newsfirstkannada.com

ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಬ್ಯಾಂಕಾಕ್​ನಿಂದ ಸ್ಪಂದನಾ ಪಾರ್ಥಿವ ಶರೀರ ರವಾನೆ.. ಅಂತಿಮ ದರ್ಶನಕ್ಕೆ ವ್ಯವಸ್ಥೆ ಎಲ್ಲಿ?

Share :

08-08-2023

    ಮಧ್ಯಾಹ್ನ ಸ್ಪಂದನಾ ಅವರ ಪಾರ್ಥಿವ ಶರೀರ ಹೊರಡುವ ಸಾಧ್ಯತೆ

    ಸ್ಪಂದನಾ ಅಂತಿಮ ದರ್ಶನದ ಬಗ್ಗೆ ನಡೆಯುತ್ತಿದೆ ಸಿದ್ಧತೆ

    ಬೆಂಗಳೂರಲ್ಲಿ ನಡೆಯುತ್ತಾ? ಬೆಳ್ತಂಗಡಿಯಲ್ಲಿ ನಡೆಯುತ್ತಾ ಅಂತ್ಯಕ್ರಿಯೆ?

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ (34) ಬ್ಯಾಂಕಾಕ್​ನಲ್ಲಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇವರ ಪಾರ್ಥೀವ ಶರೀರ ಇಂದು ಬೆಂಗಳೂರಿಗೆ ಆಗಮಿಸಲಿದೆ. ಆದರೆ ಬೆಂಗಳೂರಿಗೆ ಮೃತದೇಹ ತರುವುದಕ್ಕೂ ಮೊದಲು ಇಂದು ಬ್ಯಾಂಕಾಕ್​ನಲ್ಲಿ ಸಾಕಷ್ಟು ತಾಂತ್ರಿಕ ಕೆಲಸಗಳನ್ನು ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಲಿಕ್ಕಿವೆ.

ಅಂದಾಜಿನ ಮೇರೆಗೆ ಸ್ಪಂದನಾ ಅವರ ಪಾರ್ಥಿವ ಶರೀರ ಹೊರಡಲು ಮಧ್ಯಾಹ್ನ ಆಗೋ ಸಾಧ್ಯತೆ ಇದೆ. ಮಧ್ಯಾಹ್ನ 2ರ ಒಳಗೆ ಎಲ್ಲಾ‌ ಪ್ರಕ್ರಿಯೆಗಳು ಮುಗಿದರೆ, ಇಂಡಿಗೋ ಪ್ಯಾಸೆಂಜರ್ ವಿಮಾನದ ಮೂಲಕವೇ ಪಾರ್ಥಿವ ಶರೀರ ಬೆಂಗಳೂರಿಗೆ ತರಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆ ನಂತರವಾದರೆ ಥೈ ಏರ್ ಲೈನ್ಸ್ ಮೂಲಕ ಪಾರ್ಥಿವ ಶರೀರ ತರಬೇಕಾಗುತ್ತದೆ.

ಬ್ಯಾಂಕಾಕ್ ಟು ಬೆಂಗಳೂರಿಗೆ ಇಂದು ರಾತ್ರಿ 9:30 ಕ್ಕೆ ಥೈ ಏರ್​​ಲೈನ್ಸ್ ವಿಮಾನವಿದೆ. ಮಧ್ಯಾಹ್ನ ಹೊರಟರೆ ಸಂಜೆ 6ಕ್ಕೆ ಪಾರ್ಥಿವ ಶರೀರ ಬೆಂಗಳೂರು ತಲುಪಲಿದೆ. ಒಂದುವೇಳೆ ಪ್ರಕ್ರಿಯೆ‌ ತಡವಾಗಿ ರಾತ್ರಿ 9:30 ಕ್ಕೆ ಹೊರಟರೆ ಇಲ್ಲಿಗೆ ಬರಲು ಮಧ್ಯರಾತ್ರಿ ಆಗಲಿದೆ. ಸದ್ಯಕ್ಕೆ ಪಾರ್ಥಿವ ಶರೀರದ ಅಂತಿಮ ದರ್ಶನ ಎಲ್ಲಿ ಆಗಬೇಕು ಎಂಬ ಚರ್ಚೆ ನಡೆಯುತ್ತಿದೆ.

ಅಂತಿಮ ದರ್ಶನ ಎಲ್ಲಿ?

ಸ್ಪಂದನಾ ಅವರ ಅಂತಿಮ ದರ್ಶನದ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಮಲ್ಲೇಶ್ವರಂ ಗ್ರೌಂಡ್ ಅಥವಾ ಬಿಜೆಪಿ ಆಫೀಸ್ ಎದುರಿನ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ನಡೆಸಲು ಕುಟುಂಬಸ್ಥರು ಯೋಚಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ
ಎರಡರಲ್ಲಿ‌ ಒಂದು ಕಡೆ ಅಂತಿಮ ದರ್ಶನಕ್ಕೆ ಇಡಲು ಪ್ಲ್ಯಾನ್ ಮಾಡಲಾಗ್ತಿದೆ.

ಇನ್ನು ಈಡಿಗಾ ಸಮುದಾಯದ ಪ್ರಕಾರ ಅಂತ್ಯಕ್ರಿಯೆ ಆಗಲಿದೆ. ಮಗಳನ್ನು ಕಳೆದುಕೊಂಡ ಬಿ.ಕೆ.ಶಿವರಾಮ್ ಮನೆಗೆ ಇಂದು ಅನೇಕ ಗಣ್ಯರು ಮತ್ತು ಸಂಬಂಧಿಕರು ಬರೋ ಸಾಧ್ಯತೆ ಇದೆ.

ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ?

ಇನ್ನು ಸ್ಪಂದನಾ ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್​​ನಲ್ಲಿ ನಡೆಯಲಿದೆ ಎಂದು ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಬ್ಯಾಂಕಾಕ್​ನಿಂದ ಸ್ಪಂದನಾ ಪಾರ್ಥಿವ ಶರೀರ ರವಾನೆ.. ಅಂತಿಮ ದರ್ಶನಕ್ಕೆ ವ್ಯವಸ್ಥೆ ಎಲ್ಲಿ?

https://newsfirstlive.com/wp-content/uploads/2023/08/Spandana-6.jpg

Load More