newsfirstkannada.com

ತರುಣ್-ಸೋನಲ್​​ ಅದ್ಧೂರಿ ಆರತಕ್ಷತೆ, ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಸ್ಟಾರ್​ ಜೋಡಿ; ಧಾರಾ ಮುಹೂರ್ತ ಯಾವಾಗ?

Share :

Published August 11, 2024 at 6:49am

    ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಅದ್ಧೂರಿ ಆರತಕ್ಷತೆ

    ಸ್ಟಾರ್​ ಜೊಡಿ ಆರತಕ್ಷತೆಗೆ ಸಾಕ್ಷಿಯಾದ ಸ್ಯಾಂಡಲ್​ವುಡ್​ ತಾರೆಯರು

    ಮದುವೆಯ ‘ಈ ಬಂಧ’ ಹಾಡು ಡೆಡಿಕೇಟ್ ಮಾಡಿದ ಗಾಯಕಿ ಅರ್ಚನಾ

ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್‌ ತರುಣ್ ಸುಧೀರ್​ ಹಾಗೂ ನಟಿ ಸೋನಲ್​ ಅವರಿಗೆ ಇಂದು ಕಂಕಣಭಾಗ್ಯ. ಕ್ಯೂಟ್​ ಸ್ಟಾರ್ ಜೋಡಿ ಇಂದು ಗುರು ಹಿರಿಯರ ಸಮ್ಮುಖದಲ್ಲಿ ಸಪ್ತತುದಿ ತುಳಿಯಲಿದ್ದಾರೆ. ಇದಕ್ಕೆ ಮುನ್ನ ದಿನ ನಿನ್ನೆ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಆರತಕ್ಷತೆ ಸಂಭ್ರಮ ಮೊಳಗಿತ್ತು.

ಇದನ್ನೂ ಓದಿ: ‘ತರುಣ್ ಸುಧೀರ್, ಸೋನಲ್ ಮೊಂತೆರೊ ಮದುವೆಗೆ ದರ್ಶನ್‌ ಬರಲೇಬೇಕಿತ್ತು’- ಹೀಗಂದಿದ್ದು ಯಾರು? VIDEO

ಆರತಕ್ಷತೆಗೂ ಮುನ್ನ ವೇದಿಕೆ ಹತ್ತಿದ ನವಜೋಡಿ ಮೊದಲಿಗೆ ದಿವಂಗತ ಸುಧೀರ್ ಅವರ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿದ್ದರು. ಬಳಿಕ ಈ ಜೋಡಿ ತಾಯಿ ಮಾಲತಿ ಅವರ ಆಶೀರ್ವಾದ ಪಡೆದುಕೊಳ್ತು. ಆರತಕ್ಷತೆಗೆ ತರುಣ್ ಅವರು ಶೇರ್ವಾನಿಯಲ್ಲಿ ಕಾಣಿಸಿಕೊಂಡರೆ, ಸೋನಲ್ ಲೆಹೆಂಗಾದಲ್ಲಿ ಮಿರ ಮಿರ ಮಿಂಚಿದ್ದರು. ತರುಣ್ ಸದಾ ಕ್ರಿಯಾಶೀಲತೆ ಹುಡುಕೋ ನಿರ್ದೇಶಕ.‌ ಆ ಕ್ರಿಯೇಟಿವಿಟಿ ಮದುವೆಯಲ್ಲೂ ಕಂಟಿನ್ಯೂ ಆಗಿದೆ.

ಇಡೀ ಮದುವೆ ವೇದಿಕೆ ಅಪ್ಪಟ್ಟ ರೆಡ್ ಕಾರ್ಪೆಟ್ ಮತ್ತು ಫಿಲ್ಮ್ ಅವಾರ್ಡ್ ಇವೆಂಟ್ ನೆನಪಿಸುವಂತಿದೆ. ಕಲ್ಯಾಣ ಮಂಟಪ ಪೂರ್ತಿ ಕಪ್ಪು ಹಾಗೂ ಕೆಂಪಿನ ಬಣ್ಣ. ಸುಗಂಧ ಸೂಸುವ ಗುಲಾಬಿ ಹೂಗಳಿಂದ ಅಲಂಕೃತಗೊಂಡಿತ್ತು. ತರುಣ್ ಸುಧೀರ್, ಸೋನಲ್ ಆರತಕ್ಷತೆ ಸಂಭ್ರಮದಲ್ಲಿ ಇಡೀ ಸ್ಯಾಂಡಲ್​​ವುಡ್​​​ ಬಳಗವೇ ನೆರೆದಿತ್ತು. ಸ್ಟಾರ್​ಗಳಲ್ಲಿ ಲವ್ಲಿ ಪ್ರೇಮ್ ತಮ್ಮ ಕುಟುಂಬದ ಜೊತೆಗೆ ಬಂದಿದ್ರು. ಸಾಧುಕೋಕಿಲಾ, ನಟ ಶರಣ್ ಸೇರಿ ಹಲವು ತಾರೆಯರ ಮೇಳ ಮೆರಗು ತುಂಬಿತು.
ಕಾಂತಾರ ಸಿನಿಮಾ ಶೂಟಿಂಗ್ ಬಿಸಿಯಲ್ಲಿದ್ದ ರಿಷಬ್ ಶೆಟ್ಟಿ ದಂಪತಿ ಬಂದು ಹರಸಿ ಹಾರೈಸಿದ್ರು.

ಇದನ್ನೂ ಓದಿ: ನೀವು ಸುಂದರವಾಗಿ ಕಾಣಬೇಕಂದ್ರೆ ಈ ಹಣ್ಣು ತಿಂದ್ರೆ ಸಾಕು.. ಚರ್ಮದ ಸಮಸ್ಯೆಗೆ ಇದುವೇ ರಾಮಬಾಣ!

ಮಾಜಿ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್​, ರಾಕ್​ಲೈನ್​ ವೆಂಕಟೇಶ್ ಶುಭಕೋರಿದ್ರು. ನಟ ರಮೇಶ್ ಅರವಿಂದ್, ದುನಿಯಾ ವಿಜಯ್, ವಿನೋದ್ ಪ್ರಭಾಕರ್, ಮಾಲಾಶ್ರೀ, ಮಗಳು ಆರಾಧನಾ ಸಹ ಆರತಕ್ಷತೆಯಲ್ಲಿ ಮಿಂಚಿದ್ರು. ಇನ್ನು, ರಾಜಕೀಯ ಜಟಾಪಟಿ ಬಿಸಿಯಲ್ಲೂ ಡಿಸಿಎಂ ಡಿಕೆಶಿ, ಮಾಜಿ ಸಿಎಂ ಬಿಎಸ್​​ವೈ ನವಜೋಡಿಗೆ ಹರಸಿದ್ರು. ಗೆಳೆಯ ತರುಣ್ ಆರತಕ್ಷತೆಯಲ್ಲಿ ಗಾಯಕಿ ಅರ್ಚನಾ ಉಡುಪ ಗಾನ ಬಜಾನ ಸಂಭ್ರಮವನ್ನ ಮತ್ತಷ್ಟು ರಂಜಿಸಿತು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತರುಣ್ ಸುಧೀರ್, ಸೋನಲ್ ಧಾರಾಮುಹೂರ್ತ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತರುಣ್-ಸೋನಲ್​​ ಅದ್ಧೂರಿ ಆರತಕ್ಷತೆ, ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಸ್ಟಾರ್​ ಜೋಡಿ; ಧಾರಾ ಮುಹೂರ್ತ ಯಾವಾಗ?

https://newsfirstlive.com/wp-content/uploads/2024/08/tharun.jpg

Load More