newsfirstkannada.com

‘ಎಂದೆಂದಿಗೂ ನಾವು ನಿಮ್ಮೊಂದಿಗೆ’ ಟೀಮ್​ ಇಂಡಿಯಾ ಆಟಗಾರರಿಗೆ ಧೈರ್ಯ ಹೇಳಿದ ಪ್ರಧಾನಿ ಮೋದಿ

Share :

20-11-2023

    ಅಹಮದಾಬಾದ್​ನಲ್ಲಿ ನಡೆದ ವಿಶ್ವಕಪ್​ ಫೈನಲ್​​ನಲ್ಲಿ ಭಾರತಕ್ಕೆ ಸೋಲು

    ಸೋತರೂ ಟೀಮ್ ಇಂಡಿಯಾ ಜೊತೆ ನಿಂತ ಇಡೀ ದೇಶದ ಜನ

    ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿ ಪ್ಲೇಯರ್ಸ್​​ಗೆ ಹೇಳಿದ್ದೇನು?

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಸೋಲೊಪ್ಪಿಕೊಂಡಿದೆ. ಇದರಿಂದ ಬೇಸರದಲ್ಲಿರುವ ರೋಹಿತ್ ಶರ್ಮಾ ಸಾರಥ್ಯದ ತಂಡದ ಜೊತೆ ಫ್ಯಾನ್ಸ್ ಜೊತೆಯಾಗಿ ನಿಂತಿದ್ದಾರೆ. ಆಟದಲ್ಲಿ ಸೋಲು, ಗೆಲುವು ಸರಿಯಾಗಿ ಸ್ವೀಕರಿಸಬೇಕೆಂದು ಹೇಳುತ್ತಿದ್ದಾರೆ. ಬೆನ್ನಲ್ಲೇ ಪ್ರಧಾನಿ ಮೋದಿ ಟೀಮ್ ಇಂಡಿಯಾಗೆ ಧೈರ್ಯ ಹೇಳಿದ್ದಾರೆ.

ಫೈನಲ್ ಮ್ಯಾಚ್ ನೋಡಲು ಬಂದಿದ್ದ ಅಭಿಮಾನಿಗಳು

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿಯವರು, ಆತ್ಮೀಯ ಭಾರತದ ತಂಡದ ಆಟಗಾರರೇ ಇಂದಿಗೂ, ಮುಂದೆಯು ಎಂದೆಂದಿಗೂ ನಾವು ನಿಮ್ಮೊಂದಿಗೆ ಇರುತ್ತೇವೆ. ಈ ಮಹತ್ವದ ವಿಶ್ವಕಪ್ ಟೂರ್ನಿಯ ಮೂಲಕ ನಿಮ್ಮ ಪ್ರತಿಭೆ, ಸಂಕಲ್ಪ ಎಲ್ಲರ ಗಮನ ಸೆಳೆದಿದೆ. ನಿಮ್ಮ ಬಲ ಏನು ಏನು ಎಂಬುದು ವಿಶ್ವ ನೋಡಿದೆ. ಎಲ್ಲ ಪಂದ್ಯಗಳಲ್ಲಿ ತುಂಬಾ ಜೋಶ್​ನಲ್ಲಿ ಪ್ರದರ್ಶನ ಮಾಡಿದ್ದೀರಿ. ಇದು ದೇಶಕ್ಕೆ ಅಪಾರ ಹೆಮ್ಮೆ ತಂದಿದೆ ಎಂದು ಬರೆದು ಭಾರತದ ಆಟಗಾರರಿಗೆ ಧೈರ್ಯ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ 50 ಓವರ್​​ಗಳಲ್ಲಿ 10 ವಿಕೆಟ್​​ ಕಳೆದುಕೊಂಡು 240 ರನ್​ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಆಸಿಸ್​ ಟೀಮ್​ 43 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 241 ರನ್​ ಗಳಿಸುವ ಮೂಲಕ ವಿಜಯಮಾಲೆ ಧರಿಸಿಕೊಂಡಿತು. ಇದರಿಂದ 6ನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವಕಪ್​​​ಗೆ ಮುತ್ತಿಕ್ಕಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಎಂದೆಂದಿಗೂ ನಾವು ನಿಮ್ಮೊಂದಿಗೆ’ ಟೀಮ್​ ಇಂಡಿಯಾ ಆಟಗಾರರಿಗೆ ಧೈರ್ಯ ಹೇಳಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/11/ROHIT_SHARMA_PM_MODI.jpg

Load More