newsfirstkannada.com

‘ವಿಧಿಯ ಆಟ ನಿಜಕ್ಕೂ ಕ್ರೂರ, ಮಿಸ್​ ಯೂ ಅಮ್ಮ..’ ಮಗನ ವಿಚಾರದಲ್ಲಿ ಸ್ಪಂದನಾಗೆ ಇತ್ತು ‘ಆ’ ದೊಡ್ಡ ಕನಸು..!

Share :

09-08-2023

  ಮಗನ ಹುಟ್ಟುಹಬ್ಬಕ್ಕೆ ಮನೆ ಕೆಲಸದವರಿಗೆಲ್ಲ ಹೊಸ ಬಟ್ಟೆ..

  ಮುರಳಿ, ಪ್ರಶಾಂತ್ ಮಕ್ಕಳಿಗೂ ಸ್ಪಂದನಾ ಅಚ್ಚುಮೆಚ್ಚು

  ಪ್ರಶಾಂತ್ ನೀಲ್​ ಮಕ್ಕಳಿಗೂ ಹೆತ್ತ ತಾಯಿಯ ಪ್ರೀತಿ ಕೊಡ್ತಿದ್ರು

ನನ್ನ ಮಗ ಶೌರ್ಯ ನಟನೆಯಲ್ಲಿ ದೊಡ್ಡ ಹೆಸರು ಮಾಡಿ ತಾತ, ತಂದೆಗೆ ಮತ್ತಷ್ಟು ಕೀರ್ತಿ ತರುತ್ತಾನೆ. ಶೌರ್ಯ, ಸ್ಟಾರ್ ಶೌರ್ಯ ಆಗ್ತಾನೆ ಅಂತಾ ಹೆಮ್ಮೆಯಿಂದ ಆಸೆಪಡ್ತಿದ್ದ ಸ್ಪಂದನಾರ ಆ ಕನಸು ನನಸಾಗುವ ಮೊದಲೇ ಉಸಿರು ಚೆಲ್ಲಿದ್ದಾರೆ. ಸ್ಪಂದನಾ ಅದೆಷ್ಟು ಹೃದಯವಂತೆ ಆಗಿದ್ರು ಅನ್ನೋದಕ್ಕೆ ಇನ್ನೂ ಒಂದು ಉದಾಹರಣೆ ಇದೆ. ಅವ್ರು ಬರೀ ತಮ್ಮ ಮಗನನ್ನ ಮಾತ್ರ ಮಗನನ್ನಾಗಿ ಕಾಣ್ತಿರಲಿಲ್ಲ. ಮೈದುನ ಶ್ರೀಮುರುಳಿ, ನಿರ್ದೇಶಕ ಪ್ರಶಾಂತ್ ನೀಲ್​ ಅವರ ಮಕ್ಕಳಿಗೂ ಹೆತ್ತ ತಾಯಿಯ ಪ್ರೀತಿ ಕೊಡ್ತಿದ್ರು.

ಮುಂದೊಂದು ದಿನ ಸ್ಯಾಂಡಲ್‌ವುಡ್‌ನಲ್ಲಿ ನನ್ನ ಮಗ ಶೌರ್ಯ ದೊಡ್ಡ ಹೀರೋ ಆಗಿ ಮಿಂಚುತ್ತಾನೆ. ಶೌರ್ಯನ ಸಿನಿಮಾ ನೋಡಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಕುಣಿದು ಕುಪ್ಪಳಿಸ್ತಾರೆ. ಶೌರ್ಯ ನಟನೆಯಲ್ಲಿ ದೊಡ್ಡ ಹೆಸರು ಮಾಡಿ ತಾತ, ತಂದೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಏರಿಸ್ತಾನೆ. ಶೌರ್ಯ, ಸ್ಟಾರ್ ಶೌರ್ಯ ಆಗ್ತಾನೆ ಎಂದು ಕನಸು ಕಂಡಿದ್ದ ಸ್ಪಂದನಾರ ಪ್ರಾಣಪಕ್ಷಿ ಹಾರಿಹೋಗಿದೆ. ಮಗನ ಬಗ್ಗೆ ಇದ್ದ ಸ್ಪಂದನಾರ ಆ ದೊಡ್ಡ ಕನಸು ನನಸಾಗುವ ಮೊದಲೇ ಉಸಿರು ಚೆಲ್ಲಿದ್ದಾರೆ.

