newsfirstkannada.com

ಕಾಶ್ಮೀರದಲ್ಲಿ ಶೃಂಗೇರಿಯ ಶಾರದಾಂಬ ಪ್ರಾಣ ಪ್ರತಿಷ್ಠೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮ ಸಂಪನ್ನ

Share :

07-06-2023

  ಜಗದ್ಗುರು ಸನ್ನಿಧಾನ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ

  ಶೃಂಗೇರಿಯಿಂದ ಸಂಪ್ರದಾಯದಂತೆ ಶ್ರೀಚಕ್ರ ಪ್ರತಿಷ್ಠಾಪನೆ

  ಶೃಂಗೇರಿಯಿಂದಲೇ ತೆರಳಿದ್ದ ಋತ್ವಿಕ ಶ್ರೇಷ್ಠರಿಂದ ಹೋಮ, ಹವನ

ಶ್ರೀನಗರ: ಕಾಶ್ಮೀರದ ಗಡಿಯಲ್ಲಿ ಶಾರದಾಂಬ ಪ್ರಾಣ ಪ್ರತಿಷ್ಠೆ ಮತ್ತು ಕುಂಬಾಭಿಷೇಕದಂತ ಐತಿಹಾಸಿಕ ಕಾರ್ಯಕ್ರಮ ಸಂಪನ್ನಗೊಂಡಿದೆ. ಶೃಂಗೇರಿಯ ಜಗದ್ಗುರು ಸನ್ನಿಧಾನ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ, ಶೃಂಗೇರಿಯಿಂದಲೇ ತೆರಳಿದ್ದ ಋತ್ವಿಕ ಶ್ರೇಷ್ಠರು ಇಲ್ಲಿನ ಸಂಪ್ರದಾಯದಂತೆ ಶ್ರೀಚಕ್ರ ಪ್ರತಿಷ್ಠಾಪಿಸಿ, ಹೋಮ ಹವನ ನಡೆಸಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಳಿಸಿದ್ದಾರೆ.

ಕಳೆದ ಜೂನ್ 4ರಂದೇ ಜಗದ್ಗುರು ಸನ್ನಿಧಾನ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಅವರು ವಿಶೇಷ ವಿಮಾನದ ಮೂಲಕ ಶ್ರೀನಗರ ತಲುಪಿದ್ದರು. ಅಲ್ಲಿ ಅವರ ಮುಂದಿನ ಪ್ರಯಾಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಕಲ ಸಿದ್ಧತೆಯನ್ನು ಮಾಡಿತ್ತು. ಬಾಂಬ್ ನಿರೋಧಕ ವಾಹನ,‌ ಗಡಿ ಸಮೀಪ ತಲುಪಲು ಮಿಲಿಟರಿ ಹೆಲಿಕ್ಯಾಪ್ಟರ್, ಸೈನ್ಯದ ರಕ್ಷಣೆ ಮುಂತಾದ ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು. ಶ್ರೀನಗರದಲ್ಲಿ ಉಪರಾಜ್ಯಪಾಲರು ಗುರುದರ್ಶನ ಮಾಡಿ ಆಶೀರ್ವಾದ ಪಡೆದಿದ್ದಾರೆ. ದೇವಸ್ಥಾನ ಸನಿಹದ ಹೆಲಿಪ್ಯಾಡಿನಲ್ಲಿ ಇಳಿಯುತ್ತಿದ್ದಂತೆ ಜಗದ್ಗುರುಗಳನ್ನು ಅಲ್ಲಿನ ಜಿಲ್ಲಾಧಿಕಾರಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡಿದ್ದಾರೆ.

ಪಾಕ್ ಗಡಿಗೆ ಹೊಂದಿಕೊಂಡಂತೆ ಇರುವ ಈ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಇದರ ಜೊತೆಗೆ ಗಡಿಯಲ್ಲಿ ಗಣಹೋಮ ಸೇರಿದಂತೆ ವಿವಿದ ಹೋಮ ಹವನ ನಡೆದಿದ್ದು ಒಂದು ವಿಶೇಷ ಅಧ್ಯಾಯಕ್ಕೆ ನಾಂದಿ ಹಾಡಿದಂತಾಯಿತು. ಭರತ ವರ್ಷದ ಚರಿತ್ರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಘಟನೆ ಇದು.

