newsfirstkannada.com

ಟೀಕೆಗಳನ್ನ ಮೆಟ್ಟಿ ನಿಂತ ಹಾರ್ದಿಕ್​​ ಪಾಂಡ್ಯ.. ಜಗತ್ತಿನ ನಂಬರ್​​ 1 ಆಲ್​ರೌಂಡರ್​​!

Share :

Published July 3, 2024 at 10:22pm

Update July 3, 2024 at 10:32pm

    ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024ರ ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ!

    ವಿಶ್ವಕಪ್​ ಬೆನ್ನಲ್ಲೇ ಐಸಿಸಿ ಪುರುಷರ ಟಿ-20 ಅಲ್ ರೌಂಡರ್ ಶ್ರೇಯಾಂಕ ಪ್ರಕಟ

    ಜಡೇಜಾ ಅಲ್ಲ; ಟೀಮ್​ ಇಂಡಿಯಾದ ಈ ಸ್ಟಾರ್​​ ಆಟಗಾರನಿಗೆ ನಂಬರ್​ 1 ಪಟ್ಟ

2 ತಿಂಗಳ ಹಿಂದೆ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಆಗಿದ್ರು. ಈ ಸೀಸನ್​ನಲ್ಲಿ ಮುಂಬೈ ತಂಡದ ಪರ ಕ್ಯಾಪ್ಟನ್​ ಆಗಿ ಅಷ್ಟೇ ಅಲ್ಲದೆ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಕಳಪೆ ಪ್ರದರ್ಶನ ನೀಡಿದ್ರು. ಈ ಮೂಲಕ ಹಾರ್ದಿಕ್‌ ರೋಹಿತ್‌ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರೋಹಿತ್‌ ಆಭಿಮಾನಿಗಳಿಂದ ಹಾರ್ದಿಕ್‌ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದರ ಪರಿಣಾಮ ಟೂರ್ನಿಯಿಂದಲೇ ಮುಂಬೈ ಹೊರ ಬಿದ್ದಿತ್ತು.

ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ರೂ ಪಾಂಡ್ಯ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಯ್ತು. ಆಗ ಹಾರ್ದಿಕ್​ ಪಾಂಡ್ಯ ಆಯ್ಕೆ ಸರಿಯಲ್ಲ ಎಂದು ಫ್ಯಾನ್ಸ್​​ ಆಕ್ರೋಶ ಹೊರಹಾಕಿದ್ರು. ಈ ಎಲ್ಲದರ ಮಧ್ಯೆ ಹಾರ್ದಿಕ್‌ ಪಾಂಡ್ಯ ಡಿವೋರ್ಸ್​ ಸದ್ದು ಮಾಡಿದ ಕಾರಣ ಕುಗ್ಗಿ ಹೋಗಿದ್ದರು. ಈ ಎಲ್ಲಾ ಅವಮಾನಗಳನ್ನು ಎದುರಿಸಿದ್ದ ಹಾರ್ದಿಕ್‌ 2024 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ರು.

ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024ರ ಟಿ20 ವಿಶ್ವಕಪ್​ ಫೈನಲ್​​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಇದಕ್ಕೆ ಕಾರಣ ಹಾರ್ದಿಕ್‌ ಪಾಂಡ್ಯ ಎಸೆದ ಕೊನೆ ಓವರ್‌ನಲ್ಲಿ. ಇವರು ತಮ್ಮ ಕೊನೆ ಓವರ್​ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿ ಭಾರತ ತಂಡವನ್ನು ಗೆಲ್ಲಿಸಿದ್ರು.

ಇನ್ನು, ಕೇವಲ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮಾತ್ರವಲ್ಲ ಇಡೀ ಟೂರ್ನಿಯುದ್ಧಕ್ಕೂ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ರು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡಲ್ಲೂ ದಿ ಬೆಸ್ಟ್​ ಪರ್ಫಾಮೆನ್ಸ್​ ಕೊಟ್ಟರು. ಈ ಮೂಲಕ ಭಾರತ ತಂಡ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಹಾರ್ದಿಕ್​ಗೆ ಟಿ20 ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂಬರ್‌-1 ಸ್ಥಾನ

ಹಾರ್ದಿಕ್ ಐಸಿಸಿ ಪುರುಷರ ಟಿ-20 ಅಲ್ ರೌಂಡರ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಅವರೊಂದಿಗೆ 222 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಹಾರ್ದಿಕ್​ ಆಡಿದ 8 ಪಂದ್ಯಗಳಲ್ಲಿ 1 ಅರ್ಧಶತಕ ಸೇರಿ 150 ಸ್ಟ್ರೈಕ್ ರೇಟ್​ನಲ್ಲಿ ಸುಮಾರು 140 ರನ್​ ಗಳಿಸಿದ್ರು. ಜತೆಗೆ 11 ವಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಐಪಿಎಲ್​ ಸೋಲು; ಹೆಂಡತಿಯಿಂದ ಅವಮಾನ; ಮಾನಸಿಕವಾಗಿ ಕುಗ್ಗಿ ಹೋಗಿದ್ದ ಹಾರ್ದಿಕ್ ಕಮ್​ಬ್ಯಾಕ್​​ ಕಥೆ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಕೆಗಳನ್ನ ಮೆಟ್ಟಿ ನಿಂತ ಹಾರ್ದಿಕ್​​ ಪಾಂಡ್ಯ.. ಜಗತ್ತಿನ ನಂಬರ್​​ 1 ಆಲ್​ರೌಂಡರ್​​!

https://newsfirstlive.com/wp-content/uploads/2024/05/HARDIK_PANDYA-1.jpg

Load More