ಚಿನ್ನಾರಿ ಮುತ್ತನ ಬಾಳಲ್ಲಿ ಬಂದೆರಗಿದ ಬರಸಿಡಿಲು!
ಬ್ಯಾಂಕಾಕ್ಗೆ ಹೋಗಿದ್ದ ಸ್ಪಂದನಾ ಹಠಾತ್ ನಿಧನ
ಚಿಕ್ಕ ವಯಸ್ಸಲ್ಲೇ ಇಹಲೋಕ ತ್ಯಜಿಸಿದ ಸ್ಪಂದನಾ
ಬೆಂಗಳೂರು: ಚಿನ್ನಾರಿ ಮುತ್ತನ ಪತ್ನಿ.. ಚಿನ್ನೇಗೌಡರ ಸೊಸೆ.. ನಿವೃತ್ತ ಖಡಕ್ ಎಸಿಪಿ ಬಿ.ಕೆ ಶಿವರಾಂ ಪುತ್ರಿ ಸ್ಪಂದನಾ ಇನ್ನಿಲ್ಲ.. ಬದುಕೆಂಬ ಜಟಕಾ ಬಂಡಿ ಹತ್ತಿ ಹೊರಟಿದ್ದ ಈ ಜೋಡಿ ಜೀವನದಲ್ಲಿ ವಿಧಿ ಆಟವಾಡಿದ್ದಾನೆ. ನಿನಗಾಗಿಯೇ ಈ ಜೀವವು ಎನ್ನುತ್ತಿದ್ದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಸಣ್ಣ ವಯಸ್ಸಿಗೆ ಉಸಿರು ಚೆಲ್ಲಿದ್ದಾರೆ.
ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ
ಬ್ಯಾಂಕಾಕ್‌ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿಯಿತು. ಜೊತೆಗೆ ಪಾರ್ಥಿವ ಶರೀರವನ್ನ ಬೆಂಗಳೂರಿಗೆ ತರಲು ಕಾನೂನಾತ್ಮಕ ಪ್ರಕ್ರಿಯೆ ಕೂಡಾ ಮುಕ್ತಾಯವಾಯ್ತು. ಕೊನೆಗೂ ವಿಶೇಷ ವಿಮಾನದ ಮೂಲಕ ನಿನ್ನೆ ರಾತ್ರಿ 9.15ಕ್ಕೆ ಬ್ಯಾಂಕಾಕ್‌ನಿಂದ ಮೃತದೇಹವನ್ನ ಕುಟುಂಬಸ್ಥರು ತಂದರು. ಮಧ್ಯರಾತ್ರಿ ವೇಳೆಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರನ್ನ ತಲುಪಿದೆ.
ಸದ್ಯ ಅಂತಿಮ ದರ್ಶನಕ್ಕಾಗಿ ಮಲ್ಲೇಶ್ವರಂನ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಬೆಂಗಳೂರಿನ ಶ್ರೀರಾಂಪುರ ಬಳಿಯ ಹರಿಶ್ಚಂದ್ರಘಾಟ್‌ನಲ್ಲಿ ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತಿಮ ಸಂಸ್ಕಾರ ನಡೆಯಲಿದೆ.
ಬದುಕು ನೀರ ಮೇಲಿನ ಗುಳ್ಳೆ ಎಂಬಂತೆ ಯಾರೂ ಊಹೆಗೂ ನಿಲುಕದೇ ಸ್ಪಂದನಾ ಆತ್ಮ, ದೇಹವನ್ನ ಬಿಟ್ಟು ಬಾರದ ಲೋಕಕ್ಕೆ ಪಯಣಸಿದೆ. ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕಳೆದುಕೊಂಡು ನಟ ವಿಜಯ್ ರಾಘವೇಂದ್ರ ಆಘಾತಕ್ಕೆ ಒಳಗಾಗಿದ್ದಾರೆ. ಇನ್ನು ಮಗ ಶೌರ್ಯ ತಾಯಿ ಇಲ್ಲದ ತಬ್ಬಲಿಯಾಗಿದ್ದಾರೆ. ಇವರಿಬ್ಬರಿಗೂ, ಅವರ ಕುಟುಂಬಕ್ಕೂ ಭಗಂವತ ನೋವು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಅಂತ ಇಡೀ ಕರುನಾಡೇ ಪ್ರಾರ್ಥಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