲವೆಡೆ ಪ್ರವಾಹ ಮಳೆಯಾಗ್ತಿದ್ದು ಜನ ತತ್ತರಿಸಿದ್ದಾರೆ. ಪ್ರವಾಹ ಇಡೀ ನಗರಗಳನ್ನು ಆವರಿಸಿದೆ. ಸಮುದ್ರದ ಅಲೆಗಳು ಆರ್ಭಟಿಸುತ್ತಿವೆ. ತೀರ ಪ್ರದೇಶಗಳು ಜಲಸಮಾಧಿಯಾಗಿವೆ. ಎಲ್ಲಿ ನೋಡಿದ್ರೂ ನೀರೇ ಕಾಣಿಸ್ತಿದೆ. ಇನ್ನು ನದಿಗಳು ಉಕ್ಕಿ ಹರಿಯುತ್ತಿದ್ದು ಸ್ಪೇನ್​ನ ಸಾಂಟಾ ಬಾರ್ಬರಾ ಸೇರಿದಂತೆ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದು, ಸಿಕ್ಕ ಸಿಕ್ಕ ವಸ್ತುಗಳು ಕೊಚ್ಚಿಕೊಂಡು ಹೋಗಿದೆ.

ಪ್ರವಾಹದಲ್ಲಿ ಕಾರುಗಳು ತೇಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮನೆಗಳ ಸುತ್ತಮುತ್ತ ಪ್ರವಾಹ ಭೋರ್ಗರೆಯುತ್ತಿದ್ದು ಜನ ಮನೆಯಿಂದ ಹೊರಬರಲು ಭಯಬೀಳುತ್ತಿದ್ದಾರೆ. ಕಾರು, ಜೀಪ್ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಸಿಲುಕಿದ್ದು ಮಾಲೀಕರು ಪರದಾಡುವಂತಾಗಿದೆ. ಅತಿ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿಗೆ ಸಿಕ್ಕ ವಸ್ತುಗಳು ತರಗೆಲೆಗಳಂತಾಗಿವೆ. ಮ್ಯಾಡ್ರಿಡ್​ನ ಮೆಟ್ರೋ ನಿಲ್ದಾಣ ಕೂಡ ಜಲಮಯ ಆಗಿದ್ದು ಪ್ರಯಾಣಿಕರು ಪರದಾಟ ನಡೆಸಿದ್ದರು.

ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರ ರಕ್ಷಣಾ ಕಾರ್ಯ!

ಇನ್ನು ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಸ್ಪೇನ್​ನ ಎಲ್ಲೆಡೆ ಭರದಿಂದ ಸಾಗುತ್ತಿದೆ. ಪ್ರವಾಹದಲ್ಲಿ ಚಲಿಸಲಾರದೇ ನಿಂತಿದ್ದ ಕಾರು ಚಾಲಕರನ್ನು ರಕ್ಷಣಾಪಡೆಗಳು ರಕ್ಷಿಸಿದ ದೃಶ್ಯ ಕಂಡು ಬಂತು. ದಾಖಲೆ ಮಳೆ ಪ್ರವಾಹಕ್ಕೆ ಸ್ಪೇನ್​​ನ ಪ್ರಮುಖ ನಗರಗಳೇ ಜಲಾವೃತವಾಗಿವೆ. ಇದೇ ರೀತಿ ವರುಣಪ್ರತಾಪ ಮುಂದುವರಿದ್ರೆ ಪರಿಸ್ಥಿತಿ ಮತ್ತಷ್ಟು ಭೀಕರ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಣಭೀಕರ ಮಳೆಗೆ ಅಮೆರಿಕ, ಯುರೋಪ್​​ ತತ್ತರ; ಎಲ್ಲೆಲ್ಲಿ ಏನಾಯ್ತು..?

https://newsfirstlive.com/wp-content/uploads/2023/09/spain-4.jpg

Load More