ಈ ಬೆಂಗಳೂರಲ್ಲಿ ಎಂತೆಂಥ ಜನ ಇದ್ದಾರೋ..!
ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಯಲು..!
ಮಲ್ಲೇಶ್ವರಂ ಠಾಣೆಯಲ್ಲಿ ಅಪರೂಪದ ಪ್ರಸಂಗ
ಬೆಂಗಳೂರು: ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪತ್ನಿ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳ್ಳಿ ಇವಳು..
ಸ್ನೇಹಿತನಿಂದ ಚಿನ್ನ ಕಳ್ಳತನ ಮಾಡಿಸಿದ್ದ ಖತರ್ನಾಕ್ ಲೇಡಿ ನಂತರ ಮನೆಯಲ್ಲಿದ್ದ ಚಿನ್ನ ಕಳ್ಳತನ ಆಗಿದೆ ಎಂದು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಳು. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ವಿಚಾರಣೆ ವೇಳೆ ಮಹಿಳೆಯ ಕಳ್ಳಾಟ ಬಯಲಾಗಿದ್ದು, ಮಹಿಳೆಯ ಸ್ನೇಹಿತರಾದ ಧನರಾಜ್, ರಾಕೇಶ್ ಎಂಬುವವರನ್ನು ಬಂಧಿಸಲಾಗಿದೆ.
ಪ್ಲಾನ್ ಮಾಡಿದ್ದು ಹೇಗೆ?
ಮನೆಯಲ್ಲಿ ಪತಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವಂತೆ. ಹೀಗಾಗಿ ಆತನಿಗೆ ಬುದ್ಧಿ ಕಲಿಸಬೇಕು ಅಂದುಕೊಂಡ ಪತ್ನಿ, ಸ್ನೇಹಿತರ ಜೊತೆ ಸೇರಿ ಪ್ಲಾನ್ ಮಾಡಿದ್ದಾಳೆ. ಅಂತೆಯೇ ಬ್ಯಾಂಕ್ನಿಂದ 109ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಬಂದಿದ್ದಳು. ಬ್ಯಾಂಕ್ನಿಂದ ತಂದಿದ್ದ ಆಭರಣವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟು ಸ್ನೇಹಿತನಿಗೆ ಕರೆ ಮಾಡಿದ್ದಳು. ಸ್ಕೂಟಿಯನ್ನ ಒಂದು ಸ್ಥಳದಲ್ಲಿ ನಿಲ್ಲಿಸಿ ಸ್ನೇಹಿತನಿಗೆ ಕರೆ ಮಾಡಿದ್ದಳು.
ಅಲ್ಲಿಗೆ ಬಂದಿದ್ದ ಸ್ನೇಹಿತ ಆಕೆಯ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದ. ಆನಂತರ ಚಿನ್ನ ಕಳ್ಳತನವಾಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಳು. ತನಿಖೆ ವೇಳೆ ಧನರಾಜ್ ಸ್ಕೂಟಿ ತೆಗೆದುಕೊಂಡು ಹೋಗಿರೋದು ಬೆಳಕಿಗೆ ಬಂದಿತ್ತು. ಫೋನ್ ಕರೆಗಳನ್ನು ಚೆಕ್ ಮಾಡಿದಆಗ ಖತರ್ನಾಕ್ ಪತ್ನಿಯ ಕಳ್ಳಾಟವೂ ಬಯಲಾಗಿದೆ. ನಂತರ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಗಂಡನಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