newsfirstkannada.com

×

‘ದೇವರು ಈ ಕುಟುಂಬಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾನೆ..’ ಸ್ಪಂದನಾ ಅಂತಿಮ ದರ್ಶನ ಪಡೆದು ಗಣ್ಯರು ಕಂಬನಿ

Share :

Published August 9, 2023 at 9:02am

    ಸ್ಪಂದನಾ ಅಂತಿಮ ದರ್ಶನ ಪಡೆದ ಗಣ್ಯರು

    ಖಾದರ್, ಪ್ರಿಯಾಂಕ್ ಖರ್ಗೆಯಿಂದ ಅಂತಿಮ ದರ್ಶನ

    ಸ್ಪಂದನಾ ಸಾವು ಎಲ್ಲರಿಗೂ ನೋವು ತಂದಿದೆ -ಖಾದರ್

ಬೆಂಗಳೂರು: ಹಠಾತ್ ಹೃದಯಾಘಾತದಿಂದ ನಿಧನರಾಗಿರುವ ಸ್ಪಂದನಾ ಅವರ ಅಂತಿಮ ದರ್ಶನ ಮಲ್ಲೇಶ್ವರಂನಲ್ಲಿರುವ ಬಿ.ಕೆ.ಶಿವರಾಂ ನಿವಾಸದಲ್ಲಿ ನಡೆಯುತ್ತಿದೆ. ಗಣ್ಯರು, ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಸ್ಪೀಕರ್ ಯೂಟಿ ಖಾದರ್ ಸ್ಪಂದನಾರ ಅಂತಿಮ ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು. ಸ್ಪಂದನಾ ನಮಗೆಲ್ಲರಿಗೂ ಪರಿಚಿತರು. ನನ್ನ ಆತ್ಮೀಯ ಸ್ನೇಹಿತರ ಸೋದರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು. ಈ ರೀತಿಯ ಸಾವು ಎಲ್ಲರಿಗೂ ನೋವು ತಂದಿದೆ. ಸ್ಪಂದನಾ ಸಹೋದರ ರಕ್ಷಿತ್ ಅವರು ನನಗೆ ಆತ್ಮೀಯರು. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸ್ತೇನೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸ್ಪಂದನಾ ಅವರ ಸಾವು ಕುಟುಂಬಕ್ಕೆ ಮಾತ್ರ ನಷ್ಟವಲ್ಲ. ಸಾಕಷ್ಟು ಜನರ ಮೇಲೆ ಪರಿಣಾಮ ಬೀರಿದೆ. ನಾನು ವಿಜಯ್ ರಾಘವೇಂದ್ರ ಬಾಲ್ಯ ಸ್ನೇಹಿತರು. ಅವರ ಕುಟುಂಬಕ್ಕೆ ಹೇಗೆ ಸಮಾಧಾನ ಹೇಳೋದು ಗೊತ್ತಾಗುತ್ತಿಲ್ಲ. ಕಷ್ಟದ ಕಾಲದಲ್ಲಿ ಆ ಕುಟುಂಬಕ್ಕೆ ದುಃಖ‌ ಭರಿಸೋ‌ ಶಕ್ತಿ ನೀಡಲಿ.

ಸ್ಪಂದನಾ ಅವರ ವಯಸ್ಸು ಸಾಯುವ ವಯಸ್ಸಲ್ಲ. ಬೇರೆಯವರ ಸಕ್ಸಸ್​ನಲ್ಲಿ ಖುಶಿ ಪಡ್ತಿದ್ದವರು. ವಿಜಯ್ ರಾಘವೇಂದ್ರ ಅವರು ತುಂಬಾ ಮೃದುಸ್ವಭಾವದವರು. ವಿಜಿ ದಾಂಪತ್ಯ ಜೀವನದಿಂದ ಬೇರೆಯವರು ಇನ್​ಸ್ಪೈರ್ ಆಗಿದ್ದಾರೆ. ದುಖಃ ಭರಿಸೋ ಶಕ್ತಿ ಭಗವಂತ ನೀಡಲಿ. ಸ್ಪಂದನಾ‌ ನಿಧನದಿಂದ ಕುಟುಂಬಕ್ಕೆ ಅಷ್ಟೇ ನಷ್ಟ ಆಗಿಲ್ಲ. ಅವರ ಸ್ನೇಹಿತರಿಗೂ ಕೂಡ ನಷ್ಟ ಉಂಟಾಗಿದೆ. ಬಹಳ ಸ್ನೇಹಜೀವಿ ಅವರು. ವಿಜಯ್ ರಾಘವೇಂದ್ರಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.

ಇದೇ ವೇಳೆ ಕುಮಾರ್ ಬಂಗಾರಪ್ಪ ಮಾತನಾಡಿ, ದೇವರು ಈ ಕುಟುಂಬಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾನೆ. ರಾಘುಗೆ ಧೈರ್ಯ ಬಿಟ್ಟು ಬೇರೆ ಏನೂ ಹೇಳೋಕೆ ಸಾಧ್ಯ ಆಗಲ್ಲ. ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಕುಮಾರ್ ಬಂಗಾರಪ್ಪ ಕಣ್ಣೀರಿಟ್ಟರು.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ದೇವರು ಈ ಕುಟುಂಬಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾನೆ..’ ಸ್ಪಂದನಾ ಅಂತಿಮ ದರ್ಶನ ಪಡೆದು ಗಣ್ಯರು ಕಂಬನಿ

https://newsfirstlive.com/wp-content/uploads/2023/08/SPANDANA-3-1.jpg

Load More