newsfirstkannada.com

Watch: ಸ್ಪೇನ್​​ನಲ್ಲಿ ಮಹಾ ಪ್ರವಾಹ.. ಜನರ ಉಸಿರುಗಟ್ಟಿಸಿದ ಭಯಂಕರ ಮಳೆ..!

Share :

16-09-2023

    ಸ್ಪೇನ್​ಗೆ ಅಪ್ಪಳಿಸಿದ ಭಯಂಕರ ಚಂಡಮಾರುತ

    ಭಾರೀ ಮಳೆಯಿಂದಾಗಿ ಮ್ಯಾಡ್ರಿಡ್‌ನಲ್ಲಿ ಪ್ರವಾಹ

    ಮಲಗಾದ ಸಿಯೆರಾ ಡಿ ಯೆಗುವಾಸ್‌ನಲ್ಲಿ ಜಲದಿಗ್ಭಂದನ

ಅತೀ ಭೀಕರ.. ಅತೀ ಭಯಂಕರ.. ಅತೀ ಆತಂಕದಲ್ಲಿ ಸ್ಪೇನ್​ ದೇಶದ ಜನ ನಿದ್ದೆಗೆಟ್ಟು ಕೂರುವಂತಾಗಿದೆ. ಇದಕ್ಕೆಲ್ಲಾ ಕಾರಣ ಮಳೆ ಮಳೆಯ ಅಬ್ಬರ ಸ್ಪೇನ್​ ಜನರ ಉಸಿರುಗಟ್ಟಿಸ್ತಿದೆ. ತೀವ್ರವಾದ ಚಂಡಮಾರುತವು ಸ್ಪೇನ್​ನ ಮ್ಯಾಡ್ರಿಡ್‌ ಪ್ರದೇಶಕ್ಕೆ ಅಪ್ಪಳಿಸಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. M-40 ರಸ್ತೆ ಮಾರ್ಗವನ್ನು ಭಾಗಶಃ ಮುಚ್ಚಲಾಯಿತು. ಮೆಟ್ರೋ ಸೇವೆಯು ಬಹು ಮಾರ್ಗಗಳಲ್ಲಿ ಅಡಚಣೆಯಾಯಿತು. ಮ್ಯಾಡ್ರಿಡ್‌ನ ಈಶಾನ್ಯದಲ್ಲಿರುವ ಅಲ್ಕಾಲಾ ಡಿ ಹೆನಾರೆಸ್‌ನಲ್ಲಿರುವ A-2 ಹೆದ್ದಾರಿ ಮತ್ತು ಲಾ ಗರೆನಾ ರೈಲು ನಿಲ್ದಾಣದಲ್ಲಿ ಸಹ ಪ್ರವಾಹ ಸ್ಥಿತಿ ತಲುಪಿದೆ.

ಮಂಜನಾರೆಸ್ ಎಲ್ ರಿಯಲ್‌ನಲ್ಲಿ ವಿನಾಶಕಾರಿ ಮಳೆ

ಸ್ಪೇನ್ ದೇಶದ ಮ್ಯಾಡ್ರಿಡ್​ ಭಾಗದ ಮಝನಾರೆಸ್​ ಎಲ್​ ರಿಯಲ್​ನಲ್ಲಿ ವಿನಾಶಕಾರಿ ಪ್ರವಾಹಗಳು ಸೇಷ್ಟಿಯಾಗಿದೆ.. ಇದರಿಂದ ಜನ ತತ್ತರಿಸಿದ್ದಾರೆ. ಅಪಾರ್ಟ್​ಮೆಂಟ್​ನ ಪಾಕಿಂಗ್​ ಲಾಟ್​ಗಳಿಗೆ ಮಳೆ ನೀರು ನುಗ್ಗಿ ಅವಾಂತರಗಳನ್ನೇ ಸೃಷ್ಟಿಸಿದೆ. ಮನೆಗಳಿಂದ ಹೊರ ಬರಲಾಗದೇ ಮನೆಯಿಂದಲೇ ಸಾರ್ವಜನಿಕರೊಬ್ಬರು ಪ್ರವಾಹದ ವಿಡಿಯೋ ಮಾಡಿದ್ದಾರೆ.

ಸ್ಪೇನ್‌ನ ಪೂರ್ವಕ್ಕೆ ಅಪ್ಪಳಿಸಿದ ಭಾರೀ ಚಂಡಮಾರುತಗಳು

ಸ್ಪೇನ್‌ನ ಪೂರ್ವಕ್ಕೆ ಭಾರಿ ಚಂಡಮಾರುತಗಳು ಅಪ್ಪಳಿಸಿದ್ದು, ರಸ್ತೆ ಮೇಲೆ ಹರಿಯುತ್ತಿರುವ ಮಳೆ ನೀರಿನ ರಭಸಕ್ಕೆ ಕೆಫೆಗಳಲ್ಲಿನ ಚೇರ್​ಗಳು, ಟೇಬಲ್​ಗಳು ಕೊಚ್ಚಿ ಹೋಗಿವೆ. ಸ್ಪೇನ್‌ನ ಮಲಗಾ ಪ್ರಾಂತ್ಯದ ಸಿಯೆರಾ ಡಿ ಯೆಗುವಾಸ್‌ನಲ್ಲಿ ಸುಮಾರು 1 ಅಡಿಯಷ್ಟು ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ್ದಾರೆ.

