newsfirstkannada.com

ನೂತನ ಸಂಸತ್​ ಭವನ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ; ಈ ನಾಣ್ಯದಲ್ಲಿ ಏನೆಲ್ಲ ಇರಲಿದೆ ಗೊತ್ತಾ..?

Share :

28-05-2023

  ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ

  ನಾಣ್ಯದ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ..!

  ಎಡಭಾಗದಲ್ಲಿ ಭಾರತ್, ಬಲ ಭಾಗದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ

ಇಂದು ನೂತನ ಸಂಸತ್​ ಭವನ ಉದ್ಘಾಟನೆ ಆಗಲಿದೆ. ಇದರ ಸ್ಮರಣಾರ್ಥ 75 ರೂಪಾಯಿಯ ವಿಶೇಷ ನಾಣ್ಯವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವ ಸೂಚಕವಾಗಿರಲಿದೆ ಎಂದು ಹೇಳಿದ್ದಾರೆ.

75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಣ್ಯವನ್ನು ಇಂದು ಅನಾವರಣಗೊಳಿಸಲಿದ್ದಾರೆ.

₹75 ರೂ ನಾಣ್ಯದ ವಿಶೇಷತೆ

 • ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ
 • ನಾಣ್ಯದ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ..!
 • ಎಡಭಾಗದಲ್ಲಿ ಭಾರತ್, ಬಲ ಭಾಗದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ
 • ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂಪಾಯಿ ಚಿಹ್ನೆ
 • ₹75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿದು ಬಂದಿದೆ
 • ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್​ ಸಂಕೀರ್ಣದ ಫೋಟೋ ಇರಲಿದೆ

ಇದಲ್ಲದೆ ನಾಣ್ಯದ ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಸಂಸದ್​ ಸಂಕುಲ್​ ಎಂದು ಹಾಗೂ ಕೆಳಗಿನ ಪರಿಧಿಯಲ್ಲಿ ಪಾರ್ಲಿಮೆಂಟ್​ ಕಾಂಪ್ಲೆಕ್ಸ್​ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿರುತ್ತದೆ. ಈ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದಲ್ಲಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕ ಲೋಹಗಳ ಮಿಶ್ರಣದಿಂದ 35 ಗ್ರಾಂ ತೂಕದ ನಾಣ್ಯವನ್ನು ತಯಾರಿಸಲಾಗುತ್ತದೆ.

ಹೀಗೆ ಹಲವು ರಹಸ್ಯಗಳನ್ನ ಹೊಂದಿರುವ ಸಂಸತ್ ಭವನ ಭಾನುವಾರದಂದು ಲೋಕಾರ್ಪಣೆಗೊಳ್ಳಲಿದ್ದು, ಇತಿಹಾಸದ ಪುಟ ಸೇರಲಿದೆ. ಐತಿಹಾಸಿಕ ಕ್ಷಣಕ್ಕೆ ಹಲವು ಗಣ್ಯರು ಸಾಕ್ಷಿಯಾಗಲಿದ್ದು, ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಹೊಳಪು ತುಂಬಲಿದೆ.

ಸ್ವಾತಂತ್ರ್ಯ ಸಿಕ್ಕ ಆ ಕ್ಷಣದಿಂದ ಹಿಡಿದು , ಹಲವು ಕಾಯ್ದೆ, ಕಾನೂನುಗಳನ್ನ ರೂಪಿಸಲು ಸಾಕ್ಷಿಯಾಗಿರುವ ಈಗಿನ ಸಂಸತ್ ಭವನ ಇನ್ನೂ ಕೆಲ ದಿನದಲ್ಲಿಯೇ ಚರಿತ್ರೆಯ ಪುಟ ಸೇರಲಿದೆ. ಈಗಿನ ಸಂಸತ್​ ಭವನ ಮ್ಯೂಸಿಯಂ ಆಗಿ ಮಾರ್ಪಾಡುಗೊಳ್ಳಲಿದೆ. ಹಲವು ರಹಸ್ಯಗಳಿಗೆ, ಗೌರವಕ್ಕೆ ಸಾಕ್ಷಿಯಾಗಲಿರುವ ನಮ್ಮ ಸಂಸತ್ ನಮ್ಮ ಹೆಮ್ಮೆಯಾಗಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂತನ ಸಂಸತ್​ ಭವನ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ; ಈ ನಾಣ್ಯದಲ್ಲಿ ಏನೆಲ್ಲ ಇರಲಿದೆ ಗೊತ್ತಾ..?

https://newsfirstlive.com/wp-content/uploads/2023/05/COIN-1-1.jpg

Load More