ಸ್ಪಂದನಾ ವಿಜಯ್ ರಾಘವೇಂದ್ರ

ಸ್ಪಂದನಾ, ವಿಜಯ್​ ರಾಘವೇಂದ್ರರಿಗೆ ಪುತ್ರನೆಂದರೆ ಪ್ರಾಣ

ಅಕಾಲಿಕ ಮೃತ್ಯು ನಿಜಕ್ಕೂ ಘೋರ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರರ ಮಡದಿ ಸ್ಪಂದನಾರ ಅಕಾಲಿಕ ಸಾವು ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕೇ ಬರಸಿಡಿಲು ಬಡಿದಂತಾಗಿದೆ. ಸ್ನೇಹಿತರು, ಸಂಬಂಧಿಕರೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ, ಹೃದಯಾಘಾತಕ್ಕೆ ಒಳಗಾಗಿ ಉಸಿರುಚೆಲ್ಲಿರೋ ಸ್ಪಂದನಾರಿಗೆ ಪುತ್ರನೆಂದರೆ ಪ್ರಾಣ, ಪುತ್ರನೇ ಪ್ರಪಂಚ. ಒಂದು ದಿನದ ಮಟ್ಟಿಗೆ ಪುತ್ರನ ಮುಖ ನೋಡದಿದ್ರೂ ಸ್ಪಂದನಾ ಜೀವ ಚಡಪಡಿಸ್ತಿತ್ತು. ಅಷ್ಟೇ ಅಲ್ಲ, ಮಗನನ್ನು ಸಿನಿಮಾ ರಂಗಕ್ಕೆ ಕರೆತಂದು ದೊಡ್ಡ ಹೀರೋ ಮಾಡಬೇಕು ಎಂಬುವುದು ಸ್ಪಂದನಾರ ಆಸೆಯಾಗಿತ್ತು. ಆ ಆಸೆ, ಕನಸು ಈಡೇರುವ ಮೊದಲೇ ಸ್ಪಂದನಾ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಮಗನ ಹೀರೋ ಮಾಡಬೇಕೆಂಬ ಆಸೆ ಸ್ಪಂದನಾಗೆ ಹೆಚ್ಚಿತ್ತು

ಸ್ಟಾರ್ ಮಕ್ಕಳು ಸಿನಿಮಾಕ್ಕೆ ಬರೋದು ಮಾಮೂಲಿ. ತನ್ನಂತೆಯೇ ತನ್ನ ಮಗನೋ, ಮಗಳೋ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಬೇಕು ಅಂದುಕೊಳ್ಳೋದು ಸಹಜ. ಇಲ್ಲಿ ತನ್ನ ಮಗನನ್ನು ದೊಡ್ಡ ಹೀರೋ ಮಾಡಬೇಕು ಎಂಬ ಕನಸು, ಆಸೆ, ಹಂಬಲ ವಿಜಯ್ ರಾಘವೇಂದ್ರರಿಗಿಂತ ಹೆಚ್ಚಾಗಿ ವಿಜಯ್ ಪತ್ನಿ ಸ್ಪಂದನಾರಿಗೆ ಇತ್ತಂತೆ. ಇದೇ ಕಾರಣಕ್ಕೆ ಪುಟ್ಟ ವಯಸ್ಸಿನಿಂದ ತನ್ನ ಮಗನಿಗೆ ನಟನಾ ತರಬೇತಿ ಆರಂಭಿಸಿದ್ರಂತೆ. ಹಾಗಾಗಿ, ಖ್ಯಾತ ನಿರ್ದೇಶಕ ನಾಗಾಭರಣರ ಗರಡಿಯಲ್ಲಿ ಪುತ್ರ ಶೌರ್ಯನಿಗೆ ನಟನೆ ಕಲಿಸುತ್ತಿದ್ರಂತೆ.

