/newsfirstlive-kannada/media/post_attachments/wp-content/uploads/2025/03/KL_RAHUL_ROHIT.jpg)
ಟೀಮ್​ ಇಂಡಿಯಾ ಈಗ ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್​​. ನ್ಯೂಜಿಲೆಂಡ್​ ಮಣಿಸಿ ಟ್ರೋಫಿಗೆ ರೋಹಿತ್​ ಪಡೆ ಮುತ್ತಿಕ್ಕಿದೆ. ಆದ್ರೆ, ಇದೇ ಚಾಂಪಿಯನ್ಸ್​​ ಟ್ರೋಫಿ ಟೀಮ್​ ಅನೌನ್ಸ್​ ಆದಾಗ ಟೀಕೆಗಳ ಸುರಿಮಳೆ ಸುರಿದಿತ್ತು. ಎಲ್ಲರದ್ದೂ ಒಂದು ಪ್ರಶ್ನೆ 5 ಸ್ಪಿನ್ನರ್​​ಗಳು ಯಾಕಪ್ಪಾ ಅನ್ನೋದು?. ಆ ಪ್ರಶ್ನೆಗೆ ಟೂರ್ನಮೆಂಟ್​​ನ ಫೈನಲ್​ನಲ್ಲಿ ಪರ್ಫಾಮೆನ್ಸ್​ನಿಂದ​ ಉತ್ತರ ನೀಡ್ತಿದೆ.
ಚಾಂಪಿಯನ್ಸ್​ ಟ್ರೋಫಿ ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್​ ಮಣಿಸಿದ ಟೀಮ್​ ಇಂಡಿಯಾ ಟ್ರೋಫಿಗೆ ಮುತ್ತಿಕ್ಕಿದೆ. 12 ವರ್ಷಗಳ ಬಳಿಕ ಚಾಂಪಿಯನ್ಸ್​ ಟ್ರೋಫಿ ಕಿರೀಟ ಭಾರತ ತಂಡದ ಮುಡಿಗೇರಿದೆ. ದುಬೈ ಅಂಗಳದಲ್ಲಿ ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಆಲ್​​ರೌಂಡರ್​ ಪರ್ಫಾಮೆನ್ಸ್​ ನೀಡಿ ಮಿಂಚಿದ ಬ್ಲೂ ಬಾಯ್ಸ್​​ ಚಾಂಪಿಯನ್ಸ್​ ಆಗಿ ಹೊರಹೊಮ್ಮಿದ್ದಾರೆ.
/newsfirstlive-kannada/media/post_attachments/wp-content/uploads/2025/03/KL_RAHUL-4.jpg)
ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್​​ ಆದ ಹಾದಿಯಲ್ಲಿ ಟೀಮ್​ ಇಂಡಿಯಾ ಸೋಲನ್ನೇ ಕಾಣಲಿಲ್ಲ. ಟ್ರೋಫಿ ಗೆಲ್ಲೋ ಕನಸಿನೊಂದಿಗೆ ಬಾಂಗ್ಲಾ ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ ಟೀಮ್​ ಇಂಡಿಯಾ, ಕಿವೀಸ್​ ಕಿವಿ ಹಿಂಡಿ ಟ್ರೋಫಿಗೆ ಮುತ್ತಿಕ್ಕಿದೆ. ಈ ಚಾಂಪಿಯನ್​​ ಜರ್ನಿಯಲ್ಲಿ ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್ಸ್​ ಆದರು. ಆದ್ರೆ, ಕಪ್​ ಗೆಲುವಿಗೆ ಕನ್ಸಿಸ್ಟೆಂಟ್​ ಆಗಿ ಕಾಣಿಕೆ ನೀಡಿದ್ದು ಸ್ಪಿನ್ನರ್ಸ್​. ದುಬೈನಲ್ಲಿ ಇವರು ನಡೆಸಿದ ದರ್ಬಾರ್​ ಇಂದು ಚಾಂಪಿಯನ್​ ಪಟ್ಟ ದಕ್ಕುವಂತೆ ಮಾಡಿದೆ.
5 ಪಂದ್ಯ, 26 ವಿಕೆಟ್​, ದುಬೈನಲ್ಲಿ ಸ್ಪಿನ್ನರ್ಸ್​​ ದರ್ಬಾರ್​.!
