ಸ್ಪಂದನಾ ಅಗಲಿಕೆಗೆ ಚಂದನವನದ ತಾರೆಯರ ಕಣ್ಣೀರು
‘ಸ್ಪಂದನಾಗೆ ಮಗನನ್ನ ಹೀರೋ ಮಾಡಬೇಕೆಂಬ ಕನಸು’
ಸಂತಾಪ ಸೂಚಿಸಿದ ಸ್ಯಾಂಡಲ್ವುಡ್ ನಟ-ನಟಿಯರು
ಬೆಂಗಳೂರು: ದೊಡ್ಮನೆ ಕುಟುಂಬದ ಮೇಲೆ ಅದ್ಯಾವ ಮಸಣಿ ಕಣ್ಣು ಬಿತ್ತೋ ಕುಟುಂಬ ಆಘಾತಗಳ ಮೇಲೆ ಆಘಾತಗಳನ್ನು ಎದುರಿಸುತ್ತಿದೆ. ಅಪ್ಪು ನಮ್ಮನ್ನಗಲಿ ವರ್ಷ ಕಳೆದು ಆ ನೋವಿನಿಂದ ಕುಟುಂಬ ಹೊರ ಬರುತ್ತಿರುವಾಗಲೇ ಮತ್ತೊಂದು ಶಾಕ್ ತಟ್ಟಿದೆ. ಇತ್ತ ಚಂದನವನ ಮಾತ್ರ ಒಬ್ಬರಾದ ಮೇಲೊಬ್ಬರು ತಾರೆಯರನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ.
ಅಪ್ಪು ನಮ್ಮನ್ನಗಲಿ ವರ್ಷದ ಮೇಲೇನೇ ಆಗೋಗಿದೆ. ಆ ನೋವನ್ನೇ ನಮಗಿನ್ನೂ ತಡೆಯಲು ಆಗ್ತಿಲ್ಲ. ಆ ಕಹಿ ಸತ್ಯವನ್ನ ನಮಗಿನ್ನೂ ಅರಗಿಸಿಕೊಳ್ಳಲಾಗ್ತಿಲ್ಲ. ಎಷ್ಟೇ ಹೇಳಿದ್ರೂ ಮನಸು ಒಪ್ಪಲೇ ಕೇಳ್ತಿಲ್ಲ. ಹೀಗಿರೋವಾಗ ದೊಡ್ಮನೆಗೆ ಮತ್ತೊಂದು ಆಘಾತ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಾರದ ಲೋಕಕ್ಕೆ ತೆರಳಿದ್ದಾರೆ. ಅಪ್ಪುವನ್ನು ಕಳೆದುಕೊಂಡು ಬಡವಾಗಿದ್ದ ಚಂದನವನಕ್ಕೆ ಇದೀಗ ಮತ್ತೊಂದು ಬರಸಿಡಿಲು ಅಪ್ಪಳಿಸಿದ್ದು ಚಂದನವನದ ತಾರೆಯರು ಕಂಬನಿ ಮಿಡಿದಿದ್ದಾರೆ.
ಸ್ಪಂದನಾ ಅಗಲಿಕೆ ಬಗ್ಗೆ ಲೋಕೇಶ್ ಕುಟುಂಬ ಸಂತಾಪ
ಸ್ಪಂದನಾ, ಕೇವಲ ವಿಜಯ ರಾಘವೇಂದ್ರ ಪತ್ನಿ ಮಾತ್ರವಲ್ಲದೇ ಒಬ್ಬ ನಿರ್ಮಾಪಕಿ ಕೂಡ. ಎಲ್ಲರನ್ನು ಮುದ್ದು ಮೊಗ ಹಾಗೂ ಮಕ್ಕಳಂತೆ ವಿಜಯ್ ದಂಪತಿ ನೋಡಿಕೊಳ್ತಿತ್ತು. ಇಂತ ದಂಪತಿಯನ್ನು ಕಳೆದುಕೊಂಡು ಸ್ಯಾಂಡಲ್ವುಡ್ ತಾರೆಯರು ಕಂಬನಿ ಮಿಡಿದಿದ್ದಾರೆ. ಸ್ಪಂದನಾ ಅಗಲಿಕೆಗೆ ಲೋಕೇಶ್ ಕುಟುಂಬ ಸಂತಾಪ ಸೂಚಿಸಿದೆ. ನಟ ಸೃಜನ್ ಲೋಕೇಶ್ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಭಾವುಕರಾಗಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ಸ್ಪಂದನಾ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ನೋವಾಗಿದೆ. ಹಲವು ವರ್ಷಗಳಿಂದ ನನಗೆ ತುಂಬ ಆತ್ಮೀಯರು. ತುಂಬಾ ತರ್ಲೆ ಮಾಡ್ತಾ ಎಂಜಾಯ್ ಮಾಡ್ತಾ ಇದ್ವಿ. ಸ್ಪಂದನಾ ನಿಧನ ಕೇಳಿ ತುಂಬಾ ನೋವಾಗಿದೆ ಅಂತ ಸೃಜನ್ ಹಾಗೂ ಗಿರಿಜಾ ಲೋಕೇಶ್ ಹೇಳಿದ್ದಾರೆ.
