ಟೀಮ್ ಇಂಡಿಯಾದಿಂದ ಸ್ಟಾರ್ ಕ್ರಿಕೆಟರ್ಗೆ ಭಾರೀ ಮೋಸ
ದಿಢೀರ್ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟರ್
ನಿವೃತ್ತಿ ಘೋಷಿಸಿ ಈ ಇಬ್ಬರನ್ನು ನೆನೆದ ಕ್ರಿಕೆಟ್ ದಿಗ್ಗಜ..!
ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಸ್ಟಾರ್ ಕ್ರಿಕೆಟರ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಇಂದು ಭಾವನಾತ್ಮಕ ವಿಡಿಯೋ ಪೋಸ್ಟ್ ಮಾಡಿದ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ರು. ಕೇವಲ ಅಂತಾರಾಷ್ಟ್ರೀಯ ಮಾತ್ರವಲ್ಲ ದೇಶೀಯ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ರು.
2010ರಲ್ಲಿ ಶಿಖರ್ ಧವನ್ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ರು. ಮೊದಲು ಏಕದಿನ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದ ಗಬ್ಬರ್ ನಂತರ ಟಿ20 ಹಾಗೂ ಟೆಸ್ಟ್ ತಂಡ ಸೇರಿದರು. ಇವರು ಜಗತ್ತಿನ ಶ್ರೇಷ್ಠ ಓಪನಿಂಗ್ ಬ್ಯಾಟರ್ ಎಂದೇ ಕರೆಯಲಾಗುತ್ತಿತ್ತು. ಆದರೆ, ಶುಭ್ಮನ್ ಗಿಲ್ ಬಂದ ನಂತರ ಧವನ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಹಾಗಾಗಿ ಇವರು 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.
ವಿಡಿಯೋದಲ್ಲಿ ಏನಿದೆ?
ನನ್ನ ಕ್ರಿಕೆಟ್ ವೃತ್ತಿ ಜೀವನ ಹಿಂತಿರುಗಿ ನೋಡಿದಾಗ ಸವಿ ನೆನಪುಗಳೇ ಕಾಡುತ್ತವೆ. ನಾನು ಭಾರತ ತಂಡದ ಪರ ಆಡಲೇಬೇಕು ಎಂದಿದ್ದೆ. ಇದನ್ನು ಸಾಧಿಸಿದ ಖುಷಿ ನನ್ನ ಮನಸ್ಸಿನಲ್ಲಿದೆ. ನನ್ನನ್ನು ಬೆಂಬಲಿಸಿ ಕುಟುಂಬ ಮತ್ತು ನನ್ನ ಬಾಲ್ಯದ ಕೋಚ್ ಆದ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರಿಗೆ ಧನ್ಯವಾದಗಳು ಎಂದರು.
ಶಿಖರ್ ಸಾಧನೆ
ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7 ಶತಕ, 5 ಅರ್ಧಶತಕ ಸೇರಿ 2315 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 167 ಪಂದ್ಯಗಳನ್ನು ಆಡಿದ್ದು, 6793 ರನ್ ಸಿಡಿಸಿದ್ದಾರೆ. ಈ ಪೈಕಿ 17 ಶತಕ ಮತ್ತು 39 ಅರ್ಧಶತಕ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 68 ಪಂದ್ಯಗಳು ಆಡಿದ್ದು, 11 ಅರ್ಧಶತಕ ಜತೆಗೆ ಸುಮಾರು 1759 ರನ್ ಚಚ್ಚಿದ್ದಾರೆ.
ಇದನ್ನೂ ಓದಿ: ಬಿಸಿಸಿಐನಿಂದ ಮಹಾ ಮೋಸ; ನಿವೃತ್ತಿ ಘೋಷಿಸಿ ಬಿಗ್ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟರ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್