RCB ಅಭಿಮಾನಿಗಳಿಗೆ ಕೊನೆಗೂ ಗುಡ್​ನ್ಯೂಸ್.. ಚಿನ್ನಸ್ವಾಮಿಯಲ್ಲೇ ಪಂದ್ಯಗಳು..!

ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೂ ಗುಡ್​ನ್ಯೂಸ್​​ ಸಿಕ್ಕಿದೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಪಂದ್ಯಗಳನ್ನು ಆಡಿಸಲು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಅಸ್ತು ಎಂದಿದೆ. ಈ ಮೂಲಕ ರಾಜಧಾನಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಬಹುದಿನಗಳ ಕಾತರಕ್ಕೆ ಕೊನೆಗೂ ತೆರೆ ಬಿದ್ದಿದೆ.

author-image
Ganesh Kerekuli
Chinnaswamy stadium (1)
Advertisment
  • ಚಿನ್ನಸ್ವಾಮಿಯಲ್ಲಿ ಸ್ಟೇಡಿಯಂನಲ್ಲೇ ಐಪಿಎಲ್​​​ ಉದ್ಘಾಟನೆ
  • ಐಪಿಎಲ್ ಪಂದ್ಯಕ್ಕೆ ಅಸ್ತು ಎಂದ ಸಿದ್ದರಾಮಯ್ಯ ಸರ್ಕಾರ
  • ಸರ್ಕಾರ, ಗೃಹಸಚಿವರಿಗೆ ಧನ್ಯವಾದ ಹೇಳಿದ KSCA ಅಧ್ಯಕ್ಷ

ಜೂನ್ 4, 2025.. ಆರ್​​ಸಿಬಿ ಪಾಲಿಗೆ ಇದು ಅತ್ಯಂತ ಕರಾಳ ದಿನ..  ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಹಬ್ಬಕ್ಕೆ ಗ್ರಹಣ ಕವಿದಿತ್ತು.. ಇದೀಗ ಗ್ರಹಣಕ್ಕೆ ಮೋಕ್ಷ ಸಿಕ್ಕಿದ್ದು ಮತ್ತೆ ವೈಭವದ ಹೊಡಿ-ಬಡಿ ಬ್ಯಾಟ್-ಬಾಲ್ ಜಾತ್ರೆಗೆ ಗ್ರೀನ್​ ಸಿಗ್ನಲ್ ಸಿಕ್ಕಿದೆ.. 

ಚಿನ್ನಸ್ವಾಮಿಯಲ್ಲಿ ಸ್ಟೇಡಿಯಂನಲ್ಲೇ ಐಪಿಎಲ್​​​ ಉದ್ಘಾಟನೆ 

ಆರ್​ಸಿಬಿ ಅಭಿಮಾನಿಗಳಿಗೆ ಸಿದ್ದರಾಮಯ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.. ಚಿನ್ನಸ್ವಾಮಿ ಸ್ಟೇಡಿಯಂ ಐಪಿಎಲ್​ ಪಂದ್ಯಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.. ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು ಕ್ಯಾಬಿನೆಟ್ ಸಭೆ ಬಳಿಕ ಅಧಿಕೃತವಾಗಿ ಘೋಷಣೆ ಆಗಿದೆ..  ಈ ಮೂಲಕ ಎಂಟು ತಿಂಗಳ ಬಳಿಕ ಚಿನ್ನಸ್ವಾಮಿ ಅಂಗಳದಲ್ಲೇ ಆರ್​ಸಿಬಿ ಪಂದ್ಯಗಳು ಪುನಾರಂಭ ಆಗಲಿವೆ.. 

ಇದನ್ನೂ ಓದಿ: ಸೀರಿಯಲ್‌ನಲ್ಲೂ ಮದ್ವೆಯಾಗಿ ರಿಯಲ್‌ ಲೈಫ್‌ನಲ್ಲೂ ಮದ್ವೆಯಾಗಿರೋ ಜೋಡಿ ಅಂದ್ರೆ ಇದೇ..!

