ಹಾಲಿವುಡ್ನ ಬಾಂಡ್ ಮಾದರಿಯ ಸಿನಿಮಾ ಮಾಡಲು ಸಜ್ಜಾದ ರಾಜಮೌಳಿ!
ಅಮೆಜಾನ್ ಕಾಡಲ್ಲಿ ಸಾಗುವ ಈ ಕಥೆಗೆ ಪ್ರೇರಣೆಯಾಗಿದ್ದೇ ಆ ಒಂದು ಕಾದಂಬರಿ
ಜಕ್ಕಣ್ಣರ ಈ ಹೊಸ ಸಿನಿಮಾದಲ್ಲಿ ಬಾಂಡ್ ಆಗಿ ಕಾಣಿಸಿಕೊಳ್ಳುತ್ತಿರುವ ನಟ ಯಾರು?
ಹೈದ್ರಾಬಾದ್: ನಿರ್ದೇಶಕ ರಾಜಮೌಳಿ, ಜನರ ನಾಡಿಮಿಡಿತವನ್ನು ಸ್ಪಷ್ಟವಾಗಿ ಅರಿ ವಿರಳಾತಿವಿರಳ ನಿರ್ದೇಶಕರಲ್ಲಿ ಒಬ್ಬರು. ಒಂದು ಸಿನಿಮಾವನ್ನು ಅದ್ಭುತ ದೃಶ್ಯಕಾವ್ಯವನ್ನಾಗಿಸುವ ಕಲೆ, ಎಲ್ಲಿ ಮೀಟಿದರೆ ಪ್ರೇಕ್ಷನ ಯಾವ ಭಾವ ಹೇಗೆ ಹೊರಹೊಮ್ಮುವುದು ಎಂದು ಅರಿತ ಅತಿ ಚತುರ ನಿರ್ದೇಶಕರಲ್ಲಿ ರಾಜಮೌಳಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. RRR ಸಿನಿಮಾವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ನಿರ್ದೇಶನ ಮಾಡಿ ಮತ್ತೊಮ್ಮೆ ಸೈ ಎನಿಸಿಕೊಂಡ ನಿರ್ದೇಶಕ, ಎರಡು ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಬಾಹುಬಲಿಯಂತಹ, ಆರ್ಆರ್ಆರ್ ಬಳಿಕ ಈಗ ಮತ್ತೊಂದು ವಿಭಿನ್ನ ರೀತಿಯ ಕತೆಯನ್ನು ಹಿಡಿದುಕೊಂಡು ಪ್ರೇಕ್ಷರ ಎದುರು ಬರುವ ಸೂಚನೆಯನ್ನು ನೀಡಿದ್ದಾರೆ ಜಕ್ಕಣ್ಣ
ಇದನ್ನೂ ಓದಿ: ಮೊದಲ ಬಾರಿ ಮಗನ ಮುಖವನ್ನು ರಿವೀಲ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ದಂಪತಿ
ಮತ್ತೊಬ್ಬ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುವಿಗೆ ಈ ಬಾರಿ ರಾಜಮೌಳಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಬಾರಿಯ ತಮ್ಮ ಸಿನಿಮಾವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ರಾಜಮೌಳಿ ಬೇರೆಯದ್ದೇ ಜಾನರ್ನ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾಗೆ SSMB29 ಎಂದು ಟೈಟಲ್ ನೀಡಲಾಗಿದ್ದು ಡಿಸೆಂಬರ್ನಿಂದ ಸಿನಿಮಾ ಶುರುವಾಗುವ ಸೂಚನೆ ಸಿಕ್ಕಿದೆ. ಈ ಸಿನಿಮಾ ವಿಚಾರವಾಗಿ ಕಲಾವಿದರ ಆಯ್ಕೆ ಹಾಗೂ ಚಿತ್ರತಂಡದ ಬಗ್ಗೆ ಸದ್ಯದಲ್ಲಿಯೇ ಗೊತ್ತಾಗಲಿದೆ.ಮುಂದಿನ ವಾರದಲ್ಲಿಯೇ ಸಿನಿಮಾವನ್ನು ಅನೌನ್ಸ್ ಮಾಡುವ ಎಲ್ಲಾ ಸಾಧ್ಯತೆಗಳು ಇವೆ.
