newsfirstkannada.com

BREAKING: ತೀವ್ರ ಹೃದಯಾಘಾತ.. ಸ್ಟಾರ್​​ ಡೈರೆಕ್ಟರ್ ಸಿದ್ಧಿಕಿ ಸಾವು

Share :

08-08-2023

    ಸ್ಟಾರ್​ ಡೈರೆಕ್ಟರ್​​ಗೆ ತೀವ್ರ ಹೃದಯಾಘಾತ

    ಹಾರ್ಟ್​​ ಅಟ್ಯಾಕ್​​ನಿಂದ ಸಿದ್ಧಿಕಿ ಸಾವು

    ತಮಿಳು ಸ್ಟಾರ್​​ ನಿರ್ದೇಶಕ ಸಿದ್ಧಿಕಿ..!

ಚೆನ್ನೈ: ತಮಿಳು ಸ್ಟಾರ್​​ ಡೈರೆಕ್ಟರ್​​​​ ಸಿದ್ಧಿಕಿ ಹಠಾತ್​​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿದ್ಧಿಕಿ ತಮ್ಮ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಸೋಮವಾರ ಮಧ್ಯಾಹ್ನ ಸಿದ್ಧಿಕಿ ಅವರಿಗೆ ಹಾರ್ಟ್ ಅಟ್ಯಾಕ್ ಕಾಣಿಸಿಕೊಂಡಿತ್ತು. ಈ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಿದ್ಧಿಕಿ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಕೊನೆಗೂ ಉಸಿರು ನಿಲ್ಲಿಸಿದ್ದಾರೆ.

ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಸಿದ್ಧಿಕಿ ಡೈರೆಕ್ಟ್​​​ ಮಾಡಿದ್ದರು. ಫ್ರೆಂಡ್ಸ್, ಎಂಗಳ್ ಅಣ್ಣ, ಮನ್ನರ್ ಮಥೈ ಸ್ಪೀಕಿಂಗ್, ಲೇಡಿಸ್ & ಜಂಟಲ್‌ಮನ್‌, ಭಾಸ್ಕರ್ ದಿ ರಾಸ್ಕಲ್‌, ಹಿಟ್ಲರ್, ಬಾಡಿಗಾರ್ಡ್ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ತೀವ್ರ ಹೃದಯಾಘಾತ.. ಸ್ಟಾರ್​​ ಡೈರೆಕ್ಟರ್ ಸಿದ್ಧಿಕಿ ಸಾವು

https://newsfirstlive.com/wp-content/uploads/2023/08/Siddiki.jpg

Load More