newsfirstkannada.com

G20 ಶೃಂಗಸಭೆಗೆ ಸ್ಪೇನ್​ ಅಧ್ಯಕ್ಷ ಗೈರು! ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡ ಪೆಡ್ರೋ ಸ್ಯಾಂಚೆಸ್; ಏನಾಯ್ತು?

Share :

08-09-2023

    ಸ್ಪೇನ್​ ಅಧ್ಯಕ್ಷ ಪೆಡ್ರೋ ಸ್ಯಾಂಚೆಸ್​ ಶೃಂಗಸಭೆಗೆ ಭಾಗಿಯಾಗುವುದಿಲ್ಲ

    ಸ್ಪೇನ್​ ಅನ್ನು ಪ್ರತಿನಿಧಿಸಲಿದ್ದಾರೆ ಉಪಾಧ್ಯಕ್ಷೆ ಮತ್ತು ವಿದೇಶಾಂಗ ಸಚಿವ

    ನಾನು ಚೆನ್ನಾಗಿದ್ದೇನೆ ಎಂದು ಟ್ವೀಟ್​ ಮಾಡಿದ ಸ್ಪೇನ್​ ಅಧ್ಯಕ್ಷ ಪೆಡ್ರೋ ಸ್ಯಾಂಚೆಸ್

ನವದೆಹಲಿ: G20 ಶೃಂಗಸಭೆಯ ಹಿನ್ನೆಲೆ ನವದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜಿ20 ಶೃಂಗಸಭೆಗೆ ವಿವಿಧ ದೇಶಗಳ ಗಣ್ಯರು ಭಾರತಕ್ಕೆ ಆಗಮನಿಸಲಿದ್ದಾರೆ. ಆದರೆ ಸ್ಪೇನ್​ ಅಧ್ಯಕ್ಷ ಪೆಡ್ರೋ ಸ್ಯಾಂಚೆಸ್​​ ಅವರು ಶೃಂಗಸಭೆಗೆ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಗುರುವಾರದಂದು ಪೆಡ್ರೋ ಸ್ಯಾಂಚೆಸ್ ಅವರು ಕೋವಿಡ್​-19 ಟೆಸ್ಟ್​ ಮಾಡಿಸಿಕೊಂಡಿದ್ದಾರೆ. ಟೆಸ್ಟ್​ ವೇಳೆ ಪಾಸಿಟಿವ್​ ಕಾಣಿಸಿಕೊಂಡಿದೆ. ಹೀಗಾಗಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಪೆಡ್ರೋ ಅವರ ಬದಲಿಗೆ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ ಸಾಂತಾಮಾರಿಯಾ ಮತ್ತು ವಿದೇಶಾಂಗ ಸಚಿವ ಜೋಸ್​​ ಮ್ಯಾನುಯೆಲ್​​ ಅಲ್ಬರೆಸ್​​ ಭಾರತಕ್ಕೆ ಬರಲಿದ್ದು, ಸ್ಪೇನ್​ ಅನ್ನು ಪ್ರತಿನಿಧಿಸಲಿದ್ದಾರೆ.

ಕೊರೊನಾ ಪಾಸಿಟಿವ್​ ಕಾಣಿಸಿಕೊಂಡ ವಿಚಾರವಾಗಿ ಸ್ಪೇನ್​ ಅಧ್ಯಕ್ಷ ‘X’ನಲ್ಲಿ ಬರೆದುಕೊಂಡಿದ್ದು, “ಈ ಮಧ್ಯಾಹ್ನ ನಾನು ಕೋವಿಡ್‌ ಪಾಸಿಟಿವ್​ ಪರೀಕ್ಷೆ ಮಾಡಿದ್ದೇನೆ ಮತ್ತು G20 ಶೃಂಗಸಭೆಗಾಗಿ ನವದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ನಾನು ಚೆನ್ನಾಗಿದ್ದೇನೆ. ಸ್ಪೇನ್ ಅನ್ನು ಉಪಾಧ್ಯಕ್ಷರು ಮತ್ತು ಆರ್ಥಿಕ ವ್ಯವಹಾರಗಳ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಶೃಂಗಸಭೆಯನ್ನು ಪ್ರತಿನಿಧಿಸುತ್ತಾರೆ’’ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

G20 ಶೃಂಗಸಭೆಗೆ ಸ್ಪೇನ್​ ಅಧ್ಯಕ್ಷ ಗೈರು! ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡ ಪೆಡ್ರೋ ಸ್ಯಾಂಚೆಸ್; ಏನಾಯ್ತು?

https://newsfirstlive.com/wp-content/uploads/2023/09/spain-Pedro-Sanchez.jpg

Load More