newsfirstkannada.com

ಪತಿರಣ ಅಲ್ಲವೇ ಅಲ್ಲ.. ಟೀಂ ಇಂಡಿಯಾ ಸ್ಟಾರ್​​ಗಳನ್ನ ದಂಗು ಬಡಿಸಿದ 20 ವರ್ಷದ ಈ ಬೌಲರ್​​..!

Share :

13-09-2023

  ಲಂಕಾದ ಸ್ಪಿನ್​ ದಾಳಿಗೆ ಟೀಮ್​ ಇಂಡಿಯಾ​ ವಿಲ, ವಿಲ

  ಪೆವಿಲಿಯನ್​ ಪರೇಡ್​ ನಡೆಸಿದ ಅತಿರಥ ಮಹಾರಥರು

  ವಿಶ್ವದ ಶ್ರೇಷ್ಟ ಬ್ಯಾಟ್ಸ್​ಮನ್​ಗಳು ಎಡವಿದ್ದೆಲ್ಲಿ..?

ಪಾಕ್​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ನಿನ್ನೆ ಲಂಕಾ ಎದುರು ಸೈಲೆಂಟ್​ ಆಗಿಬಿಟ್ರು. ಸಿಂಹಳೀಯ ಪಡೆಯ ಸ್ಪಿನ್​ ಮೋಡಿಗೆ ಸ್ಟಾರ್​ ಬ್ಯಾಟರ್​​ಗಳು ಪೆವಿಲಿಯನ್​ ಪರೇಡ್​ ನಡೆಸಿದ್ರು. ಅಭಿಮಾನಿಗಳ ಅಂದುಕೊಂಡಿದ್ದೇ ಬೇರೆ.. ನಿನ್ನೆ ಆಗಿದ್ದೇ ಬೇರೆ.. ಹಾಗಿತ್ತು ಟೀಮ್​ ಇಂಡಿಯಾದ​ ಬ್ಯಾಟಿಂಗ್​.

ಪಾಕಿಸ್ತಾನದ ಬಲಿಷ್ಟ ಬೌಲಿಂಗ್​ ದಾಳಿಯನ್ನು ಪುಡಿಗಟ್ಟಿದ್ದ ಟೀಮ್​ ಇಂಡಿಯಾ ಆಟಗಾರರ ಮೇಲೆ ನಿನ್ನೆ ಸಿಕ್ಕಾಪಟ್ಟೆ ನೀರಿಕ್ಷೆಯಿತ್ತು. ರೆಡ್​ ಹಾಟ್​ ಫಾರ್ಮ್​ನಲ್ಲಿರೋ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಶ್ರೀಲಂಕಾದ ಮೇಲೆ ಸವಾರಿ ಮಾಡ್ತಾರೆ ಅನ್ನೋದು ಎಲ್ಲರ ಎಕ್ಸ್​​ಪೆಕ್ಟೇಶನ್​ ಆಗಿತ್ತು.

80 ರನ್​ಗೆ ನೋ ಲಾಸ್​.. 213 ರನ್​ಗೆ ಆಲೌಟ್​..!

ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ಟೀಮ್​ ಇಂಡಿಯಾ ಕ್ಯಾಂಪ್​ ಭರ್ಜರಿ ಆಟವಾಡೋ ಲೆಕ್ಕಾಚಾರದಲ್ಲಿ ಟಾಸ್​ ಗೆದ್ದ ಕೂಡಲೇ ಬ್ಯಾಟಿಂಗ್​ ಆಯ್ದುಕೊಳ್ತು. ಆರಂಭದಲ್ಲಿ ಎಲ್ಲವೂ ಕ್ಯಾಪ್ಟನ್​ ರೋಹಿತ್​ ಅಂದುಕೊಂಡಂತೆ ಆಯ್ತು.. ಶುಭ್​​ಮನ್​-ರೋಹಿತ್​​ ಸಾಲಿಡ್​ ಒಪನಿಂಗ್ ನೀಡಿದ್ರು. ಮೊದಲ ವಿಕೆಟ್​ಗೆ ಟೀಮ್​ ಇಂಡಿಯಾ 80 ರನ್​ಗಳನ್ನ ಗಳಿಸ್ತು. ಆಮೇಲೆ ಸೀನ್​ ಫುಲ್​ ಚೇಂಜ್​ ಆಯ್ತು.

