ಸೋಲಿಗೆ ಇವರೇ ಹೊಣೆ ಎಂದ ಪಾಕ್ ನಾಯಕ.. ಶರಣಾಗತಿಗೆ ಬಿಚ್ಚಿಟ್ಟ ಕಾರಣ ಏನು ಗೊತ್ತಾ..?

2026ರ ಟಿ20 ವಿಶ್ವಕಪ್‌ನ (T20 World Cup 2026) ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 61 ರನ್‌ಗಳ ಹೀನಾಯ ಸೋಲು ಕಂಡಿದೆ. ಬೆನ್ನಲ್ಲೇ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಗಾ (Salman Ali Agha) ತಮ್ಮ ತಂಡದ ವೈಫಲ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ.

author-image
Ganesh Kerekuli
Salman Ali Agha
Advertisment

2026ರ ಟಿ20 ವಿಶ್ವಕಪ್‌ನ (T20 World Cup 2026) ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 61 ರನ್‌ಗಳ ಹೀನಾಯ ಸೋಲು ಕಂಡಿದೆ. ಬೆನ್ನಲ್ಲೇ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಗಾ (Salman Ali Agha) ತಮ್ಮ ತಂಡದ ವೈಫಲ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. ಬೌಲರ್‌ಗಳ ಕಳಪೆ ಪ್ರದರ್ಶನ ಮತ್ತು ಬ್ಯಾಟ್ಸ್‌ಮನ್‌ಗಳ ಅಜಾಗರೂಕತೆಯೇ ಸೋಲಿಗೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ನಾಯಕ ಸಲ್ಮಾನ್ ಅಲಿ ಆಗಾ ಹೇಳಿದ್ದೇನು?

ಪಂದ್ಯದ ಬಳಿಕ ಮಾತನಾಡಿದ ಅವರು, ‘ನಮ್ಮ ಬೌಲರ್‌ಗಳು ಮೈದಾನದಲ್ಲಿ ಪ್ಲಾನ್ ಜಾರಿಗೊಳಿಸುವಲ್ಲಿ (Execution) ವಿಫಲರಾದರು. ಮುಖ್ಯವಾಗಿ ಸ್ಪಿನ್ನರ್‌ಗಳಿಗೆ ಇದೊಂದು ಕೆಟ್ಟ ದಿನವಾಗಿತ್ತು . ಕಳೆದ 6 ತಿಂಗಳಿಂದ ನಮ್ಮ ಸ್ಪಿನ್ನರ್‌ಗಳು ಅದ್ಭುತವಾಗಿ ಆಡಿದ್ದರು. ಆದರೆ ಇಂದು ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಾಕ್ ವಿರುದ್ಧ ಗೆದ್ದರೂ ಕುಲ್ದೀಪ್ ಮೇಲೆ ಹಾರ್ದಿಕ್, ಸೂರ್ಯ ಗರಂ! ಮೈದಾನದಲ್ಲಿ ಆಗಿದ್ದೇನು..? VIDEO

Mike Hesson

ಬ್ಯಾಟಿಂಗ್ ಬಗ್ಗೆ ಗರಂ

‘ನಾವು ಪವರ್‌ಪ್ಲೇನಲ್ಲೇ (Powerplay) ಅತಿ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡೆವು. ಮೊದಲ ಇನಿಂಗ್ಸ್‌ಗೆ ಹೋಲಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಚೆನ್ನಾಗಿತ್ತು. ಆದರೆ ನಮ್ಮ ಅಜಾಗರೂಕತೆಯ ಆಟದಿಂದಾಗಿ ಭಾರತ ಮೇಲಿಂದ ಮೇಲೆ ವಿಕೆಟ್ ಕಬಳಿಸಲು ಸಾಧ್ಯವಾಯಿತು ಎಂದು ನಾಯಕ ತಿಳಿಸಿದ್ದಾರೆ.

ಇಶಾನ್ ಅಬ್ಬರ, ಬುಮ್ರಾ ಘರ್ಜನೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಇಶಾನ್ ಕಿಶನ್ (77 ರನ್) ಸ್ಫೋಟಕ ಆರಂಭ ನೀಡಿದರು. ಪರಿಣಾಮ ಭಾರತ 175 ರನ್ ಕಲೆಹಾಕಿತು. 176 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ಸಾಹಿಬ್ಜಾದ ಫರ್ಹಾನ್ (0), ಸೈಮ್ ಅಯೂಬ್ (6) ಮತ್ತು ಸ್ವತಃ ನಾಯಕ ಸಲ್ಮಾನ್ ಅಲಿ ಆಗಾ (4) ಬೂಮ್ರಾ ಮತ್ತು ಹಾರ್ದಿಕ್ ದಾಳಿಗೆ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಇಶಾನ್ ಕಿಶನ್ ಹೊಗಳಿದ ಪಾಕ್ ಕೋಚ್​; ಪಾಕಿಸ್ತಾನ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ ಹೆಸ್ಸನ್..!

T20 WORLD CUP INDIA AND PAK MATCH

ಬಳಿಕ ಸ್ಪಿನ್ನರ್ ಅಕ್ಷರ್ ಪಟೇಲ್, ಬಾಬರ್ ಅಜಂ (5) ಮತ್ತು ಉಸ್ಮಾನ್ ಖಾನ್ (44) ವಿಕೆಟ್ ಪಡೆಯುವ ಮೂಲಕ ಪಾಕ್ ಪತನವನ್ನು ಖಚಿತಪಡಿಸಿದರು. ಅಂತಿಮವಾಗಿ ಪಾಕ್ 114 ರನ್‌ಗಳಿಗೆ ಆಲೌಟ್ ಆಯ್ತು.

ಮುಂದೇನು?

ಇಂತಹ ಪಂದ್ಯಗಳಲ್ಲಿ ಭಾವನೆಗಳು (Emotions) ಸಹಜವಾಗಿಯೇ ಹೆಚ್ಚಿರುತ್ತವೆ. ಅದನ್ನು ನಿಭಾಯಿಸಬೇಕು. ನಮಗೆ ಇನ್ನೂ ಒಂದು ಪಂದ್ಯ (ನಮೀಬಿಯಾ ವಿರುದ್ಧ) ಬಾಕಿ ಇದೆ. ಅದರಲ್ಲಿ ಗೆದ್ದು ಸೂಪರ್-8 ಹಂತಕ್ಕೆ ತಲುಪುವ ವಿಶ್ವಾಸವಿದೆ ಎಂದು ಸಲ್ಮಾನ್ ಅಲಿ ಆಗಾ ಹೇಳಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರಿಗೆ KSRTC ಶಾಕ್: ಲಗೇಜ್ 30 ಕೆ.ಜಿ ದಾಟಿದ್ರೆ ಜೇಬಿಗೆ ಕತ್ತರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup india vs pakistan
Advertisment