ರಾಘು ಮಗುವಿನಂತೆ, ಈ ನೋವನ್ನ ಹೇಗೆ ಸಹಿಸ್ತಾನೋ..?
ರಾಘು ಮಗುವಿನಂತೆ, ಈ ನೋವನ್ನ ಹೇಗೆ ಸಹಿಸ್ತಾನೋ ಅಂತ ನಟ ಧರ್ಮ ಸ್ಪಂದನಾ ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ದೊಡ್ಮನೆಗೆ ಯಾಕೆ ಹೀಗಾಗುತ್ತಿದೆಯೋ ಗೊತ್ತಾಗುತ್ತಿಲ್ಲ ಅಂತ ನೋವನ್ನು ತೋಡಿಕೊಂಡಿದ್ದಾರೆ.
ಸ್ಪಂದನಾ ಅಕಾಲಿಕ ಮರಣ ತುಂಬಾ ನೋವು ತಂದಿದೆ
ವಿಜಯ್ ಹಾಗೂ ಸ್ಪಂದನಾರನ್ನ ಸಣ್ಣ ಮಕಳ್ಳಿದ್ದಾಗಿನಿಂದ ನೋಡಿದ್ದೇವೆ. ಸ್ಪಂದನಾ ಅಕಾಲಿಕ ಮರಣ ತುಂಬಾ ನೋವು ತಂದಿದೆ ಅಂತ ನಿರ್ಮಾಪಕ ಲಹರಿ ವೇಲು ಭಾವುಕರಾಗಿದ್ದಾರೆ.
‘ಸ್ಪಂದನಾಗೆ ಮಗನನ್ನ ಹೀರೋ ಮಾಡಬೇಕು ಅನ್ನೋ ಕನಸಿತ್ತು’
ಇನ್ನು ಸ್ಪಂದನಾಗೆ ಮಗನನ್ನ ಹೀರೋ ಮಾಡಬೇಕು ಅನ್ನೋ ಕನಸಿತ್ತು ಅಂತ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ. ಮಗನ ಮೊದಲ ಸಿನಿಮಾವನ್ನ ರಾಘು ಡೈರೆಕ್ಷನ್ ಮಾಡೋ ಪ್ಲಾನಿತ್ತು ಅಂತ ಹೇಳಿದ್ದಾರೆ.
ಸ್ಪಂದನಾ-ವಿಜಯ್ರದ್ದು ಅಪರೂಪದ ದಾಂಪತ್ಯ
ಸ್ಪಂದನಾ ವಿಜಯ್ರದ್ದು ಅಪರೂಪದ ದಾಂಪತ್ಯ. ಇಬ್ಬರು ಪ್ರೀತಿಸಿ, ಇಷ್ಟಪಟ್ಟು ಮದುವೆಯಾಗಿದ್ರು. ಸ್ಪಂದನಾಗೆ ಸೆಲೆಬ್ರೆಟಿ ಪತ್ನಿ ಅಂತ ಯಾವುದೇ ಅಹಂ ಇರಲಿಲ್ಲ ಅಂತ ವಿಜಯ್ ರಾಘವೇಂದ್ರ ಚಿಕ್ಕಪ್ಪ ಗ್ರೀನ್ ಹೌಸ್ ವಾಸು ಭಾವುಕರಾಗಿ ನುಡಿದಿದ್ದಾರೆ.
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯ ಸ್ಪಂದಿಸೋದನ್ನ ನಿಲ್ಲಿಸಿದೆ. ಸ್ಪಂದನಾ ಮುದ್ದಿನ ಪತಿ ಹಾಗೂ ಪುತ್ರನನ್ನು ಅಗಲಿ ಮರಳಿ ಬಾರದ ಊರಿಗೆ ಪಯಣಿಸಿದ್ದಾರೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ವಿಜಯ್ ರಾಘವೇಂದ್ರ ಹಾಗೂ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