newsfirstkannada.com

‘ಹೋಗೋರು ಹೊರಟು ಹೋಗ್ತಾರೆ, ಇರೋರ ಕಷ್ಟ ನೋಡಕ್ಕೆ ಆಗಲ್ಲ’ -ರಾಘಣ್ಣ ಕಣ್ಣೀರು

Share :

09-08-2023

    ಬೆಳಗ್ಗೆ ಅಂತಿಮ ದರ್ಶನ ಪಡೆದ ರಾಘವೇಂದ್ರ ರಾಜ್​ಕುಮಾರ್

    ಇಂದು ಹರಿಶ್ಚಂದ್ರ ಘಾಟ್​​ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರ..!

    ಅಂತಿಮ ದರ್ಶನದ ವೇಳೆ ಕಣ್ಣೀರು ಹಾಕಿದ ಗಿರಿಜಾ ಲೋಕೇಶ್

ಸ್ಯಾಂಡಲ್​ವುಡ್​ನ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಮೃತದೇಹದ ಅಂತಿಮ ದರ್ಶನವನ್ನ ಮಲ್ಲೇಶ್ವರಂನ ನಿವಾಸದಲ್ಲಿ ಏರ್ಪಾಡು ಮಾಡಲಾಗಿದೆ. ಈಗಾಗಲೇ ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಹಿರಿಯ ನಟ ಶ್ರೀನಾಥ್, ಗಿರಿಜಾ ಲೋಕೇಶ್ ಹಾಗೂ ನಟ ರಾಘವೇಂದ್ರ ರಾಜ್​ಕುಮಾರ್ ಅವರು ಅಂತಿಮ ದರ್ಶನ ಪಡೆಯುವ ವೇಳೆ ಕಂಬನಿ ಮಿಡಿದರು.

ಈ ಬಗ್ಗೆ ಮಾತನಾಡಿದ ನಟ ರಾಘವೇಂದ್ರ ರಾಜ್​ಕುಮಾರ್, ಕೆಲವೊಂದು ಸಮಯದಲ್ಲಿ ಎಲ್ಲ ಸ್ತಬ್ಧವಾಗಿಬಿಡುತ್ತೆ. ಇದಕ್ಕೆ ಏನು ಮಾತನಾಡಬೇಕೆಂದು ಗೊತ್ತಾಗಲ್ಲ. ಹೋಗುವವರು ಹೊರಟು ಹೋಗ್ತಾರೆ. ಇರೋರ ಕಷ್ಟ ನೋಡೋಕೆ ಆಗಲ್ಲ. ಸ್ಪಂದನಾ ಇನ್ನಿಲ್ಲವೆಂದು ತಂದೆಗೆ ಹೇಳೋದಾ, ಪತಿ ರಾಘುಗೆ ಹೋಳೋದಾ ಗೊತ್ತಾಗಲ್ಲ. ರಾಘು, ಅಪ್ಪು ಎಲ್ಲ ನಮ್ಮ ಮನೆಯಲ್ಲಿ ಬೆಳೆದವರು. ಇಂತಹ ಚಿಕ್ಕವರಿಗೆ ಹೀಗೆ ಆಗುತ್ತೆ ಎಂದರೆ ತಡೆದುಕೊಳ್ಳಲು ಆಗಲ್ಲ. ನನ್ನ ಹೆಸರೇ ಇರುವ ರಾಘುನನ್ನ ಮನೆಯಲ್ಲಿ ಸಣ್ಣರಾಘು ಎಂದರೆ, ನನ್ನನ್ನು ದೊಡ್ಡ ರಾಘು ಎಂದು ಕರೆಯುತ್ತಾರೆ. ಅವರನ್ನ ತಬ್ಬಿಕೊಂಡು ಏನು ಹೇಳಬೇಕು ಎಂದು ತೋಚಲಿಲ್ಲ ಎಂದು ರಾಘವೇಂದ್ರ ರಾಜ್​ಕುಮಾರ್​ ದುಃಖತಪ್ತರಾದರು.

ನಟಿ ಗಿರಿಜಾ ಲೋಕೇಶ್ ಮತ್ತು ಶ್ರೀನಾಥ್

ಮೃತ ಸ್ಪಂದನಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ನಟಿ ಗಿರಿಜಾ ಲೋಕೇಶ್, ಸ್ಪಂದನಾ ಅವರ ಮುಖದಲ್ಲಿದ್ದ ಕಳೆ ಒಂದಿಷ್ಟು ಮಾಸೇಯಿಲ್ಲ. ಇನ್ನು ಬದುಕೆ ಇದ್ದಾಳೆ ಅನಿಸುತ್ತೆ. ದೇವರು ಎಂತ ಕ್ರೂರಿ, ಒಂದು ಸುಂದರ ಸಂಸಾರವನ್ನು ಹಾಳು ಮಾಡಿಬಿಟ್ಟ. ನಮ್ಮಂತವರಿಗೆ ಅಂತಹ ಸಾವು ಬಂದರೇ ಮಲಗಿದ್ದಲ್ಲಿ ಸುಖವಾಗಿ ಹೋಗುತ್ತೀವೆ. ಇಷ್ಟು ಪುಟ್ಟ ಮಕ್ಕಳಿಗೆ ಹೀಗಾದರೆ ಏನು ಮಾಡುವುದು ಎಂದು ಕಣ್ಣೀರು ಹಾಕಿದರು. ಸ್ಪಂದನಾ ಅವರ ತಂದೆ, ತಾಯಿಗೆ ದೇವರು ಶಕ್ತಿ ನೀಡಲಿ. ನಮ್ಮ ರಾಘುನಾ, ಶೌರ್ಯನ ದೇವರೇ ಕಾಪಾಡಲಿ. ಇಂತಹ ಸಾವು ಯಾರಿಗೂ ಬರಬಾರದು ಎಂದರು.

ಇನ್ನು ಹಿರಿಯ ನಟ ಶ್ರೀನಾಥ್ ಮಾತನಾಡಿ, ಆ ಮಗು ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ರಾಘುಗೆ ದುಃಖ ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹೋಗೋರು ಹೊರಟು ಹೋಗ್ತಾರೆ, ಇರೋರ ಕಷ್ಟ ನೋಡಕ್ಕೆ ಆಗಲ್ಲ’ -ರಾಘಣ್ಣ ಕಣ್ಣೀರು

https://newsfirstlive.com/wp-content/uploads/2023/08/SPANDANA_DIE.jpg

Load More