ಲಂಕಾದ ಸ್ಪಿನ್​ ದಾಳಿಗೆ ಟೀಮ್​ ಇಂಡಿಯಾ​ ವಿಲ..ವಿಲ..!

ಕೊಲಂಬೋದ ಪ್ರೇಮದಾನ ಮೈದಾನದಲ್ಲಿ ಶ್ರೀಲಂಕಾದ ಸ್ಪಿನ್​ ಬಲೆಗೆ ಟೀಮ್​ ಇಂಡಿಯಾ ಬಿತ್ತು. ಸಿಂಹಳೀಯ ಬೌಲರ್​ಗಳ ದಾಳಿಗೆ ನಲುಗಿದ ಟೀಮ್​ ಇಂಡಿಯಾದ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದ್ರು. ಬೌಂಡರಿ, ಸಿಕ್ಸರ್​​ ಸಿಡಿಸಿ ರನ್​ಗಳಿಸೋದಿರಲಿ.. ವಿಕೆಟ್​​ ಉಳಿಸಿಕೊಳ್ಳಲು ಅಕ್ಷರಶಃ ಪರದಾಟ ನಡೆಸಿದ್ರು.. ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​​ಗಳು ಸ್ಪಿನ್​​ ಟ್ರ್ಯಾಪ್​​​ಗೆ​ ಸುಲಭಕ್ಕೆ ಬಿದ್ರು..

ಸ್ಟಾರ್​​ಗಳನ್ನ ದಂಗು ಬಡಿಸಿದ 20 ವರ್ಷದ ಬೌಲರ್​​..!

ನಿನ್ನೆ ಇಡೀ ಟೀಮ್​ ಇಂಡಿಯಾ ಕ್ಯಾಂಪ್​ಗೆ ಶಾಕ್​ ಟ್ರೀಟ್​​ಮೆಂಟ್​​ ಕೊಟ್ಟಿದ್ದು 20 ವರ್ಷದ ಹುಡುಗ.. ಈ ಯಂಗ್​ಸ್ಟರ್​ ಸ್ಪಿನ್​ ಮೋಡಿಯ ಮುಂದೆ ವಿಶ್ವದ ಟಾಪ್​ ಕ್ಲಾಸ್​ ಬ್ಯಾಟರ್​​ಗಳು ಕಕ್ಕಾಬಿಕ್ಕಿಯಾದ್ರು. ಹಿಟ್​ಮ್ಯಾನ್​ ರೋಹಿತ್​, ಪ್ರಿನ್ಸ್​ ಶುಭ್​ಮನ್​, ಕಿಂಗ್​ ಕೊಹ್ಲಿ, ಕ್ಲಾಸಿಕ್​ ರಾಹುಲ್​​.. ಇಷ್ಟೇ ಏಕೆ ಆಲ್​​ರೌಂಡರ್​ ಹಾರ್ದಿಕ್​​ಗೂ ಖೆಡ್ಡಾ ತೋಡಿದ್ದು ಈ 20 ವರ್ಷದ ಧುನಿತ್​​​ ವೆಲ್ಲಲಗೆ..!

ಮ್ಯಾಜಿಕಲ್​​ ಸ್ಪೆಲ್​ ಹಾಕಿದ ಚರಿತ್​ ಅಸಲಂಕ.!

ಆರಂಭದಲ್ಲಿ ಯಂಗ್​ ಧುನಿತ್​ ವೆಲ್ಲಲಗೆ ಟೀಮ್​ ಇಂಡಿಯಾಗೆ ಶಾಕ್​ ನೀಡಿದ್ರೆ ಆ ಬಳಿಕ ಚರಿತ್​ ಅಸಲಂಕ ವಿಕೆಟ್​ ಬೇಟೆಯಾಡಿದ್ರು. ಇಶಾನ್​ ಕಿಶನ್​, ರವೀಂದ್ರ ಜಡೇಜಾಗೆ ಪೆವಿಲಿಯನ್​ ದಾರಿ ತೋರಿಸಿದ ಅಸಲಂಕ, ಸುಲಭಕ್ಕೆ ಲೋವರ್​ ಆರ್ಡರ್​ ಬ್ಯಾಟ್ಸ್​ಮನ್​ಗಳ ವಿಕೆಟ್​ ಬೇಟೆಯಾಡಿದ್ರು. ಒಟ್ಟು 4 ವಿಕೆಟ್​ ಕಬಳಿಸಿ ಮಿಂಚಿದ್ರು.

