ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ
ಟೆಸ್ಟ್ನಲ್ಲಿ ಟೀಂ ಇಂಡಿಯಾದ ಬೆನ್ನೆಲುಬಾಗಿದ್ದ ಯಂಗ್ ಬೌಲರ್..!
ಬೌಲಿಂಗ್ ಒಂದೇ ಅಲ್ಲ, ಬ್ಯಾಟಿಂಗ್ನಲ್ಲೂ ಸೈ ಅನ್ನೋ ಆಟಗಾರ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ಲೆಕ್ಕಾಚಾರ ಶುರುಮಾಡಿವೆ. ಯಾರನ್ನು ರಿಟೈನ್ ಮಾಡಿಕೊಳ್ಳಬೇಕು? ಯಾರನ್ನೆಲ್ಲಾ ಹರಾಜಿನಲ್ಲಿ ಖರೀದಿ ಮಾಡಬೇಕು? ಅನ್ನೋ ಚಿಂತನೆ ನಡೆಸಿವೆ. ಅದರಲ್ಲಿ ಆರ್ಸಿಬಿ ಕೂಡ ಹೊರತಾಗಿಲ್ಲ.
ಇತ್ತೀಚೆಗೆ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡಿತ್ತು. ವಿಶೇಷ ಅಂದರೆ ಈ ಸರಣಿಗೆ ಆರ್ಸಿಬಿಯ ನಾಲ್ವರು ಆಟಗಾರರು ತಂಡದಲ್ಲಿದ್ದರು. ಮೂವರು ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆದುಕೊಂಡಿದ್ರು. ಅದರಲ್ಲೂ, ಯಂಗ್ ಬೌಲರ್ ಆಕಾಶ್ ದೀಪ್ ತುಂಬಾನೇ ಇಂಪ್ರೆಸೀವ್ ಆಗಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಕಾಶ್ ದೀಪ್ ಮೊದಲ ಇನ್ನಿಂಗ್ಸ್ನಲ್ಲಿ 17 ರನ್ಗಳಿಸಿ 2 ವಿಕೆಟ್ ಪಡೆದು ಮಿಂಚಿದ್ರು. ಆಕಾಶ್ ದೀಪ್ ಶೈನ್ ಆಗ್ತಿರುವ ಹಿನ್ನೆಲೆಯಲ್ಲಿ ಆರ್ಸಿಬಿ ಹರಾಜಿನಲ್ಲಿ ಖರೀದಿಸುವ ಲೆಕ್ಕಾಚಾರದಲ್ಲಿದೆ. ಪ್ರತಿ ಬಾರಿ ಕೂಡ ಆರ್ಸಿಬಿ ಬೌಲಿಂಗ್ ಸೆಲೆಕ್ಷನ್ನಲ್ಲಿ ಫೇಲ್ ಆಗಿದ್ದೇ ಹೆಚ್ಚು. ಈ ಬಾರಿ ತಪ್ಪು ಮಾಡಬಾರದು ಅನ್ಕೊಂಡಿರುವ ಬೆಂಗಳೂರು ತಂಡ, ಟೀಂ ಇಂಡಿಯಾದ ಸ್ಟಾರ್ ಬೌಲರ್ಗಳನ್ನೇ ಹುಡುಕಿ ತರುವ ಲೆಕ್ಕಾಚಾರದಲ್ಲಿದೆ. ಅವರಲ್ಲಿ ಆಕಾಶ್ ದೀಪ್ ಕೂಡ ಒಬ್ಬರು ಎಂದು ಹೇಳಲಾಗಿದೆ.
ಆಕಾಶ್ ದೀಪ್ಗೆ ಮಣೆ
ಇನ್ನು, ಆಕಾಶ್ ದೀಪ್ ಅವರ ಮಿಂಚಿಂಗು ಆರ್ಸಿಬಿಯ ಹಿರಿಯ ಆಟಗಾರ, ಟೀಂ ಇಂಡಿಯಾದ ವೇಗಿ ಸಿರಾಜ್ ಅವರ ತಲೆನೋವಿಗೂ ಕಾರಣವಾಗಿದೆ. ಸಿರಾಜ್ಗೆ ಆಕಾಶ್ ದೀಪ್ ಟಫ್ ಕಾಂಪಿಟೇಟರ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಆರ್ಸಿಬಿಯಲ್ಲಿ ಸಿರಾಜ್ಗೆ ಇರುವ ಸ್ಥಾನವನ್ನು ಆಕಾಶ್ ದೀಪ್ ಅಲಂಕರಿಸಿದರೂ ಅಚ್ಚರಿ ಇಲ್ಲ. ಕೆಲವು ಮಾಹಿತಿಗಳ ಪ್ರಕಾರ, ಸಿರಾಜ್ ಬದಲಿಗೆ ಆಕಾಶ್ ದೀಪ್ ಅವರನ್ನೇ ಆರ್ಸಿಬಿ ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:IND vs ENG; ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟ ಆಕಾಶ್ ದೀಪ್.. ಈ RCB ಪ್ಲೇಯರ್ ಕ್ರಿಕೆಟ್ ಎಂಟ್ರಿಯೇ ರೋಚಕ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್