newsfirstkannada.com

ಕರ್ನಾಟಕದ ಮೇಲೆ ಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​ ಕಣ್ಣು! ಕಾರ್ಖಾನೆ ಸ್ಥಾಪಿಸಲು ಹೊರಟ ಸ್ಪಿನ್​ ಮಾಂತ್ರಿಕ

Share :

17-08-2023

    ಚಾಮರಾಜನಗರದಲ್ಲಿ ಕಾರ್ಖಾನೆ ಸ್ಥಾಪಿಸಲು ಹೊರಟ ಮುತ್ತಯ್ಯ

    400 ಕೋಟಿಗೂ ಅಧಿಕ ಮೊತ್ತದ ಹಣವನ್ನು ಹೂಡಿಕೆ ಮಾಡಿದ ಕ್ರಿಕೆಟಿಗ

    ಸಾಪ್ಟ್ ಡ್ರಿಂಕ್ ಹಾಗೂ ನಾನ್ ಆಲ್ಕೋಹಾಲಿಕ್ ಡ್ರಿಂಕ್​ಗಳ ಉತ್ಪಾದನೆ

ವಿಶ್ವ ವಿಖ್ಯಾತ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಚಾಮರಾಜನಗರದಲ್ಲಿ ಕಾರ್ಖಾನೆ ಸ್ಥಾಪನೆ ಮಾಡುತ್ತಿದ್ದಾರೆ. ಕೈಗಾರಿಕೋದ್ಯಮಿಯಾಗಿ ಮುರಳೀಧರನ್ ಕರ್ನಾಟಕಕ್ಕೆ ಬರುತ್ತಿದ್ದು ಚಾಮರಾಜನಗರದಲ್ಲಿ ಕಾರ್ಖಾನೆ ಸ್ಥಾಪನೆ ಮಾಡುತ್ತಿದ್ದಾರೆ.

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಫ್ಟ್ ಡ್ರಿಂಕ್ ಕಾರ್ಖಾನೆಯನ್ನು ಆರಂಭಿಸುತ್ತಿದ್ದು 46.3 ಎಕರೆ ಪ್ರದೇಶವನ್ನು ಖರೀದಿಸಿ, ಆಡಳಿತಾತ್ಮಕವಾದ ಎಲ್ಲಾ ಹಂತಗಳನ್ನೂ ಮುಗಿಸಿ ಕಾರ್ಖಾನೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಶ್ರೀಲಂಕಾ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​

ಮುತ್ತಯ್ಯ ಬೆವರೇಜಸ್ ಹೆಸರಿನಲ್ಲಿ ಸಾಫ್ಟ್ ಡ್ರಿಂಕ್, ಕೂಲ್ ಡ್ರಿಂಕ್, ಸುವಾಸಿತ ಹಾಲನ್ನು ಕ್ಯಾನ್ ಗಳಲ್ಲಿ ಮಾರಾಟ ಮಾಡಲಿದ್ದಾರೆ. ಇನ್ನು ಚಾಮರಾಜನಗರದಲ್ಲಿ ಸಾಪ್ಟ್ ಡ್ರಿಂಕ್ ಹಾಗೂ ನಾನ್ ಆಲ್ಕೋಹಾಲಿಕ್ ಡ್ರಿಂಕ್ ಗಳು ತಯಾರಾಗಲಿದೆ ಎಂದು ತಿಳಿದುಬಂದಿದೆ.

400 ಕೋಟಿಗೂ ಅಧಿಕ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಿದ್ದು ಸ್ಥಳೀಯವಾಗಿ 800 ಮಂದಿಗೆ ನೌಕರಿ ಸಿಗಲಿದೆ, ಪರೋಕ್ಷವಾಗಿ ನೂರಾರು ಮಂದಿಗೆ ಕಾರ್ಖಾನೆಯಿಂದ ಸಹಾಯವಾಗಲಿದೆ. ಖ್ಯಾತ ಕ್ರಿಕೆಟಿಗ ಕಾರ್ಖಾನೆ ಆರಂಭಿಸುವುದರಿಂದ ಮತ್ತಷ್ಟು ಕೈಗಾರಿಕೆಗಳನ್ನು ಸೆಳೆಯಲು ಅನುಕೂಲವಾಗಲಿದೆ. ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಮುತ್ತಯ್ಯ ಮುರಳೀಧರನ್​ ಶ್ರೀಲಂಕಾದಲ್ಲಿ ಸಿಲೋನ್​ ಬೆವರೇಜ್​ ಕ್ಯಾನ್​​ (ಪ್ರೈ) ಲಿಮಿಟೆಡ್​​ ಉದ್ಯಮ ನಡೆಸುತ್ತಿದ್ದಾರೆ. ರಿಲಯನ್ಸ್​ ಕಂಪನಿಗೆ ಸೇರಿದ ಕ್ಯಾಂಪಾ ಎಂಬ ತಂಪು ಪಾನೀಯದ ಬಾಟ್ಲಿಂಗ್​ ನಡೆಸುತ್ತಿದ್ದಾರೆ. ಇದೀಗ ಕರ್ನಾಟಕದಲ್ಲೂ ತಮ್ಮ ಉದ್ಯಮ ಸ್ಥಾಪಿಸುವ ಗುರಿ ಹೊಂದಿದ್ದಾರೆ. 46.3 ಎಕರೆಯಲ್ಲಿ ಕಾರ್ಖಾನೆ ನಿರ್ಮಾಣ ಆಗಲಿದೆ. ಮುಂದಿನ 8 ತಿಂಗಳಲ್ಲಿ ಕಾರ್ಖಾನೆ ಕಾರ್ಯರಂಭ ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದ ಮೇಲೆ ಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​ ಕಣ್ಣು! ಕಾರ್ಖಾನೆ ಸ್ಥಾಪಿಸಲು ಹೊರಟ ಸ್ಪಿನ್​ ಮಾಂತ್ರಿಕ

https://newsfirstlive.com/wp-content/uploads/2023/08/muthayya-muraleedharan.jpg

Load More