5 ಮಂದಿ ಸ್ಪಿನ್ನರ್​. ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಟೀಮ್​ ಇಂಡಿಯಾ ಸೆಲೆಕ್ಟ್​ ಆದಾಗ ಕ್ರಿಕೆಟ್​ ವಲಯದಲ್ಲಿ ಇದು ದೊಡ್ಡ ಚರ್ಚೆಯಾಗಿತ್ತು. ನಿಜಕ್ಕೂ ಇಷ್ಟು ಸ್ಪಿನ್ನರ್ಸ್​ ಬೇಕಿತ್ತಾ ಎಂದು ಕ್ರಿಕೆಟ್​ ಪಂಡಿತರೇ ಪ್ರಶ್ನೆ ಮಾಡಿದ್ದರು. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ಟೂರ್ನಿಯಲ್ಲಿ ಚಮತ್ಕಾರ ಮಾಡಿದ ಸ್ಪಿನ್ನರ್ಸ್​​ ಈಗ ಟ್ರೋಫಿ ಗೆಲುವಿನ ರೂವಾರಿ ಆಗಿದ್ದಾರೆ. ಆಡಿದ ಐದೂ ಪಂದ್ಯಗಳಲ್ಲಿ ಮ್ಯಾಜಿಕ್​ ಮಾಡಿ ಮೆಜಿಶಿಯನ್ಸ್​ ಯಶಸ್ವಿಯಾಗಿ ಬರೋಬ್ಬರಿ 26 ವಿಕೆಟ್​ ಬೇಟೆಯಾಡಿದರು. ಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಈ ಪ್ರದರ್ಶನ.
ಚಕ್ರವರ್ತಿ ಚಮತ್ಕಾರಕ್ಕೆ ಎದುರಾಳಿಗಳು ಕಕ್ಕಾಬಿಕ್ಕಿ.!
2021.. ಟಿ20 ವಿಶ್ವಕಪ್​ ಇದೇ ದುಬೈನಲ್ಲಿ ನಡೆದಿತ್ತು. ಟೀಮ್​ ಇಂಡಿಯಾ ಪರ ವರುಣ್​ ಚಕ್ರವರ್ತಿ ಚೊಚ್ಚಲ ಅವಕಾಶ ಪಡೆದಿದ್ದರು. ಅಪಾರ ನಿರೀಕ್ಷೆಯೊಂದಿಗೆ ತಂಡಕ್ಕೆ ಎಂಟ್ರಿ ಕೊಟ್ಟ ಚಕ್ರವರ್ತಿ, ಫ್ಲಾಪ್​ ಶೋ ನೀಡಿದ್ದರು. 3 ಪಂದ್ಯದಲ್ಲಿ ಒಂದೇ ಒಂದು ವಿಕೆಟ್​ ಕಬಳಿಸದೇ ನಿರ್ಗಮಿಸಿದ್ದರು. ಆದ್ರೆ, 4 ವರ್ಷಗಳ ಬಳಿಕ ಅದೇ ಜಾಗದಲ್ಲಿ ಚಕ್ರವರ್ತಿ ಚಮತ್ಕಾರ ಮಾಡಿದ್ರು. ಈ ಬಾರಿ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಮಿಂಚಿದ ವರುಣ್​ ಚಕ್ರವರ್ತಿ 9 ವಿಕೆಟ್​ ಕಬಳಿಸಿ ಕಮಾಲ್​ ಮಾಡಿದ್ದಾರೆ.
ಕುಲ್​​​ದೀಪ್​ ಕೈಚಳಕ.. ಬ್ಯಾಟ್ಸ್​ಮನ್​ಗಳು ಕಂಗಾಲ್​.!
