newsfirstkannada.com

ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಶ್ರೀರಸ್ತು ಶುಭಮಸ್ತು’ ಖ್ಯಾತಿಯ ಚಂದನ; ಹುಡುಗ ಯಾರು?

Share :

Published August 30, 2024 at 6:56am

    ಕುಟುಂಬಸ್ಥರ ಸಮ್ಮುಖದಲ್ಲಿನ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಂದನ

    ಸಿರಿ ಪಾತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ

    ನಟಿ ಚಂದನ್​ ಅಭಿನಯಕ್ಕೆ ಮನಸೋತಿದ್ದ ಸೀರಿಯಲ್​ ವೀಕ್ಷಕರು

ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಇದೇ ಸೀರಿಯಲ್​ನಲ್ಲಿ ಸಮರ್ಥ್ ಹೆಂಡತಿ ಹಾಗೂ ತುಳಸಿಯ ಸೊಸೆಯ ಪಾತ್ರದಲ್ಲಿ ನಟಿಸುತ್ತಿರೋ ನಟಿ ಚಂದನ ರಾಘವೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಶ್ರೀರಸ್ತು ಶುಭಮಸ್ತು ಸೀರಿಯಲ್​ ಆ ಒಂದು ಸೀನ್​ಗೆ ವೀಕ್ಷಕರಿಂದ ಭಾರೀ ಮೆಚ್ಚುಗೆ; ಯಾವುದು?

ಜೀ ಕನ್ನಡದ ಪ್ರಸಾರವಾಗುತ್ತಿರೋ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿ ಫಸ್ಟ್ ಫ್ರೆಂಡ್, ಬೆಸ್ಟ್ ಸೊಸೆಯಾಗಿ, ಮಗಳಾಗಿ ಹಾಗೂ ಸಮರ್ಥ್ ಪ್ರೀತಿಯ ಮಡದಿ ಸಿರಿಯಾಗಿ ನಟಿಸುತ್ತಿರೋ ನಟಿ ಚಂದನ ರಾಘವೇಂದ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಿರಿ ಪಾತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿಯನ್ನು ನೋಡಿ ಸೊಸೆ ಎಂದರೆ ಹೀಗಿರಬೇಕು ಅಂತ ಅಂದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ನಟಿ ಚಂದನ ರಾಘವೇಂದ್ರ ಅಭಿನಯಿಸುತ್ತಿದ್ದರು. ಸದ್ಯ ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ದಾರೆ. ಇನ್ನು, ನಟಿ ಚಂದನ ಅವರ ಕೈ ಹಿಡಿದ ವರ ಯಾರು ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ.

ಸದ್ಯ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಡಿಯೋವನ್ನು ಗಿಚ್ಚಿಗಿಲಿಗಿಲಿ ಹಾಸ್ಯ ನಟಿ ಸುಷ್ಮಿತಾ ಜಗ್ಗಪ್ಪ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಚಂದನಾ ಮದುವೆಗೆ ತೆರಳಿದ್ದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಜೋಡಿ ಮದುವೆಗೆ ನಟಿ ಸುಧಾರಾಣಿ, ಕನ್ನಡದ ನಟಿ ಹಾಗೂ ನಿರೂಪಕಿ ಜಾನ್ವಿ ರಾಯಲ ಅವರು ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಶ್ರೀರಸ್ತು ಶುಭಮಸ್ತು’ ಖ್ಯಾತಿಯ ಚಂದನ; ಹುಡುಗ ಯಾರು?

https://newsfirstlive.com/wp-content/uploads/2024/08/kannada-actress-1.jpg

Load More