ನಿಗಧಿಯಾಗಿದ್ದ 4 ಮಸೂದೆಗಳ ಮಂಡನೆ ಗ್ಯಾರಂಟಿ..!
ಮಹಿಳಾ ಮೀಸಲಾತಿ ಮಾಸೂದೆ ಮಂಡನೆ ನಿರೀಕ್ಷೆ
ಏಕ ಚುನಾವಣೆಗೆ ಮಸೂದೆ ಕೂಡ ಮಂಡನೆ ಸಾಧ್ಯತೆ
ಇಂದಿನಿಂದ ಐದು ದಿನಗಳವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ತುಂಬಾ ಕುತೂಹಲ ಮೂಡಿಸಿದೆ. ಮೊದಲ ದಿನವಾದ ಇಂದು, ಹಳೇ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ. ನಾಳೆ ಹಳೆಯ ಸಂಸತ್ತಿನಲ್ಲಿ ಸಂಸದರ ಫೋಟೋ ಸೆಷನ್ ನಡೆಯಲಿದ್ದು, ಬಳಿಕ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ಮುಗಿದ ಬಳಿಕ ಹೊಸ ಸಂಸತ್ತಿಗೆ ಸಂಸದರು ಪ್ರವೇಶ ಪಡೆಯಲಿದ್ದಾರೆ ಎನ್ನಲಾಗಿದೆ. ಹಳೇ ಸಂಸತ್ತಿನ ಪಯಣ, ಸಾಧನೆಗಳು, ನೆನಪು ಮತ್ತು ಕಲಿಕೆ ಕುರಿತ ಚರ್ಚೆಗಳು ನಡೆಯಲಿವೆ. ಸಂಸತ್ತಿನ 75 ವರ್ಷಗಳ ಪ್ರಯಾಣದ ಕುರಿತು ಸರ್ಕಾರ ಅಧಿವೇಶನದ ಮೊದಲ ದಿನದಂದು ಸುದೀರ್ಘ ಚರ್ಚೆ ನಡೆಯಲಿದೆ. ಇನ್ನುಳಿದಂತೆ ಬಾಕಿ 4 ದಿನಗಳಲ್ಲಿ ಕೆಲವು ಮುಖ್ಯ ಮಸೂದೆಗಳು ಮಂಡನೆ ಆಗಲಿದೆ.
ಪ್ರಮುಖ 4 ಮಸೂದೆಗಳು ಯಾವ್ಯಾವುದು..?
ಈ ಬಗ್ಗೆ ಈಗಾಗಲೇ ಸಂಸದೀಯ ವ್ಯವಹಾರಗಳ ಸಚಿವಾಲಯ ಬುಲೆಟಿನ್ ಬಿಡುಗಡೆ ಮಾಡಿದೆ. ಈ ಮಸೂದೆಗಳನ್ನ ಹೊರತುಪಡಿಸಿ ಹೊಸ ಅಚ್ಚರಿ ಮೂಡಿಸುವ ಕುತೂಹಲ ಕೂಡ ಇದೆ. ಮೋದಿ ಬತ್ತಳಿಕೆಯಲ್ಲಿ ಯಾವ ಅಸ್ತ್ರ ಇದೆ ಎಂಬ ಕುತೂಹಲ ದೇಶದ ಜನರಲ್ಲಿ ಹೆಚ್ಚಾಗಿದೆ. ಮಹಿಳಾ ಮೀಸಲು, ಏಕರೂಪ ಸಂಹಿತೆ, ಏಕ ಚುನಾವಣೆಗೆ ಮಸೂದೆ ಕೂಡ ಮಂಡನೆಯಾಗುವ ಸಾಧ್ಯತೆ ಇದೆ. ಇನ್ನು ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೊದಿ ಅವರು ವಿಶೇಷ ಕಲಾಪವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