ವಿವಾಹ ವಾರ್ಷಿಕೋತ್ಸವಕ್ಕೆ 19 ದಿನಗಳು ಬಾಕಿ ಇತ್ತು
ಹೃದಯಾಘಾತಕ್ಕೆ ಬಲಿಯಾದ್ರು ವಿಜಯ ರಾಘವೇಂದ್ರ ಪತ್ನಿ
ಸ್ಪಂದನಾ-ವಿಜಯ ರಾಘವೇಂದ್ರ 2007ರಲ್ಲಿ ವಿವಾಹವಾದರು
ಇನ್ನೇನು ವಿವಾಹ ವಾರ್ಷಿಕೋತ್ಸವಕ್ಕೆ 19 ದಿನಗಳು ಬಾಕಿ ಇತ್ತು. ಅಷ್ಟರಲ್ಲಾಗಲೇ ಸ್ಯಾಂಡಲ್ವುಡ್ ನಟಿ ವಿಜಯ ರಾಘವೇಂದ್ರ ಬಾಳಲ್ಲಿ ಕತ್ತಲು ಆವರಿಸಿದೆ. ಮುದ್ದಾದ ಪತ್ನಿ ಸ್ಪಂದನಾ ವಿಧಿಯ ಕ್ರೂರಲೀಲೆಗೆ ಉಸಿರು ಚೆಲ್ಲಿದ್ದಾರೆ. ಇವರ ಸಾವು ಸ್ಯಾಂಡಲ್ವುಡ್ಗೆ ಬರ ಸಿಡಿಲಿನಂತೆ ಬಡಿಸಿದೆ.
ವಿಜಯ ರಾಘವೇಂದ್ರ ಮತ್ತು ಪತ್ನಿ ಸ್ಪಂದನಾ 2007ರಲ್ಲಿ ವಿವಾಹವಾದರು. ಇದೇ ಆಗಸ್ಟ್ 26ಕ್ಕೆ ಇವರಿಬ್ಬರು ವಿವಾಹವಾಗಿ 16 ವರ್ಷ ತುಂಬಲು ಬಾಕಿ ಇತ್ತು. ಇನ್ನೇನು 19 ದಿನಗಳಲ್ಲಿ ಈ ಜೋಡಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ಬ್ಯಾಂಕಾಕ್ಗೆ ಹೋಗಿದ್ದ ಸ್ಪಂದನಾ ಹೃದಯಾಘಾತಕ್ಕೆ ನಿಧನರಾಗಿದ್ದಾರೆ.
ಸ್ಪಂದನಾ ಕುಟುಂಬ
ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ. ಇವರ ಸಹೋದರ ಸಹೋದರ ರಕ್ಷಿತ್ ಶಿವರಾಂ, ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ನಿಂದ ರಕ್ಷಿತ್ ಶಿವರಾಂ ಸ್ಪರ್ಧಿಸಿದ್ದರು.
ಸ್ಪಂದನಾ 2007ರಲ್ಲಿ ವಿಜಯ ರಾಘವೇಂದ್ರ ಅವರನ್ನು ವಿವಾಹವಾದರು. ಇವರಿಗೆ ಶೌರ್ಯ ಎಂಬ ಮಗನಿದ್ದಾನೆ. ಇನ್ನು ಸ್ಪಂದನಾ ಮಾವ ಚಿನ್ನೇ ಗೌಡ, ಫಿಲಂ ಚೇಂಬರ್ನ ಮಾಜಿ ಅಧ್ಯಕ್ಷರಾಗಿದ್ದರು. ಇವರ ಭಾವ ಶ್ರೀಮುರಳಿ ಕೂಡ ನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹೃದಯಾಘಾತಕ್ಕೆ ಇನ್ನೆಷ್ಟು ಬಲಿ?
ಹೃದಯಾಘಾತ ಎಂಬ ಮಾರಕಕ್ಕೆ ಅನೇಕ ಜೀವಗಳು ಬಲಿಯಾಗುತ್ತಿವೆ. ಖ್ಯಾತ ಸ್ಯಾಂಡಲ್ವುಡ್ ನಟ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಬಲಿಯಾದರು. ಈಗ ವಿಜಯ ರಾಘವೇಂದ್ರ ಅವರ ಪತ್ನಿ ಕೂಡ ನಿಧನರಾಗಿದ್ದಾರೆ. ಅನೇಕ ತಾರೆಯರು ಇವರ ಸಾವಿಗೆ ಕಂಬನಿ ಸುರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