newsfirstkannada.com

ISKCON ಬ್ರಿಡ್ಜ್​​ ಮೇಲೆ ಓವರ್​ಸ್ಪೀಡ್.. 160 ಕಿ.ಮೀ. ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಜಾಗ್ವರ್.. 9 ಸಾವು, 12 ಮಂದಿ ಗಂಭೀರ

Share :

20-07-2023

  ಅಪಘಾತ ನಡೆದ ಸ್ಥಳದಲ್ಲಿ ನಿಂತಿದ್ದವ್ರ ಮೇಲೆ ಹರಿದ ಜಾಗ್ವರ್

  ಭೀಕರ ದುರಂತಕ್ಕೆ ಓವರ್​​ಸ್ಪೀಡ್​​ ಕಾರಣ ಎಂದ ಸ್ಥಳೀಯರು

  ಅಪಘಾತದ ಹೊಡೆತಕ್ಕೆ ಕಾರಿನ ಮುಂಭಾಗ ಪುಡಿಪುಡಿ

ಗುಜರಾತ್​ನ ಅಹ್ಮದಾಬಾದ್​​ನಲ್ಲಿರುವ ISKCON ಬ್ರಿಡ್ಜ್​​ ಮೇಲೆ ಭೀಕರ ಅಪಘಾತ ಸಂಭವಿಸಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಐಷಾರಾಮಿ ಜಾಗ್ವರ್​​ ಕಾರು​​ ಓವರ್​ ಸ್ಪೀಡ್​​ನಿಂದ ಬಂದು ಅಪಘಾತಕ್ಕೆ ಒಳಗಾಗಿದೆ.

ಈ ದುರಂತದಲ್ಲಿ ಓರ್ವ ಕಾನ್ಸ್​​ಟೇಬಲ್ ಕೂಡ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಜಾಗ್ವರ್​ ಕಾರು ಬರೋಬ್ಬರಿ 160 ಕಿಲೋ ಮೀಟರ್ ವೇಗದಲ್ಲಿ ಬಂದಿದೆ. ನಿಯಂತ್ರಣ ತಪ್ಪಿದ ಕಾರು ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದೆ. ವರದಿಗಳ ಪ್ರಕಾರ, ಅಲ್ಲಿ ಇನ್ನೊಂದು ಅಪಘಾತ ನಡೆದಿತ್ತು. ಈ ಅಪಘಾತದ ಸ್ಥಳ ನೋಡುತ್ತಿದ್ದವರ ಮೇಲೆ ಜಾಗ್ವರ್ ಹರಿದಿದೆ ಎನ್ನಲಾಗಿದೆ.

ದುರ್ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಜಾಗ್ವರ್ ಕಾರಿನ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ISKCON ಬ್ರಿಡ್ಜ್​​ ಮೇಲೆ ಓವರ್​ಸ್ಪೀಡ್.. 160 ಕಿ.ಮೀ. ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಜಾಗ್ವರ್.. 9 ಸಾವು, 12 ಮಂದಿ ಗಂಭೀರ

https://newsfirstlive.com/wp-content/uploads/2023/07/CAR_ACCIDENT.jpg

Load More