RCB (7)

ಇದಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್​ ಉದ್ಘಾಟನಾ ಪಂದ್ಯ ಸೇರಿದಂತೆ ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆ ಕುರಿತು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೀತು.. KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸಭೆಯಲ್ಲಿ ಭಾಗಿಯಾಗಿದ್ದರು.. ಇನ್ನು ಸಭೆಯಲ್ಲಿ ಅಧಿಕಾರಿಗಳು ಮೈದಾನದ ಪರಿಶೀಲನಾ ವರದಿ ಸಲ್ಲಿಸಿದ್ದರು.. ಚಿನ್ನಸ್ವಾಮಿಯಲ್ಲಿ ಐಎಪಿಎಲ್ ಪಂದ್ಯ ನಡೆಸಲು ಎಲ್ಲರ ಸಹಮತ ವ್ಯಕ್ತವಾಗಿತ್ತು.. ಸಭೆಯಲ್ಲಿ ಆಗಿರುವ ಚರ್ಚೆ ಬಗ್ಗೆ ಕ್ಯಾಬಿನೆಟ್​​ಗೂ ತಿಳಿಸಲಾಗಿತ್ತು..

ಚಿನ್ನಸ್ವಾಮಿಯಲ್ಲೇ ಪಂದ್ಯ.. ವೆಂಕಟೇಶ್ ಪ್ರಸಾದ್ ಸಂತಸ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಪಂದ್ಯಗಳ ಆರಂಭಕ್ಕೆ ಹಸಿರು ನಿಶಾನೆ ತೋರಿಸಿದ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್​ಗೆ KSCA ಅಧ್ಯಕ್ಷ ವೆಂಕಟೇಶ ಪ್ರಸಾದ್ ಧನ್ಯವಾದ ಅರ್ಪಿಸಿದ್ದಾರೆ.. ಕ್ಯಾಬಿನೆಟ್​​​ನಲ್ಲಿ ಪಾಸಿಟಿವ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ.. ವರದಿ ಪ್ರಕಾರ ಉದ್ಘಾಟನೆಗೆ ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳುತ್ತೇವೆ, ಆರ್​ಸಿಬಿಯವರೂ ಕೂಡ ಒಪ್ಪಿದ್ದಾರೆ.. ಬಿಸಿಸಿಐ ಕೂಡ ಇದನ್ನೇ ಹೇಳಿದೆ ಎಂದಿದ್ದಾರೆ..

ನಿಜಕ್ಕೂ ಇವತ್ತು ಆರ್​ಸಿಬಿ ಅಭಿಮಾನಿಗಳಿಗೆ ವೆರಿ ವೆರಿ ಬಿಗ್ ಡೇ ಆಗಿದೆ.. ಇತ್ತ ಕಳೆದ ಬಾರಿ ಸಂಭವಿಸಿದ್ದ ಅವಘಡ ಮತ್ತೆ ಸಂಭವಿಸಂತೆ KSCA ಹಾಗೂ ಸರ್ಕಾರ ಮುನ್ನೆಚ್ಚರಕಾ ಕ್ರಮಗಳನ್ನು ವಹಿಸಿವೆ.. ಒಟ್ಟಾರೆ, ಚಿನ್ನಸ್ವಾಮಿ ಅಂಗಳದಲ್ಲಿ ಕ್ರಿಕೆಟ್​ ಉತ್ಸವ ನೋಡಲು ಅಭಿಮಾನಿಗಳೂ ಕೂಡ ಕಾತರರಾಗಿದ್ದಾರೆ..

ಇದನ್ನೂ ಓದಿ: ಹೊಸಕೋಟೆಯಲ್ಲಿ ಹೃದಯ ವಿದ್ರಾವಕ ದೃಶ್ಯ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ನಿಧನ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

RCB Chinnaswamy Stadium
Advertisment