ಕೆರೆಯಂತಾದ ಕ್ಯಾಟಲೋನಿಯಾದಲ್ಲಿ ಎಲ್’ಅಂಪೊಲ್ಲಾ

ಸ್ಪೇನ್‌ನ ಕ್ಯಾಟಲೋನಿಯಾದಲ್ಲಿ ಎಲ್’ಅಂಪೊಲ್ಲಾ ರಸ್ತೆಗಳು ಕಾಣದಂತಾಗಿದ್ದು, ಅಕ್ಷರಶಃ ನಗರ ನೋಡಲು ಕೆರೆಯಂತೆ ಕಾಣ್ತಿದೆ. ಮ್ಯಾಡ್ರಿಡ್ ರಸ್ತೆ ಮಾರ್ಗಗಳು ಮತ್ತು ಸುರಂಗಮಾರ್ಗಗಳನ್ನು ಫ್ಲಾಷ್ ಪ್ರವಾಹಗಳು ಪಾರ್ಶ್ವವಾಯುವಿಗೆ ಪರಿಸ್ಥಿತಿ ತಂದಿದ್ದು, ಸಂಪೂರ್ಣ ಜಲಾವೇತವಾಗಿದೆ. ಕಾರಿನಲ್ಲಿದ್ದ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಸಿಲುಕಿ ಹಿಂದಕ್ಕೂ ಹೋಗಕ್ಕೆ ಆಗದೆ.. ಮುಂದಕ್ಕೂ ಬರಲಾಗದೆ.. ಪರದಾಡಿದ ದೃಶ್ಯಗಳು ಸೆರೆ ಸಿಕ್ಕಿವೆ.

ಐದಾರು ಅಡಿಗಳಷ್ಟು ನಿಂತ ನೀರು, ತೇಲಿದ ಕಾರು

ಮತ್ತೊಮ್ಮೆ ಭಾರೀ ಮಳೆಯಿಂದ ಸ್ಪೇನ್​ನ ಮ್ಯಾಡ್ರಿಡ್​ ಪ್ರಾಂತ್ಯದ ಅಲ್ಕಾಲಾ ಡಿ ಹೆನಾರೆಸ್ ಸುರಂಗವಾಗಿದಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಸುಮಾರು ಐದಾರು ಅಡಿಗಳಷ್ಟು ನೀರು ನಿಂತಿದೆ. ಆ ನಿಂತ ನೀರಲ್ಲೇ ಕಾರೊಂದು ತೇಲುತ್ತಿದೆ. ಸ್ಪೇನ್‌ನ ಮ್ಯಾಡ್ರಿಡ್‌ನ ಅಲ್ಕಾಲಾ ಡಿ ಹೆನಾರೆಸ್‌ನಲ್ಲಿರುವ ಲಾ ಗರೆನಾ ಮೆಟ್ರೋ ನಿಲ್ದಾಣ ತೀವ್ರ ಪ್ರವಾಹದ ಹೊಡೆತಕ್ಕೆ ಒಳಗಾಗಿದ್ದು, ಮಳೆ ನೀರಲ್ಲಿ ನಿಲ್ದಾಣ ಇದೆಯೋ.. ಇಲ್ಲ ನಿಲ್ದಾಣದಲ್ಲಿ ಮಳೆ ನೀರು ನುಗ್ಗಿದೆಯೋ ಅಂತ ಗೊತ್ತಾಗದಂತಾಗಿದೆ. ಒಟ್ಟಾರೆ, ಸಾವು ನೋವುಗಳ ನಡುವೆ ಸ್ಪೇನ್​ ದೇಶ ನಲುಗಿದೆ. ಇದರಿಂದ ನಮ್ಮನ್ನ ಪಾರು ಮಾಡಿ ಭಗವಂತ ಅಂತ ಸ್ಪೇನ್​ ಜನ ಆಕಾಶ ನೋಡ್ತ ಅಂಗಲಾಚುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಸ್ಪೇನ್​​ನಲ್ಲಿ ಮಹಾ ಪ್ರವಾಹ.. ಜನರ ಉಸಿರುಗಟ್ಟಿಸಿದ ಭಯಂಕರ ಮಳೆ..!

https://newsfirstlive.com/wp-content/uploads/2023/09/SPAIN-6.jpg

Load More