ಸದ್ಯ ಬಂದ ಮಾಹಿತಿಗಳ ಪ್ರಕಾರ ಈ ಸಿನಿಮಾ ಹಾಲಿವುಡ್ನ ಜೇಮ್ಸ್ ಬಾಂಡ್ ಶೈಲಿಯಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಜಮೌಳಿ ತಂದೆ ಮತ್ತು ಬರಹಗಾರ ವಿಜಯೇಂದ್ರ ಪ್ರಸಾದ್ ಈ ಕಥೆಯ ಎಳೆಯೊಂದನ್ನು ಹೇಳಿದ್ದರು. ಇದರ ಜೊತೆಗೆ ಅವರು ಮತ್ತು ಅವರ ಪುತ್ರ ರಾಜಮೌಳಿ ಇಬ್ಬರೂ ದಕ್ಷಿಣ ಆಫ್ರಿಕಾದ ಪ್ರಖ್ಯಾತ ಬರಹಗಾರ ವಿಲ್ಬರ್ ಸ್ಮಿತ್ನ ಅಭಿಮಾನಿಗಳು ಅಂತಲೂ ವಿಜಯೇಂದ್ರಪ್ರಸಾದ್ ಹೇಳಿದ್ದರು. ಅದಲ್ಲದೇ ಈ ಸಿನಿಮಾ ಕೂಡ ಸ್ಮಿತ್ ಬರೆದ ಕಾದಂಬರಿಯ ಆಧಾರಿತವಾಗಿಯೇ ಸಾಗಲಿದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಅಮೆಜಾನ್ನ ದಟ್ಟ ಕಾಡಿನಲ್ಲಿ ಸೆಟ್ ಹಾಕಿ ಸಿನಿಮಾ ಮಾಡುವ ಬಹುದೊಡ್ಡ ಕನಸಿನಲ್ಲಿ ಸದ್ಯ ರಾಜಮೌಳಿ ಟೀಮ್ ಇದೆ. ಇದೊಂದು ಅದ್ಭುತ ಹಾಗೂ ಥ್ರಿಲ್ಲರ್ ಸಿನಿಮಾವಾಗಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಪ್ಪು, ಕಿಚ್ಚನಿಗೂ ಕೊರಿಯೋಗ್ರಫಿ ಮಾಡಿದ ಈ ಜಾನಿ ಮಾಸ್ಟರ್ ಯಾರು? ಮದ್ವೆಯಾಗಿ ಮಕ್ಕಳಿದ್ರೂ ಹೀಗೆ ಮಾಡಿದ್ರಾ?
ಇನ್ನು ಈ ಸಿನಿಮಾಗೆ ದುರ್ಗಾ ಆರ್ಟ್ಸ್ ಬ್ಯಾನರ್ನ ಕೆ.ಎಲ್ ನಾರಾಯಣ ಬಂಡಾವಳ ಹೂಡಲಿದ್ದಾರೆ. 2027ರಲ್ಲಿ ಈ ಸಿನಿಮಾ ಬೆಳ್ಳೆ ತೆರೆಗೆ ಬಂದು ಅಪ್ಪಳಿಸಲಿದ್ದು ಈ ಬಾರಿ ಜಕ್ಕಣ್ಣ ಯಾವ ರೀತಿಯ ದೃಶ್ಯಕಾವ್ಯವನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲಿದ್ದಾರೆ ಅನ್ನೋ ಕುತೂಹಲ ಸದ್ಯ ಚಿತ್ರಪ್ರೇಮಿಗಳಲ್ಲಿ ಮೂಡಿದೆ. ಈ ಸಿನಿಮಾ ಬಜೆಟ್ 500 ರಿಂದ 750 ಕೋಟಿಯಲ್ಲಿ ನಿರ್ಮಾಣವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