ಮಗನನ್ನ ತೆರೆ ಮೇಲೆ ತರುವ ಕನಸು ಕಟ್ಟಿಕೊಂಡಿದ್ದ ಸ್ಪಂದನಾ
ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೆ ಉಸಿರು ನಿಲ್ಲಿಸಿದ ಸ್ಪಂದನಾ
37 ವರ್ಷದ ಸ್ಪಂದನಾ ಸಾವಿಗೆ ಸ್ಯಾಂಡಲ್ವುಡ್ ಕಣ್ಣೀರು
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 37 ವರ್ಷ ವಯಸ್ಸಿನ ಅವರು ಮುದ್ದು ಮಗನನ್ನ ಮತ್ತು ಪತಿಯನ್ನು ಬಿಟ್ಟು ಅಗಲಿದ್ದಾರೆ. ಎಲ್ಲರಂತೆಯೇ ಸ್ಪಂದನಾಗೂ ತನ್ನ ಮಗನ ಮೇಲೆ ಸಾವಿರಾರು ಕನಸನ್ನು ಹೊತ್ತುಕೊಂಡಿದ್ದರು. ಪತಿಯಂತೆಯೇ ಆತನನ್ನು ಹೀರೋ ಮಾಡಬೇಕು ಎಂಬ ಮನದಾಸೆ ಇಟ್ಟುಕೊಂಡಿದ್ದರು. ಆದರೆ ಬ್ಯಾಂಕಾಕ್ಗೆ ಹೋಗಿದ್ದಾಗ ಲೋ ಬಿಪಿಯಾಗಿ ಸ್ಪಂದನಾ ಅಸುನೀಗಿದ್ದಾರೆ.
ನಿರ್ದೇಶಕ ಮಹೇಶ್ ಈ ಬಗ್ಗೆ ಮಾತನಾಡಿದ್ದು, ಸ್ಪಂದನಾಗೆ ತಮ್ಮ ಮಗನನ್ನ ಹೀರೋ ಮಾಡಬೇಕು ಅನ್ನೋ ಕನಸಿತ್ತು. ಮಗನ ಮೊದಲ ಸಿನಿಮಾವನ್ನ ವಿಜಯ ರಾಘವೇಂದ್ರ ಡೈರೆಕ್ಷನ್ ಮಾಡುವ ಪ್ಲಾನಿತ್ತು. ತನ್ನ ಮಗನ ರೀತಿ ಶ್ರೀಮುರಳಿ, ಪ್ರಶಾಂತ್ ನೀಲ್ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ನಾಗಾಭರಣರ ಬಳಿ ತರಬೇತಿಯನ್ನ ಪಡಿಯುತ್ತಿದ್ದ ಶೌರ್ಯ
ಚಿನ್ನೆಗೌಡ್ರು ಸೋದರ ಸಂಬಂಧಿ ಗ್ರೀನ್ ಹೌಸ್ ವಾಸು ಕೂಡ ಈ ವಿಚಾರವಾಗಿ ಮಾತನಾಡಿದ್ದು, ಸ್ಪಂದನಾ ವಿಜಯರದ್ದು ಅಪರೂಪದ ದಾಂಪತ್ಯ. ಇಬ್ಬರು ಪ್ರೀತಿಸಿ ಮದುವೆಯಾಗಿದ್ರು. ಅವರ ಮಗ ಶೌರ್ಯನ ಬಗ್ಗೆ ಸ್ಪಂದನಾ ಬಹಳ ಕನಸನ್ನ ಕಂಡಿದ್ರು. ಮಗನನ್ನ ಸಿನಿಮಾ ರಂಗಕ್ಕೆ ತರಲಿಕ್ಕೆ ಪ್ರಯತ್ನ ನಡಿತಿತ್ತು. ನಾಗಾಭರಣರ ಬಳಿ ಶೌರ್ಯ ತರಬೇತಿಯನ್ನ ಪಡಿಯುತ್ತಿದ್ದ. ಭಾನುವಾರ ಬ್ಯಾಂಕಾಕ್ ಹೋಗುವ ಮುನ್ನಾ ಸ್ಪಂದನಾರೇ ಮಗನನ್ನ ಕ್ಲಾಸ್ ನಿಂದ ಕರೆದುಕೊಂಡುಬಂದಿದ್ದರು. ಮಗನನ್ನ ಚಿನ್ನೇಗೌಡರ ಮನೆಯಲ್ಲಿ ಬಿಟ್ಟು ಅವರ ತಾಯಿಯನ್ನು ಮಾತಾಡಿಸಿಕೊಂಡು ಹೋಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಸದ್ಯ ಬ್ಯಾಂಕಾಕ್ನಲ್ಲಿ ಸ್ಪಂದನಾ ಅವರ ಪೋಸ್ಟ್ ಮಾರ್ಟ ಕೆಲಸ ಮುಗಿದಿದೆ. ಅಲ್ಲಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಸಂಜೆ ಥಾಯ್ ವಿಮಾನದ ಮೂಲಕ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸ್ಪಂದನಾ ಮೃತದೇಹ ಬರಲಿದೆ. ಇಂದಿನಿಂದ ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಹರಿಶ್ಚಂದ್ರ ಫಾಟ್ನಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