newsfirstkannada.com

RRR ಬಳಿಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ ರಾಜಮೌಳಿ; ‘ಮೇಡ್‌ ಇನ್‌ ಇಂಡಿಯಾ’ದ ಪ್ಲಾನ್ ಏನು ಗೊತ್ತಾ?

Share :

19-09-2023

    ಅಭಿಮಾನಿಗಳಿಗೆ ಗುಡ್​ನ್ಯೂಸ್​​ ಕೊಟ್ಟ ನಿರ್ದೇಶಕ ಎಸ್.ಎಸ್. ರಾಜಮೌಳಿ

    ತಮ್ಮ ಮುಂದಿನ ಹೊಸ ಸಿನಿಮಾವನ್ನು ಘೋಷಣೆ ಮಾಡಿದ ಖ್ಯಾತ ನಿರ್ದೇಶಕ

    ವಿಡಿಯೋ ಶೇರ್​ ಮಾಡಿಕೊಂಡ ಎಸ್.ಎಸ್. ರಾಜಮೌಳಿ ಹೇಳಿದ್ದೇನು?

ಮಗಧೀರ, ಬಾಹುಬಲಿ, RRR ಖ್ಯಾತಿಯ ಚಿತ್ರ ನಿರ್ದೇಶಕ ಎಸ್.ಎಸ್ ರಾಜಮೌಳಿ ತನ್ನ ಅಭಿಮಾನಿಗಳಿಗೆ ಗುಡ್​ನ್ಯೂಸ್​​ವೊಂದನ್ನು ಕೊಟ್ಟಿದ್ದಾರೆ. RRR ಬಳಿಕ ತಮ್ಮ ಮುಂದಿನ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಭಾರತೀಯ ಸಿನಿಮಾ ರಂಗದ ಬಯೋಪಿಕ್ ಆಗಿರಲಿದೆಯಂತೆ. ಹೀಗಾಗಿ ಈ ಚಿತ್ರಕ್ಕೆ ‘ಮೇಡ್ ಇನ್ ಇಂಡಿಯಾ’ ಎಂದು ಹೆಸರನ್ನು ಇಟ್ಟಿದ್ದಾರೆ.

ಇದನ್ನು ಓದಿ: BREAKING: ಭಾರತೀಯ ಸೇನೆಗೆ ದೊಡ್ಡ ಯಶಸ್ಸು; ಮೋಸ್ಟ್‌ ವಾಂಟೆಡ್‌ ಉಗ್ರ ಉಜೈರ್ ಖಾನ್‌ ಫಿನಿಶ್‌

ಇಂದು ಈ ಸಿನಿಮಾದ ಟೈಟಲ್ ಅನ್ನು ರಾಜಮೌಳಿ ಅವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ. ಈ ಚಿತ್ರವನ್ನು ಎಸ್​​ ಎಸ್​ ರಾಜಮೌಳಿ ಅವರ ಪುತ್ರ ಎಸ್.ಎಸ್.ಕಾರ್ತಿಕೇಯ ಮತ್ತು ವರುಣ್ ಗುಪ್ತಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿತಿನ್ ಕಕ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗವು ಹೇಗೆ ಅಂದಿನಿಂದ ಇಂದಿನವರೆಗೆ ಬೆಳೆದು ಬಂದಿದೆ. ಈ ನಡುವೆ ರಾಜಮೌಳಿ ಅವರು ತಮ್ಮ ಕನಸಿನ ಯೋಜನೆ ಬಗ್ಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣವಾದ X  ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿರುವ ಎಸ್‌.ಎಸ್‌ ರಾಜಮೌಳಿ ಅವರು ಬಯೋಪಿಕ್ ಮಾಡುವುದೇ ಒಂದು ಕಠಿಣವಾದ ಸಂಗತಿ. ಆದರೆ ಇದರ ಜೊತೆಗೆ ಭಾರತೀಯ ಸಿನಿಮಾದ ಪಿತಾಮಹನ ಬಗ್ಗೆ ಕಲ್ಪಿಸಿಕೊಳ್ಳುವುದು ಇನ್ನೂ ಹೆಚ್ಚು ಮಹತ್ವದ ಸಂಗತಿಯಾಗಿದೆ. ನಮ್ಮ ಹುಡುಗರು ಇದಕ್ಕೆ ಸಿದ್ಧರಾಗಿದ್ದಾರೆ. ಇದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅಪಾರವಾದ ಹೆಮ್ಮೆಯಿಂದ, ಮೇಡ್ ಇನ್ ಇಂಡಿಯಾ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RRR ಬಳಿಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ ರಾಜಮೌಳಿ; ‘ಮೇಡ್‌ ಇನ್‌ ಇಂಡಿಯಾ’ದ ಪ್ಲಾನ್ ಏನು ಗೊತ್ತಾ?

https://newsfirstlive.com/wp-content/uploads/2023/09/ss-rajmovi.jpg

Load More