newsfirstkannada.com

VIDEO: ಸ್ಯಾಂಡಲ್​ವುಡ್​ ನಟಿ ನಿಶ್ವಿಕಾ ನಾಯ್ಡು ಮನೆಯಲ್ಲಿ ಪ್ರತ್ಯಕ್ಷರಾದ ವೇಣುಸ್ವಾಮಿ; ಕಾರಣವೇನು?

Share :

Published June 23, 2024 at 7:32pm

  ಸೆಲೆಬ್ರಿಟಿ ಜ್ಯೋತಿಷಿ ಅಂತಾನೇ ಸಖತ್​ ಫೇಮಸ್ ಆಗಿರುವ ವೇಣುಸ್ವಾಮಿ

  ಮುಂದಿನ ಸಿನಿಮಾ ಸಕ್ಸಸ್‌ಗಾಗಿ ಜ್ಯೋತಿಷಿ ಮೊರೆ ಹೋದ್ರಾ​ ಸ್ಟಾರ್​ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ವೇಣುಸ್ವಾಮಿ ಪೂಜೆ ವಿಡಿಯೋ

ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಫ್ಲಾಪ್ ಆಗುತ್ತೆ. ರಾಮ್‌ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗುವೇ ಆಗುತ್ತೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಗಲ್ಲ. ಅಷ್ಟೇ ಯಾಕೆ ಡಿ.ಕೆ ಶಿವಕುಮಾರ್ ಮುಂದಿನ ಕಿಂಗ್ ಮೇಕರ್ ಹೀಗೆಲ್ಲಾ ಭವಿಷ್ಯ ನುಡಿದಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ತೆಲುಗು ಸ್ಟಾರ್ಸ್ ಸಾಯ್ತಾರೆ ಎಂದ ವೇಣುಸ್ವಾಮಿ ಭವಿಷ್ಯದಿಂದ ನಡುಕ; ಹೆದರಿದ ಫೇಮಸ್ ನಟಿಯರು ಏನ್ ಮಾಡ್ತಿದ್ದಾರೆ ಗೊತ್ತಾ?

ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ನಿಧಿ ಅಗರ್ವಾಲ್ ಹೀಗೆ ಸಾಕಷ್ಟು ಸ್ಟಾರ್​ ನಟ ನಟಿಯರ ಮನೆಗಳಲ್ಲಿ ಪೂಜೆ, ಯಾಗಗಳನ್ನು ಮಾಡಿಸುತ್ತಾ ಫೇಮಸ್ ಆಗಿದ್ದಾರೆ ವೇಣು ಸ್ವಾಮಿ. ಇದೀಗ ಸಾಲಿಗೆ ಸ್ಯಾಂಡಲ್​ವುಡ್​ ನಟಿ ನಿಶ್ವಿಕಾ ನಾಯ್ಡು ಕೂಡ ಸೇರಿಕೊಂಡಿದ್ದಾರೆ. ಹೌದು, ಪಡ್ಡೆಹುಲಿ, ಜಂಟಲ್‌ಮ್ಯಾನ್, ಕರಟಕ ದಮನಕ ಸಿನಿಮಾ ನಟಿ ನಿಶ್ವಿಕಾ ನಾಯ್ಡು ಅವರು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ನಟಿ ನಿಶ್ವಿಕಾ ನಾಯ್ಡು ಅವರು ವೇಣು ಸ್ವಾಮಿ ಬಳಿ ಪೂಜೆ ಮಾಡುತ್ತಿರೋ ವಿಡಿಯೋವನ್ನು ಜ್ಯೋತಿಷಿ ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಸೂರ್ಯನ ರೀತಿ ರಂಗೋಲಿ, ಅದರ ಮೇಲೆ ಐದು ತೆಂಗಿನಕಾಯಿ ಕಳಶ ನಿರ್ಮಿಸಲಾಗುತ್ತದೆ. ಸುತ್ತಲೂ ಹೂಗಳಿಂದ ಅಲಂಕರಿಸಿ, ಮದ್ಯ ಮತ್ತು ಮೀನು, ಮಾಂಸವನ್ನು ಇರಿಸಿ ಯಾಗ ನೆರವೇರಿಸಲಾಗಿದೆ. ನಟಿ ನಿಶ್ವಿಕಾ ಅವರಿಂದಲೂ ಮಂತ್ರ ಪಠಣ ಮಾಡಿಸಿ, ಯಾಗದ ಮಧ್ಯಭಾಗಕ್ಕೆ ಎಡಗೈಯಿಂದ ಹೂಗಳನ್ನು ಹಾಕಿಸಿದ್ದಾರೆ. ಪೂಜೆ ಮುಗಿದ ಬಳಿಕ ಕರಟಕ ದಮನಕ ಸಿನಿಮಾದಲ್ಲಿ ಪ್ರಭುದೇವ ಅವರ ಜತೆಗೆ ನಿಶ್ವಿಕಾ ಕುಣಿದ ಹಾಡನ್ನು ವೀಕ್ಷಿಸಿದ್ದಾರೆ. ಸದ್ಯ ಕಿರುತೆರೆಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ, ನಟಿಯರು ವೇಣುಸ್ವಾಮಿ ಪೂಜಾಫಲವನ್ನ ಹೆಚ್ಚಾಗಿ ನಂಬುತ್ತಾರೆ. ಸೆಲಬ್ರಿಟಿಗಳಿಗೆ ಸಂಕಷ್ಟ ಎದುರಾದಾಗ ಅದರಿಂದ ಪಾರಾಗಲು ವೇಣುಸ್ವಾಮಿಯ ಮೊರೆ ಹೋಗುತ್ತಾರೆ. ಇದೀಗ ಸ್ಯಾಂಡಲ್​ವುಡ್​ ನಟಿ ಕೂಡ ವೇಣು ಸ್ವಾಮಿ ಅವರಿಂದ ಪೂಜೆ ಮಾಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸ್ಯಾಂಡಲ್​ವುಡ್​ ನಟಿ ನಿಶ್ವಿಕಾ ನಾಯ್ಡು ಮನೆಯಲ್ಲಿ ಪ್ರತ್ಯಕ್ಷರಾದ ವೇಣುಸ್ವಾಮಿ; ಕಾರಣವೇನು?

https://newsfirstlive.com/wp-content/uploads/2024/06/nishvika.jpg

Load More