ವಿಶ್ವದ ಶ್ರೇಷ್ಟ ಬ್ಯಾಟ್ಸ್​ಮನ್​ಗಳು ಎಡವಿದ್ದೆಲ್ಲಿ.?

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನ ವಿಶ್ವದ ಶ್ರೇಷ್ಟ ಸ್ಪಿನ್​ ಬ್ಯಾಟರ್ಸ್​​​ ಎಂದು ಕರೆಯುತ್ತಾರೆ. ಸ್ಪಿನ್​ ದಾಳಿಯನ್ನ ಸಮರ್ಥವಾಗಿ ಎದುರಿಸುವ ತಾಳ್ಮೆ, ಜಾಣ್ಮೆ, ತಾಕತ್ತು ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಿಗಿದೆ. ಆದ್ರೆ ನಿನ್ನೆಯ ಪಂದ್ಯದಲ್ಲಿ ವರ್ಲ್ಡ್​​​ ಕ್ಲಾಸ್​​ ಆಟಗಾರರು ತಡಬಡಾಯಿಸಿದ್ದು, ಸದ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದಕ್ಕೆ ಪಾಕ್​ ವಿರುದ್ಧ ಸಾಧಿಸಿದ ಭರ್ಜರಿ ಗೆಲುವಿನ ಅತಿಯಾದ ಆತ್ಮವಿಶ್ವಾಸ ಕಾರಣ ಎಂದು ಹಲವರು ಹೇಳ್ತಿದ್ರೆ, ಇನ್ನು ಕೆಲವರು ವಿಶ್ರಾಂತಿಯ ಕೊರತೆ ಕಾರಣ ಅಂತಿದ್ದಾರೆ. ಸತತವಾಗಿ 3 ದಿನಗಳ ಕಾಲ ಪಂದ್ಯವನ್ನಾಡ್ತಿರೋದು ಕಳಪೆ ಆಟಕ್ಕೆ ಕಾರಣವಾಯ್ತು ಅನ್ನೋದು ಬಹುತೇಕರ ಅಭಿಪ್ರಾಯವಾಗಿದೆ.

ವಿಶ್ವಕಪ್​ಗೂ ಮುನ್ನ ಇದೇ ಎಚ್ಚರಿಕೆಯ ಕರೆಗಂಟೆ

ನಿನ್ನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳು ಸ್ಪಿನ್​ ಟ್ರ್ಯಾಪ್​ಗೆ ಬಿದ್ದದ್ದು ಎಚ್ಚರಿಕೆಯ ಕರೆಗಂಟೆಯಾಗಿದೆ. ಮುಂಬರುವ ವಿಶ್ವಕಪ್​ ಟೂರ್ನಿ ನಡೀತಾ ಇರೋದು ಭಾರತದಲ್ಲಿ. ಭಾರತೀಯ ಪಿಚ್​ಗಳು ಕೂಡ ಸ್ಪಿನ್​ ಸ್ನೇಹಿಯಾಗಿರೋದ್ರಿಂದ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ನೆಗ್ಲೆಟ್​ ಮಾಡಿದ್ರೆ ತವರಿನಲ್ಲಿ ನಡೆಯೋ ಮಹತ್ವದ ಟೂರ್ನಿಯಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪತಿರಣ ಅಲ್ಲವೇ ಅಲ್ಲ.. ಟೀಂ ಇಂಡಿಯಾ ಸ್ಟಾರ್​​ಗಳನ್ನ ದಂಗು ಬಡಿಸಿದ 20 ವರ್ಷದ ಈ ಬೌಲರ್​​..!

https://newsfirstlive.com/wp-content/uploads/2023/09/LANKA-3.jpg

Load More