ತಂದೆಯನ್ನು ಶೌರ್ಯ ಮೀರಿಸುತ್ತಾನೆಂದು ಕೊಂಡಿದ್ದ ಸ್ಪಂದನಾ

ವಿಧಿ ಎಷ್ಟು ಕ್ರೂರ ಎಂಬುದಕ್ಕೆ ಈ ಅಮ್ಮ, ಮಗನೇ ಸಾಕ್ಷಿ. ನೋಡಿ, ಕೇವಲ 14 ವರ್ಷ ವಯಸ್ಸಿನಲ್ಲೇ ಸ್ಪಂದನಾ ಮತ್ತು ವಿಜಯ್ ದಂಪತಿಯ ಪುತ್ರ ಶೌರ್ಯ ತಂದೆ ತಾಯಿಯನ್ನೂ ಮೀರಿಸುವಂತೆ ಬೆಳೆದಿದ್ದಾನೆ. ಎತ್ತರದಲ್ಲಿ ತಮ್ಮನ್ನೂ ಮೀರಿಸುವಂತೆ ಬೆಳೆದಿರೋ ಶೌರ್ಯ ಸಾಧನೆಯಲ್ಲೂ ತಂದೆಯನ್ನು ಮೀರಿಸ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಸ್ಪಂದನಾ ಇನ್ನಿಲ್ಲವಾಗಿದ್ದಾರೆ. ವಿದೇಶಿ ಪ್ರವಾಸದ ವೇಳೆ 8 ದಿನ ಪುತ್ರನಿಗಾಗಿ ಚಡಪಡಿಸುತ್ತಿದ್ದ ಸ್ಪಂದನಾರ ಹೃದಯ ತನ್ನ ಬಡಿತವನ್ನೇ ನಿಲ್ಲಿಸಿದೆ. ಶೌರ್ಯ, ಸ್ಟಾರ್ ಶೌರ್ಯ ಆಗೋದನ್ನು ಸ್ಪಂದನಾ ನೋಡಲಾಗಲೇ ಇಲ್ಲ.

ಶ್ರೀಮುರಳಿ, ನಟ

ಕಿಸ್ಮತ್ ಸಿನಿಮಾ ನಿರ್ಮಾಣ ಮಾಡಿದ್ದ ಸ್ಪಂದನಾ

ಮದುವೆಯಾದ್ಮೇಲೆ ವಿಜಯ್‌ ರಾಘವೇಂದ್ರರಂತೆ ಸ್ಪಂದನಾರಿಗೂ ಸಿನಿಮಾ ಅಂದ್ರೆ ಪ್ಯಾಷನ್ ಆಗ್ಬಿಟ್ಟಿತ್ತು. ವಿಜಯ್ ರಾಘವೇಂದ್ರ ನಟಿಸಿ, ನಿರ್ದೇಶಿಸಿದ್ದ ಕಿಸ್ಮತ್ ಹೆಸರಿನ ಚಿತ್ರವನ್ನು ಖುದ್ದು ಸ್ಪಂದನಾ ಅವರೇ ನಿರ್ಮಾಣ ಮಾಡಿದ್ರು. ರವಿಚಂದ್ರನ್‌ರ ಅಪೂರ್ವ ಚಿತ್ರದಲ್ಲಿ ಪತಿ ವಿಜಯ್ ರಾಘವೇಂದ್ರ ಜೊತೆ ನಟನೆ ಕೂಡ ಮಾಡಿದ್ರು. ಇದೆಲ್ಲಕ್ಕೂ ಹೆಚ್ಚಾಗಿ ಮಗನನ್ನು ಬೆಳ್ಳಿಪರದೆ ಮೇಲೆ ನೋಡೋದಕ್ಕೆ ಸ್ಪಂದನಾ ಚಾತಕಪಕ್ಷಿಯಂತೆ ಕಾಯ್ತಿದ್ರು. ತಾವೇ ನಿರ್ಮಾಣ ಮಾಡಿ, ಪತಿಯಿಂದಲೇ ಮಗನ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿಸೋದಕ್ಕೆ ಈಗಿನಿಂದ ತಯಾರಿ ಆರಂಭಿಸಿದ್ರು. ವಿಧಿ ಸ್ಪಂದನಾ ಜೀವನದಲ್ಲಿ ಬೇರೆಯದ್ದೇ ಆಟವಾಡಿದೆ.

ವಿದೇಶಿ ಪ್ರವಾಸಕ್ಕೆ ಹೋಗಿದ್ದ ಅಮ್ಮನ ಬರುವಿಕೆಗಾಗಿ ಕಾಯುತ್ತಿದ್ದ ಶೌರ್ಯನಿಗೆ ಒಂದೊಂದು ಗಂಟೆಯು ಒಂದೊಂದು ವರ್ಷದಂತೆ ಕಾಣ್ತಿತ್ತು. ಇನ್ನೇನು ಅಮ್ಮ ನಾಳೆ ಬಂದುಬಿಡ್ತಾರೆ ಎಂಬ ಖುಷಿಯಲ್ಲಿ ಶಾಲೆ ಹಾಗೂ ನಟನಾ ಕ್ಲಾಸ್‌ಗೆ ಹೋಗಿದ್ದ ಶೌರ್ಯ, ತಾಯಿಯನ್ನು ಮತ್ತೆಂದೂ ನೋಡಲಾರೆ ಎಂಬ ಕಹಿಸತ್ಯವನ್ನು ಅದ್ಹೇಗೆ ಸ್ವೀಕರಿಸ್ತಾನೋ ದೇವರೇ ಬಲ್ಲ.!

