newsfirstkannada.com

ಸ್ಪೀಡ್​ ಆಗಿ ಬಂದು ಬಲೂನ್​ ವ್ಯಾಪಾರಿಗೆ ಗುದ್ದಿದ ಕಾರು, 2 ಪಲ್ಟಿ.. ವ್ಯಕ್ತಿ ಸ್ಥಳದಲ್ಲೇ ಸಾವು

Share :

26-10-2023

    ವ್ಯಾಪಾರ ಮುಗಿಸಿಕೊಂಡು ಮಾರ್ಕೆಟ್​ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ

    ಯಮನಾಗಿ ಬಂದ ಕಾರು, ನೋಡು ನೋಡ್ತಿದ್ದಂತೆ ವ್ಯಕ್ತಿ ಜೀವ ಪಡೆಯಿತು

    ಕಾರು ಪಲ್ಟಿ ಹೊಡೆದ ರಭಸಕ್ಕೆ, ಆ ಶಬ್ಧಕ್ಕೆ ಎದ್ದು ಬಂದ ಸುತ್ತಲಿನ ಸ್ಥಳೀಯರು

ಲಕ್ನೋ: ಮಹೀಂದ್ರ ಸ್ಕಾರ್ಪೊಯೋ ಕಾರೊಂದು ವೇಗವಾಗಿ ಬಂದು ಬಲೂನ್ ವ್ಯಾಪಾರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆಯು ಉತ್ತರ ಪ್ರದೇಶದ ಮೀರತ್​ ಮಾರ್ಕೆಟ್​ನ ಅಬುಲಾನೆ ಪ್ರದೇಶದಲ್ಲಿ ನಡೆದಿದೆ.

ಬಲೂನ್ ವ್ಯಾಪಾರಿ ಬಾನು ಸಾವನ್ನಪ್ಪಿದ ವ್ಯಕ್ತಿ. ವ್ಯಾಪಾರ ಮುಗಿಸಿಕೊಂಡು ಬಲೂನ್ ವ್ಯಾಪಾರಿ ತಡರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ಈ ವೇಳೆ ವೇಗವಾಗಿ ಬಂದ ಕಾರು ಮೊದಲು ವ್ಯಾಪಾರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಡಿವೈಡರ್​ಗೆ ಡಿಕ್ಕಿ ಹೊಡೆದು ಎರಡು ಪಲ್ಟಿ ಹೊಡೆದು ಮತ್ತೆ ಹೇಗಿತ್ತು ಹಾಗೆ ಕಾರು ನಿಂತಿಕೊಂಡಿದೆ. ಸದ್ಯ ಈ ಭಯಾನಕ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರ ಎದೆ ನಡುಗಿಸುವಂತೆ ಇದೆ.

ಮೀರತ್‌ನ ಉದ್ಯಮಿ ಅನುಭವ್ ಗೋಯಲ್ ಎನ್ನುವರು ಮದ್ಯಪಾನ ಮಾಡಿ ಕಾರ್​ನ್ನು ವೇಗವಾಗಿ ಓಡಿಸುತ್ತಿದ್ದರು ಎನ್ನಲಾಗಿದೆ. ಘಟನೆ ಬಳಿಕ ಆರೋಪಿಗಳು ಕಾರ್​ನಿಂದ ಜಿಗಿಯುವ ದೃಶ್ಯ ಸಿಸಿಟಿವಿಯಲ್ಲಿ ಕಾಣಿಸಿದೆ. ಇನ್ನು, ಆಕ್ಸಿಡೆಂಟ್​​​ ಸದ್ದಿಗೆ ಜಮಾಯಿಸಿದ ಜನ, ಚಾಲಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳದೇ ವ್ಯಕ್ತಿಯನ್ನ ಪೊಲೀಸರು ರಿಲೀಸ್​​ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೀಡ್​ ಆಗಿ ಬಂದು ಬಲೂನ್​ ವ್ಯಾಪಾರಿಗೆ ಗುದ್ದಿದ ಕಾರು, 2 ಪಲ್ಟಿ.. ವ್ಯಕ್ತಿ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2023/10/UP_CAR_ACCIDENT.jpg

Load More