ಭಾನುವಾರ ಒಂದು ದಿನದ ವಾಸ್ತವ್ಯದ ನಂತರ ಮತ್ತೆ ಅದೇ ಸೈನ್ಯ ಹೆಲಿಕ್ಯಾಪ್ಟರ್ ಮೂಲಕ ಜಗದ್ಗುರುಗಳು ಶ್ರೀನಗರಕ್ಕೆ ಹಿಂತಿರುಗಿ ಅಲ್ಲೇ ವಾಸ್ತವ್ಯ ಮಾಡಿದ್ದಾರೆ. ಅಂದು ಶ್ರೀನಗರದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಿದೆ. ಸೋಮವಾರ ಬೆಳಗ್ಗೆ ಶ್ರೀನಗರದ ಶಂಕರಾಚಾರ್ಯ ಬೆಟ್ಟಕ್ಕೆ ತಿರಳಿದ ಜಗದ್ಗುರುಗಳು ಅಲ್ಲಿ ಶಿವಪೂಜೆ ನೆರವೇರಿಸಿದ್ದಾರೆ. ಮಹೇಶ್ವರನಿಗೆ 1008 ರುದ್ರಾಕ್ಷಿ ಮಾಲೆ, ಕಮಲ ಪುಷ್ಪ ಮತ್ತು ರಜತ ಬಿಲ್ವಪತ್ರೆ ಸಮರ್ಪಿಸಿ ಜಗದ್ಗುರುಗಳಿಂದ ವಿಶೇಷ ಪೂಜೆ ಸಂದಿದೆ. ದೇವತಾ ಕಾರ್ಯ ಯಶಸ್ವಿಯಾಗಿ ಮುಗಿಸಿದ ನಂತರ ಜಗದ್ಗುರುಗಳು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ಶೃಂಗೇರಿಯತ್ತ ಪ್ರಯಾಣಿಸಿದ್ದಾರೆ.

ಶಂಕರಾಚಾರ್ಯರು ಕಾಶ್ಮೀರದಿಂದ ಜಗನ್ಮಾತೆ ಶಾರದೆಯನ್ನು ಶೃಂಗೇರಿಗೆ ತಂದು ಶ್ರೀಚಕ್ರ ಪ್ರತಿಷ್ಠಾಪಿಸಿ ಶಾರದೆಯನ್ನು ಇಲ್ಲಿ ನೆಲೆಗೊಳಿಸಿದಂತೆ, ಸಹಸ್ರಾರು ವರ್ಷಗಳ ನಂತರ ಶೃಂಗೇರಿಯ ಶಂಕರಾಚಾರ್ಯರು ಶೃಂಗೇರಿಯಿಂದಲೇ ಅಮ್ಮನವರನ್ನು ಕಾಶ್ಮೀರಕ್ಕೂ ಕರೆತಂದು ಶ್ರೀಚಕ್ರ ಪ್ರತಿಷ್ಠಾಪಿಸಿ ಕಾಶ್ಮೀರದಲ್ಲೇ ಜಗನ್ಮಾತೆಯನ್ನು ನೆಲೆಗೊಳಿಸಿದ್ದು ಸನಾತನ ಧರ್ಮದ ಇತಿಹಾಸದಲ್ಲೇ ಪವಿತ್ರ ಘಟನೆ.

ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳು ಆಗಲೇ ಶಂಕರ ಸ್ಥಾಪಿತ ಬದರಿ ಮತ್ತು ದ್ವಾರಕಾ ಪೀಠದ ಜಗದ್ಗುರುಗಳ ಪಟ್ಟಾಭಿಷೇಕ ಮಹೋತ್ಸವ ನಡೆಸಿಕೊಟ್ಟು ಶಂಕರಾಚಾರ್ಯರ ನಂತರ ಪುನಃ ಇದನ್ನು ನಡೆಸಿದ ಪ್ರಥಮ ಗುರುಗಳೆಂಬ ಕೀರ್ತಿಗೆ ಭಾಜನರಾಗಿದ್ದರು. ಈಗ ಶಂಕರಾಚಾರ್ಯರಂತೆ ಕಾಶ್ಮೀರದಲ್ಲಿ ಭಾರತದ ಉತ್ತರದ ತುದಿಯಲ್ಲಿ ಜಗನ್ಮಾತೆಯನ್ನು ಪ್ರತಿಷ್ಠಾಪಿಸಿ ಅಭಿನವ ಶಂಕರರೆನಿಸಿದ್ದಾರೆ. ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾದವರೆಲ್ಲರೂ ಗುರುಕೃಪೆಗೆ ವಿಶೇಷವಾಗಿ ಪಾತ್ರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕಾಶ್ಮೀರದಲ್ಲಿ ಶೃಂಗೇರಿಯ ಶಾರದಾಂಬ ಪ್ರಾಣ ಪ್ರತಿಷ್ಠೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮ ಸಂಪನ್ನ

https://newsfirstlive.com/wp-content/uploads/2023/06/shrungeri-2.jpg

Load More