ಅಲ್ಪಮೊತ್ತಕ್ಕೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ
ಚರಿತ್ ಅಸಲಂಕಾ ಅಮೋಘ ಅರ್ಧ ಶತಕ, ಶ್ರೀಲಂಕಾ ವಿನ್
ಬಾಂಗ್ಲಾ ವಿರುದ್ಧ ಲಂಕಾ ಮತೀಶ ಪತಿರಾನ ಭರ್ಜರಿ ಬೌಲಿಂಗ್
ಶ್ರೀಲಂಕಾದ ಪಲ್ಲೆಕಲ್ಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.
ಟಾಸ್ ಗೆದ್ದುಕೊಂಡ ಬಾಂಗ್ಲಾ ತಂಡದ ಕ್ಯಾಪ್ಟನ್ ಶಕೀಬ್ ಅಲ್ ಹಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕ್ರೀಸ್ ಆಗಮಿಸಿದ ಓಪನರ್ಸ್ ಉತ್ತಮ ಆರಂಭವೇನು ಪಡೆಯಲಿಲ್ಲ. 36 ರನ್ಗಳಿರುವಾಗಲೇ ತಂಡ ಪ್ರಮುಖವಾದ 3 ವಿಕೆಟ್ಗಳನ್ನು ಕಳೆದುಕೊಂಡಿತು. ಹೀಗಾಗಿ ಸಂಕಷ್ಟದಲ್ಲಿದ್ದ ಬಾಂಗ್ಲಾಕ್ಕೆ ನಜಮುಲ್ ಹೋಸಿಮ್ ಶಾಂಟೋ ಬಾರಿಸಿದ 89 ರನ್ಗಳು ಆಸರೆಯಾದವು. ಇದರಿಂದ ತಂಡ 100 ರ ಗಡಿ ದಾಟಲು ಶಾಂಟೋ ಕಾರಣರಾದರು. ಇವರ ನಂತರ ಬಂದ ಎಲ್ಲ ಆಟಗಾರರು 20ರ ಗಡಿ ದಾಟಲಿಲ್ಲ. ಲಂಕಾದ ಮತೀಶ ಪತಿರಾನ (4 ವಿಕೆಟ್) ಬೌಲಿಂಗ್ಗೆ ಬಾಂಗ್ಲಾ ತತ್ತರಿಸಿ ಹೋಯಿತು. ಹೀಗಾಗಿ ಬಾಂಗ್ಲಾ 42 ಓವರ್ಗಳಲ್ಲಿ 164 ರನ್ಗೆ ಆಲೌಟ್ ಆಯಿತು.
ಬಳಿಕ ಗುರಿ ಬೆನ್ನಟ್ಟಿದ ಶ್ರೀಲಂಕಾದ ಬ್ಯಾಟ್ಸ್ಮನ್ಗಳು ಕೂಡ ಆರಂಭಿಕ ಆಘಾತಕ್ಕೆ ಒಳಗಾದರು. ತಂಡದ ಮೊತ್ತ 43 ರನ್ಗಳಿರುವಾಗಲೇ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ ಸದೀರ ಸಮರವಿಕ್ರಮಸ್ತನ ಅರ್ಧ ಶತಕ (54) ಹಾಗೂ ಚರಿತ್ ಅಸಲಂಕಾ ಅವರ 62 ರನ್ಗಳಿಂದಾಗಿ ಶ್ರಿಲಂಕಾ ಗೆಲುವಿನ ದಡ ಸೇರಿತು. ಇನ್ನು ಶ್ರೀಲಂಕಾ 39 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಇದರಿಂದ 2023ರ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಶುಭಾರಂಭ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