ಮಗನ ಬರ್ತ್‌ಡೇ ದಿನ ಅಪಾರ ಖುಷಿ, ಸಂತಸದಲ್ಲಿ ಸ್ಪಂದನಾ!

ಪ್ರತೀ ವರ್ಷವೂ ಮಗನ ಹುಟ್ಟುಹಬ್ಬ ಅರ್ಥಪೂರ್ಣವಾಗಿರಬೇಕು ಅಂತಾ ಬಯಸುತ್ತಿದ್ದ ಸ್ಪಂದನಾ, ಪುತ್ರನನ್ನ ಆದರ್ಶ ವ್ಯಕ್ತಿಯಾಗಿ ರೂಪಿಸ್ತಿದ್ರು. ತಾತ, ತಂದೆಯಂತೆಯೇ ಮಾದರಿ ಬದುಕು ಸಾಗಿಸಬೇಕು ಅಂತಾ ಶೌರ್ಯನಿಗೆ ನೀತಿಪಾಠ ಹೇಳ್ತಿದ್ರು. ವಿಶೇಷ ಏನಂದ್ರೆ ತನ್ನ ಮಗನ ಬರ್ತ್‌ಡೇ ದಿನ ಮನೆಯ ಕೆಲಸದವರಿಗೆಲ್ಲಾ ಹೊಸ ಬಟ್ಟೆಗಳನ್ನು ನೀಡುತ್ತಿದ್ರಂತೆ. ಶೌರ್ಯನನ್ನು ಶಾಲೆಗೆ ಕರೆದೊಯ್ದು ಕರೆತರ್ತಿದ್ದ ಕಾರು ಚಾಲಕ ಸ್ಪಂದನಾರ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ. ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ತಿದ್ದ ಮನೆಯೊಡತಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ ಎಂದಿದ್ದಾರೆ.

ಹೆತ್ತ ಮಕ್ಕಳಂತೆ ನೋಡಿಕೊಳ್ತಿದ್ದ ಚಿನ್ನಾರಿ ಮುತ್ತನ ಮಡದಿ!

ವಿಜಯ್ ರಾಘವೇಂದ್ರ ಮಡದಿ ಸ್ಪಂದನಾರ ಮತ್ತೊಂದು ವಿಶೇಷ ಗುಣ ಏನಂದ್ರೆ, ತನ್ನ ಮಗ ಶೌರ್ಯನಿಗೆ ಕೊಟ್ಟಷ್ಟೇ ಪ್ರೀತಿಯನ್ನ ಕುಟುಂಬದ ಭಾಗವಾಗಿದ್ದವರ ಮಕ್ಕಳಿಗೂ ಕೊಡ್ತಿದ್ರು. ಮೈದುನ ಶ್ರೀಮುರಳಿಯ ಮಕ್ಕಳು, ಪ್ರಶಾಂತ್ ನೀಲ್ ಮಕ್ಕಳನ್ನೂ ಹೆಚ್ಚಾಗಿ ಪ್ರೀತಿಸುತ್ತಿದ್ರು. ಶ್ರೀ ಮುರುಳಿ ಮನೆಗೆ ಆಗಾಗ್ಗೆ ಹೋಗಿ ಅವರ ಮಕ್ಕಳನ್ನೂ ಕರೆದುಕೊಂಡು ತನ್ನ ಮಗನೊಟ್ಟಿಗೆ ಶಾಪಿಂಗ್ ಮಾಡಿಸ್ತಿದ್ರಂತೆ.

ಹಾಲಿಡೇ, ವೀಕೆಂಡ್, ಹಬ್ಬದ ದಿನಗಳಲ್ಲಿ ಮುರಳಿ, ಪ್ರಶಾಂತ್ ನೀಲ್ ಮಕ್ಕಳಿಗೆ ಸ್ಪಂದನಾ ವಿಶೇಷ ಊಟ ಮಾಡಿ ಬಡಿಸಿ ತಾಯಿ ಮಮತೆ ತೋರುತ್ತಿದ್ರು. ಆ ಮಕ್ಕಳಿಗೆ ಹೆತ್ತ ತಾಯಿಯಂತಿದ್ದ ಸ್ಪಂದನಾ ಸಾವು ನಿಜಕ್ಕೂ ಘೋರ. ವಿಜಯ್ ರಾಘವೇಂದ್ರ ಮಡದಿ ಸ್ಪಂದನಾರ ಅಕಾಲಿಕ ಸಾವು ಮನೆ ಮಂದಿಗೆಲ್ಲಾ ಬರಸಿಡಿಲು ಬಡಿದಂತಾಗಿರುವಾಗ, ಈ ಮಕ್ಕಳ ಮುಗ್ಧ ಮನಸ್ಸುಗಳು ತಾಯಿಯ ಅಗಲಿಕೆಯ ದುಖಃವನ್ನ ಅದ್ಹೇಗೆ ಸಹಿಸಿಕೊಂಡಿವೆಯೋ.

