ಆರ್ಎಸ್ಎಸ್ ಚರಿತ್ರೆ ಕುರಿತು ಚಿತ್ರ ನಿರ್ಮಾಣಕ್ಕೆ ಚಿಂತನೆ
ದೃಶ್ಯಕಾವ್ಯಗಳ ಮಾಂತ್ರಿಕನ ಮೇಲೆ ಕಣ್ಣಿಟ್ಟ ಸಂಘ ಪರಿವಾರ
RSS ಕಥೆ ಓದಿ ಭಾವುಕರಾಗಿದ್ದಾರಂತೆ ರಾಜಮೌಳಿ
ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ RSS ಸಿನಿಮಾ ಮೂಲಕ ಪ್ರಚಾರಕ್ಕೆ ಪ್ಲಾನ್ ಮಾಡಿದ್ಯಾ? ಬಾಹುಬಲಿ, RRR ಖ್ಯಾತಿಯ SS ರಾಜಮೌಳಿ ಆರ್ಎಸ್ಎಸ್ ಚರಿತ್ರೆ ಬಗ್ಗೆ ಸಿನಿಮಾ ಮಾಡಲು ಹೊರಟಿರೋದು ಇಂತಹದೊಂದು ಸುಳಿವು ನೀಡಿದೆ. RSS ಚರಿತ್ರೆಯ ಸಿನಿಮಾ ಬಗ್ಗೆ ಈಗಾಗಲೇ ಕಥೆ ಕೂಡ ರೆಡಿ ಆಗಿದ್ಯಂತೆ. ಯಾವುದು ಆ ಸಿನಿಮಾ? ಹೀರೋ ಯಾರು ಅನ್ನೋ ಚರ್ಚೆಗಳು ಜೋರಾಗಿದೆ.
ಇದನ್ನೂ ಓದಿ: ‘ವಿಶ್ವಕ್ಕೆ ಭಾರತವೇ ಮಾದರಿ, ಭಾರತವೇ ಭರವಸೆ’- ದೇಶದ ಪ್ರಗತಿ ಕೊಂಡಾಡಿದ ಬಿಲ್ ಗೇಟ್ಸ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚರಿತ್ರೆ ಹೇಳುವ ಸಿನಿಮಾ ತೆಗೆಯಲು ಈಗಾಗಲೇ ಪೂರ್ವ ತಯಾರಿಯನ್ನು RSS ಆರಂಭಿಸಿದೆ. ಖುದ್ದು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂಘ ಪರಿವಾರದ ಚರಿತ್ರೆಯ ಕಥೆಯೊಂದನ್ನ ಬರೆದಿದ್ದಾರಂತೆ. ಬಿಜೆಪಿ ನಾಯಕರು, RSS ಮುಖಂಡರು ವಿಜಯೇಂದ್ರ ಪ್ರಸಾದ್ಗೆ ಚಿತ್ರಕಥೆಗೆ ಬೇಕಾದ ಮಾಹಿತಿ ರವಾನಿಸಿದ್ದಾರೆ. ತಂದೆ ಬರೆದಿರುವ RSS ಕಥೆಯನ್ನ ಓದಿಯೇ ರಾಜಮೌಳಿ ಭಾವುಕರಾದರು ಎನ್ನಲಾಗಿದೆ.
ಇದನ್ನೂ ಓದಿ:ಸೇಬು ಹಣ್ಣು, ಬಾಟಲಿಗಳಿಂದ ಹಲ್ಲೆ.. ದೆಹಲಿ ಪಾಲಿಕೆಯಲ್ಲಿ ಆಗಿದ್ದೇನು..?
ಬೆಂಗಳೂರು ಮೂಲದ ಚಿತ್ರ ನಿರ್ಮಾಪಕನಿಂದ ರಾಜಮೌಳಿ ಈ ಪ್ಯಾನ್ ಇಂಡಿಯಾ ಸಿನಿಮಾವನ್ನ ತಯಾರಿಸುವ ಸಾಧ್ಯತೆ ಇದೆ. 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ರಾಜಮೌಳಿ ಅವರ RSS ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡಲಾಗಿದ್ಯಂತೆ. ಈ ಸಿನಿಮಾ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರ ಇಡೀ ದೇಶದ ಜನರ ಮನೆ-ಮನ ತಲುಪೋಕೆ ಮುಂದಾಗುತ್ತಿದೆ ಅನ್ನೋ ತಂತ್ರಗಾರಿಕೆಯೂ ಇದರ ಹಿಂದಿದೆ. RSS ಚರಿತ್ರೆಯ ಈ ಚಿತ್ರಕ್ಕೆ ಹೀರೋ ಯಾರಾಗ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ಮೇಲೆ ಸಂಘ ಪರಿವಾರದ ಕಣ್ಣು ಬಿದ್ದಿದ್ದು ಒಂದು ಬಾರಿ ಅಪ್ರೋಚ್ ಕೂಡ ಮಾಡಿದ್ದಾರೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಚಿತ್ರಪ್ರೇಮಿಗಳೇ’ ವೀಕ್ಷಿಸಿ