ಕೋಚ್​-ಕ್ಯಾಪ್ಟನ್​ ಅತಿ ಹೆಚ್ಚು ಭರವಸೆಯಿಂದ ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್​ ಯಾದವ್​ಗೆ​ ಈ ಚಾಂಪಿಯನ್ಸ್​ ಟ್ರೋಫಿ ತಂಡದಲ್ಲಿ ಚಾನ್ಸ್​ ನೀಡಿದರು. ಈ ಭರವಸೆಯನ್ನ ಕುಲ್​​ದೀಪ್​ ಯಾದವ್ ಹುಸಿಗೊಳಿಸಲಿಲ್ಲ. ದುಬೈನಲ್ಲಿ ದರ್ಬಾರ್​ ನಡೆಸಿದ ಕುಲ್​​​​ದೀಪ್​ ಆಡಿದ 5 ಪಂದ್ಯಗಳಲ್ಲಿ 7 ವಿಕೆಟ್​ ಬೇಟೆಯಾಡಿದ್ದಾರೆ. ಕೇವಲ 4.79ರ ಎಕಾನಮಿ ರನ್​ಬಿಟ್ಟು ಕೊಟ್ಟ ಕುಲ್​ದೀಪ್​ ಬ್ಯಾಟ್ಸ್​ಮನ್​ಗಳನ್ನ ಕಾಡಿದ್ದಾರೆ.
ರವೀಂದ್ರ ಜಡೇಜಾ ಸ್ಪೀಡ್​​ಗೆ ದಂಗಾದ ಬ್ಯಾಟರ್ಸ್​.!
ರವೀಂದ್ರ ಜಡೇಜಾ ಬೌಲಿಂಗ್​ ಮಾಡ್ತಿದ್ದ ಸ್ಪೀಡ್​ಗೆ ಎದುರಾಳಿ ಬ್ಯಾಟರ್​​ಗಳು ದಂಗಾಗಿ ಹೋಗಿದ್ದರು. ಜಸ್ಟ್​ 2 ನಿಮಿಷ, ಎರಡೇ 2 ನಿಮಿಷಗಳ ಅಂತರದಲ್ಲಿ ಒಂದು ಓವರ್​ ಕಂಪ್ಲೀಟ್​ ಮಾಡ್ತಿದ್ದ ಜಡ್ಡು ಬ್ಯಾಟರ್ಸ್​​ ಮೇಲೆ ಒತ್ತಡ ಹೇರ್ತಿದ್ರು. 5 ಇನ್ನಿಂಗ್ಸ್​ನಿಂದ 42 ಓವರ್​​ ಬೌಲಿಂಗ್​ ಮಾಡಿದ ಜಡೇಜಾ, ಕೇವಲ 4.35ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟು 5 ವಿಕೆಟ್ಸ್​​ ಕಬಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/03/Kuldeep_Yadav.jpg)
ಅಕ್ಷರ್​ ಆಲ್​​ರೌಂಡ್​ ಆಟಕ್ಕೊಂದು ಸಲಾಂ.!
ಅಕ್ಷರ್​ ಪಟೇಲ್​ ಈ ಟೂರ್ನಿಯಲ್ಲಿ ಆಲ್​​ರೌಂಡ್​ ಆಟದಿಂದ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್​ನಲ್ಲಿ ಬಡ್ತಿ ನೀಡಿ ಮ್ಯಾನೇಜ್​ಮೆಂಟ್​ ನೀಡಿದ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ ಅಕ್ಷರ್​ ಪಟೇಲ್​ ಬೌಲಿಂಗ್​ನಲ್ಲೂ ಜಾದೂ ಮಾಡಿದರು. 45 ಓವರ್​​ ಬೌಲಿಂಗ್​ ಮಾಡಿ 5 ವಿಕೆಟ್​ ಉರುಳಿಸಿದ ಅಕ್ಷರ್,​​ ಕೇವಲ 4.35 ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟರು.
ಅಂದು ಸ್ಪಿನ್ನರ್​​ಗಳ ಸೆಲೆಕ್ಷನ್​ ಬಗ್ಗೆ ಪ್ರಶ್ನೆ ಎದುರಾದಾಗ ದುಬೈನಲ್ಲಿ ಆನ್ಸರ್​​ ಕೊಡ್ತೀವಿ ಅಂತಾ ರೋಹಿತ್​ ಶರ್ಮಾ ಹೇಳಿದ್ದರು. ಆ ಆನ್ಸರ್ ಚಾಂಪಿಯನ್​​ ಕಪ್​ ಗೆಲುವಿನೊಂದಿಗೆ ಸಿಕ್ಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us