newsfirstkannada.com

VIDEO: ಸ್ಪಂದನಾ ಅಂತಿಮ ದರ್ಶನ.. ಮಗ ಶೌರ್ಯನನ್ನು ತಬ್ಬಿ ಸಂತೈಸಿದ ವಿಜಯ ರಾಘವೇಂದ್ರ, ಶ್ರೀಮುರುಳಿ

Share :

09-08-2023

  ಅಮ್ಮನ ಪಾರ್ಥಿವ ಶರೀರದ ಎದುರು ‘ಶೌರ್ಯ’ ಕಣ್ಣೀರು

  ಶೌರ್ಯ ಅವರನ್ನ ತಬ್ಬಿಕೊಂಡ ಸಂತೈಸಿದ ಶ್ರೀಮುರುಳಿ

  ಮಧ್ಯಾಹ್ನ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಕ್ರಿಯೆ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕಾಕ್‌ನಲ್ಲಿ ಸಾವನ್ನಪ್ಪಿದ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಇಂದು ಮಧ್ಯಾಹ್ನ ಸ್ಪಂದನಾ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಕುಟುಂಬಸ್ಥರು, ಗಣ್ಯರು, ಸ್ಯಾಂಡಲ್‌ವುಡ್‌ ತಾರೆಯರು, ಸಾರ್ವಜನಿಕರು, ಸ್ಪಂದನಾ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿ.ಕೆ ಶಿವರಾಮ್ ಅವರ ನಿವಾಸದ ಮುಂದೆ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದು ಬಂದಿದೆ.

ಇಂದು ಬೆಳಗ್ಗೆ ಸ್ಪಂದನಾ ಅಂತಿಮ ದರ್ಶನ ಪಡೆಯಲು ಅವರ ಮಗ ಶೌರ್ಯ ಆಗಮಿಸಿದ್ದು ಅಮ್ಮ ಶವದ ಪೆಟ್ಟಿಗೆಯಲ್ಲಿ ಮಲಗಿರುವುದನ್ನು ನೋಡಿ ದಿಗ್ಭ್ರಾಂತರಾಗಿದ್ದಾರೆ. ಅಮ್ಮನ ಪಾರ್ಥಿವ ಶರೀರದ ಮುಂದೆ ಕೆಲ ಹೊತ್ತು ಕೂತಿದ್ದ ಶೌರ್ಯ ಅವರು ಶೋಕ ಸಾಗರದಲ್ಲಿ ಮುಳುಗಿದ್ದರು.

ಇದನ್ನೂ ಓದಿ: ‘ವಿಧಿಯ ಆಟ ನಿಜಕ್ಕೂ ಕ್ರೂರ, ಮಿಸ್​ ಯೂ ಅಮ್ಮ..’ ಮಗನ ವಿಚಾರದಲ್ಲಿ ಸ್ಪಂದನಾಗೆ ಇತ್ತು ‘ಆ’ ದೊಡ್ಡ ಕನಸು..!

ಸ್ಪಂದನಾ ಅವರ ಪಾರ್ಥಿವ ಶರೀರ ನೋಡಿದ ಶೌರ್ಯ ಅವರನ್ನ ಮಾವ ರಕ್ಷಿತ್ ಶಿವರಾಮ್ ಸಮಾಧಾನ ಪಡಿಸಲು ಮುಂದಾದರು. ವಿಜಯ ರಾಘವೇಂದ್ರ ಅವರು ಮಗನನ್ನು ತಬ್ಬಿಕೊಂಡು ಸಂತೈಸಲು ಪ್ರಯತ್ನಿಸಿದ್ದಾರೆ. ಚಿಕ್ಕಪ್ಪ ಶ್ರೀ ಮುರುಳಿ ಕೂಡ ಶೌರ್ಯ ಅವರನ್ನ ತಬ್ಬಿಕೊಂಡು ಸಮಾಧಾನ ಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಸ್ಪಂದನಾ ಅಂತಿಮ ದರ್ಶನ.. ಮಗ ಶೌರ್ಯನನ್ನು ತಬ್ಬಿ ಸಂತೈಸಿದ ವಿಜಯ ರಾಘವೇಂದ್ರ, ಶ್ರೀಮುರುಳಿ

https://newsfirstlive.com/wp-content/uploads/2023/08/Spandana-Son-3.jpg

Load More