ಸಾರ್ವಜನಿಕ ಸಭೆಗೆ ಕಂಟಕವಾಯ್ತು ಬಿರುಗಾಳಿ
ಸಣ್ಣಪುಟ್ಟ ಗಾಯ, ಅಪಾಯದಿಂದ ಗಣ್ಯರು ಪಾರು
ಕುಸಿದು ಬೀಳುವ ವೀಡಿಯೋ ಹೆಂಗಿದೆ ಗೊತ್ತಾ..?
ಆಂಧ್ರ ಪ್ರದೇಶದ ಟಿಡಿಪಿ (ತೆಲುಗು ದೇಶಂ ಪಾರ್ಟಿ) ಸಾರ್ವಜನಿಕ ಸಭೆಯ ವೇದಿಕೆ ಗಾಳಿಯ ಹೊಡೆತಕ್ಕೆ ಕುಸಿದುಬಿದ್ದಿದೆ. ದುರ್ಘಟನೆಯಲ್ಲಿ ಟಿಡಿಪಿ ನಾಯಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲೂರು ಜಿಲ್ಲೆಯ ನುಜ್ವಿದ್ನಲ್ಲಿ ಟಿಡಿಪಿ ಪಕ್ಷವು Bavishyaktuki Guarantee program ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಗಾಳಿಯ ರಭಸಕ್ಕೆ ಸಿಕ್ಕ ವೇದಿಕೆಯು ಕುಸಿದಿದೆ. ಪರಿಣಾಮ ವೇದಿಕೆ ಮೇಲಿದ್ದ ಗಣ್ಯರು ನೆಲಕ್ಕೆ ಬಿದ್ದಿದ್ದಾರೆ.
ಈ ಸಭೆಯಲ್ಲಿ ಮಾಜಿ ಸಚಿವ ನಿಮ್ಮಕಯಾಲ ಚಿನ್ನರಾಜಪ್ಪ ಕೂಡ ಇದ್ದರು. ಚಿನ್ನರಾಜಪ್ಪ, ಚಿಂತಮನೇನಿ ಪ್ರಭಾಕರ್, ಪಿತಲಾ ಸುಜಾತ ಸೇರಿ ಒಟ್ಟು 15 ನಾಯಕರು ವೇದಿಕೆ ಮೇಲಿದ್ದರು. ಗಾಳಿಯ ಹೊಡೆತಕ್ಕೆ ಸಿಲುಕಿ ಅನಾಹುತ ಸಂಭವಿಸಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ವೇದಿಕೆ ಬೀಳುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿರುಗಾಳಿ ಹೊಡೆತಕ್ಕೆ ಹಠಾತ್ ಕುಸಿದ ವೇದಿಕೆ.. ಮಾಜಿ ಸಚಿವರೂ ಸೇರಿ 15 ಗಣ್ಯರು ನೆಲಕ್ಕೆ..! #StageCollapses #TDPMeeting #TDP @ncbn @iTDP_Official @RVR_TDP pic.twitter.com/M9NvXbuyS6
— NewsFirst Kannada (@NewsFirstKan) June 24, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