ಸ್ಪಂದನಾ ವಿಜಯ್ ರಾಘವೇಂದ್ರ

ತಾಯಿಯ ಆ ಕನಸನ್ನು ಈಡೇರಿಸ್ತಾನಾ ಶೌರ್ಯ?

ವಿಜಯ್‌ ರಾಘವೇಂದ್ರ ಕುಟುಂಬ ತುಂಬಾ ದೊಡ್ಡದು. ಅಣ್ಣ, ತಮ್ಮ, ಅತ್ತಿಗೆ, ರಾಜ್ ಕುಟುಂಬ, ಹೀಗೆ ಸದಾ ಸಂಭ್ರಮದಲ್ಲಿ ಮುಳುಗುತ್ತಿದ್ದ ಕುಟುಂಬವದು. ಶೌರ್ಯನಿಗೂ ಎಲ್ಲರ ಪ್ರೀತಿ ದೊರಕುತ್ತಿತ್ತು. ಆದ್ರೆ, ಜಗತ್ತಿನಲ್ಲಿ ತಾಯಿ ಪ್ರೀತಿ ಮುಂದೆ ಯಾರ ಪ್ರೀತಿಯೂ ಲೆಕ್ಕಕ್ಕಿಲ್ಲ. ತಾಯಿಯ ಪ್ರೀತಿಯನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಈಗ ಅಮ್ಮನಿಲ್ಲದೆ ಶೌರ್ಯನ ಜೀವನ ಹೇಗೆ ಸಾಗುತ್ತೋ, ಆ ಮುಗ್ಧ ಜೀವ ತಾಯಿಯ ಅಗಲಿಕೆ ದುಖಃವನ್ನು ಅದ್ಹೇಗೆ ಮರೆಯುತ್ತೋ ಎಂಬುದನ್ನು ಕಲ್ಪಿಸಿಕೊಂಡರೂ ಎದೆ ನಡುಗುತ್ತೆ. ತನ್ನನ್ನು ದೊಡ್ಡ ಹೀರೋ ಮಾಡಬೇಕು ಎಂದು ಅಮ್ಮ ಕನಸು ಕಂಡಿದ್ದರು ಎಂಬ ಸಂಗತಿ ಶೌರ್ಯನಿಗೂ ತಿಳಿದಿದೆ. ಶೌರ್ಯ ತನ್ನ ನಟನೆ ಮೇಲೆ ಹೆಚ್ಚಿನ ಗಮನ ಕೊಟ್ಟು ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್ ಆಗಿ ಅಮ್ಮನ ಕನಸನ್ನು ಈಡೇರಿಸ್ತಾನೆ ನೋಡ್ತಾಯಿರಿ ಎನ್ನುತ್ತಿದ್ದಾರೆ ವಿಜಯ್ ರಾಘವೇಂದ್ರ ಕುಟುಂಬದ ಅಭಿಮಾನಿಗಳು! ವಿಧಿಯ ಆಟ ನಿಜಕ್ಕೂ ಕ್ರೂರ. ಶೌರ್ಯ ಅಮ್ಮನ ಆಸೆಯಂತೆ ದೊಡ್ಡ ನಟನಾಗಲಿ, ಕುಟುಂಬದವರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂಬುದೇ ಎಲ್ಲರ ಆಶಯ.

ಇದನ್ನೂ ಓದಿ: ಬ್ಯಾಂಕಾಕ್​ನಿಂದ ಅಮ್ಮನ ಗಿಫ್ಟ್​ಗಾಗಿ ಕಾದಿದ್ದ ಪುತ್ರ.. ಶೌರ್ಯನ ಭವಿಷ್ಯಕ್ಕಾಗಿ ಸ್ಪಂದನಾ ತಯಾರಿ ಹೇಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವಿಧಿಯ ಆಟ ನಿಜಕ್ಕೂ ಕ್ರೂರ, ಮಿಸ್​ ಯೂ ಅಮ್ಮ..’ ಮಗನ ವಿಚಾರದಲ್ಲಿ ಸ್ಪಂದನಾಗೆ ಇತ್ತು ‘ಆ’ ದೊಡ್ಡ ಕನಸು..!

https://newsfirstlive.com/wp-content/uploads/2023/08/SPANDANA-5-2.jpg

Load More