newsfirstkannada.com

ಟಾಸ್ ಗೆದ್ದ ಲಂಕಾ, ಭಾರತ ಫಸ್ಟ್​ ಬ್ಯಾಟಿಂಗ್, ಸೂರ್ಯ ಆಡ್ತಾರಾ.. ಪ್ಲೇಯಿಂಗ್- 11 ಯಾಱರಿಗೆ ಚಾನ್ಸ್?

Share :

02-11-2023

    ಫ್ಯಾನ್ಸ್​ ಕಣ್ಣು ವಿರಾಟ್​ ಕೊಹ್ಲಿ 49ನೇ ಶತಕದ ಮೇಲೆ, ಏನಾಗುತ್ತೋ?

    ಎಂದಿನಂತೆ ಬ್ಯಾಟಿಂಗ್​ನಲ್ಲಿ ಆರ್ಭಟಿಸ್ತಾರಾ ಕ್ಯಾಪ್ಟನ್ ರೋಹಿತ್?

    ವಾಂಖೆಡೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ವಿನ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮ್ಯಾಚ್​ನಲ್ಲಿ ಶ್ರೀಲಂಕಾ ಟೀಮ್​ ಟಾಸ್ ವಿನ್ ಆಗಿದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಬ್ಯಾಟಿಂಗ್​ಗೆ ಇಳಿಯಲಿದೆ.

ಸದ್ಯ ವರ್ಲ್ಡ್​​ಕಪ್​ನಲ್ಲಿ ಭಾರತ ತಂಡ ಸೋಲಿಲ್ಲದ ವೀರನಂತೆ ಮುನ್ನುಗ್ಗುತ್ತಿದೆ. ಕಳೆದ 6 ಪಂದ್ಯಗಳಲ್ಲೂ ಉತ್ತಮವಾಗಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ 6ರಲ್ಲೂ ವಿಜಯ ಮಾಲೆ ಧರಿಸಿಕೊಂಡಿದೆ. ಸದ್ಯ ನಡೆಯುತ್ತಿರುವ 7ನೇ ಪಂದ್ಯದಲ್ಲಿ ಭಾರತದ ಪರ ಓಪನರ್​ ಆಗಿ ರೋಹಿತ್ ಶರ್ಮಾ ಜೊತೆ ಶುಭ್​ಮನ್ ಗಿಲ್​ ಬ್ಯಾಟ್ ಬೀಸಲಿದ್ದು ಉತ್ತಮ ಆರಂಭ ಒದಗಿಸುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್​ ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ತಂಡಕ್ಕೆ ನೆರವಾಗಲಿದ್ದಾರೆ.

ಅಲ್ಲದೇ ಸಚಿನ್ ತವರೂರಲ್ಲಿ ವಿರಾಟ್ ಕೊಹ್ಲಿ 49ನೇ ಶತಕ ಸಿಡಿಸಿ ಸೆಂಚುರಿ ದಾಖಲೆಗೆ ಸರಿ ಸಮನಾಗಿವಾಗಿ ನಿಲ್ಲುವ ತವಕದಲ್ಲಿದ್ದಾರೆ. ಇದು ನೆರವೇರಬೇಕೆಂದರೆ ವಿರಾಟ್ ಬ್ಯಾಟ್​ನಿಂದ ಶತಕದಾಟ ಬರಬೇಕು ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. ಇನ್ನು ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯ ಮೈದಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಎಂದಿನಂತೆ ರವೀಂದ್ರ ಜಡೇಜಾ ಕಣದಲ್ಲಿ ಇರಲಿದ್ದಾರೆ. ಭಾರತದ ಬೌಲಿಂಗ್ ಪಡೆ ಕೂಡ ಒಳ್ಳೆಯ ದಾಳಿ ಮಾಡಿ ಎದುರಳಿಗಳನ್ನ ನೆಲಕ್ಕುರುಳಿಸುತ್ತಿದೆ. ಬುಮ್ರಾ, ಶಮಿ, ಸಿರಾಜ್, ಕುಲ್​ದೀಪ್ ಯಾದವ್ ಲಂಕನ್ನರ ಮೇಲೆ ಸವಾರಿ ಮಾಡಲಿದ್ದಾರೆ.

ಇನ್ನು ಶ್ರೀಲಂಕಾ ಟೀಮ್ 6 ಪಂದ್ಯಗಳಲ್ಲಿ 2 ಮಾತ್ರ ಗೆದ್ದು ಉಳಿದ ಪಂದ್ಯಗಳಲ್ಲಿ ಸೋಪೋಪ್ಪಿಕೊಂಡಿದೆ. ಇಂದಿನ ಪಂದ್ಯದಲ್ಲಿ ಕುಸಲ ಮೆಂಡೀಸ್ ಪಡೆ ಭಾರತವನ್ನು ಕಟ್ಟಿ ಹಾಕಲು ರಣ ತಂತ್ರ ರೂಪಿಸಿದ್ದು ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದೆ.

ಟೀಮ್​ ಇಂಡಿಯಾದ ಪ್ಲೇಯಿಂಗ್- 11

ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್​ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್, ರವೀಂದ್ರ ಜಡೇಜಾ, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಸಿರಾಜ್ ಬುಮ್ರಾ, ಕುಲ್​ದೀಪ್ ಯಾದವ್,

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾಸ್ ಗೆದ್ದ ಲಂಕಾ, ಭಾರತ ಫಸ್ಟ್​ ಬ್ಯಾಟಿಂಗ್, ಸೂರ್ಯ ಆಡ್ತಾರಾ.. ಪ್ಲೇಯಿಂಗ್- 11 ಯಾಱರಿಗೆ ಚಾನ್ಸ್?

https://newsfirstlive.com/wp-content/uploads/2023/09/ROHIT-1-3.jpg

Load More