newsfirstkannada.com

×

IPL 2025: RCB ಟೀಮ್​ ಸೇರುವ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ KL ರಾಹುಲ್; ಏನಂದ್ರು ಗೊತ್ತಾ?​​

Share :

Published September 15, 2024 at 4:07pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕ್ರೇಜ್ ಹೆಚ್ಚುತ್ತಲೇ ಇದೆ!

    ವರ್ಷದ ಕೊನೆಗೆ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಆಕ್ಷನ್​​

    ಲಕ್ನೋ ಸೂಪರ್ ಜೆಂಟ್ಸ್ ತಂಡ ತೊರೆದು ಆರ್​​ಸಿಬಿ ಸೇರಲಿರೋ ಕೆ.ಎಲ್​ ರಾಹುಲ್​​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕ್ರೇಜ್​​ ಹೆಚ್ಚಾಗುತ್ತಲೇ ಇದೆ. ಈ ಸೀಸನ್​ಗೆ ಮುನ್ನ ಮೆಗಾ ಆಕ್ಷನ್​ ನಡೆಯಲಿದ್ದು, ಸ್ಟಾರ್​ ಬ್ಯಾಟರ್​​ ಕೆ.ಎಲ್​ ರಾಹುಲ್​ ಲಕ್ನೋ ಸೂಪರ್ ಜೆಂಟ್ಸ್ ತಂಡ ತೊರೆದು ಆರ್​​ಸಿಬಿ ಸೇರುವ ಸಾಧ್ಯತೆ ಇದೆ.

ಆರ್​​ಸಿಬಿ ಸೇರುವ ಬಗ್ಗೆ ಕೆ.ಎಲ್​ ರಾಹುಲ್​ ಏನಂದ್ರು?

ಇನ್ನು, ಆರ್​​​ಸಿಬಿ ಸೇರುವ ಕುರಿತು ಕೆ.ಎಲ್​ ರಾಹುಲ್​​​ ಮಾತಾಡಿರೋ ವಿಡಿಯೋ ಒಂದು ವೈರಲ್​ ಆಗಿದೆ. ಅಭಿಮಾನಿ ಒಬ್ಬರು ವಿಡಿಯೋದಲ್ಲಿ “ನಾನು ಆರ್‌ಸಿಬಿ ಡೈ ಹಾರ್ಡ್ ಫ್ಯಾನ್. ಬಹಳ ಹಿಂದಿನಿಂದಲೂ ಆರ್‌ಸಿಬಿಯನ್ನೇ ಬೆಂಬಲಿಸುತ್ತಿದ್ದೇನೆ. ನೀವು ಮತ್ತೆ ಆರ್​​ಸಿಬಿಗೆ ಬರುತ್ತೀರಿ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ರು. ಇದಕ್ಕೆ ಕೆಎಲ್ ರಾಹುಲ್ ‘ಲೆಟ್ಸ್ ಹೋಪ್ ಸೋ’ ಎಂದಿದ್ದಾರೆ.

ಮೂರು ಪದಗಳ ಮೂಲಕ ಮುಂದಿನ ಐಪಿಎಲ್ ಸೀಸನ್​​ಗೆ ಆರ್‌ಸಿಬಿ ಪರ ಆಡುವ ಬಗ್ಗೆ ಕೆ.ಎಲ್​ ರಾಹುಲ್​ ದೊಡ್ಡ ಹಿಂಟ್​ ಕೊಟ್ಟಿದ್ದಾರೆ. ಕೆ.ಎಲ್​ ರಾಹುಲ್​ ಮಾತು ಹೇಳಿ ಆರ್​​​ಸಿಬಿ ಫ್ಯಾನ್ಸ್​ ಫುಲ್​ ಖುಷಿಯಾಗಿದ್ದಾರೆ.

ಕೆ.ಎಲ್​ ರಾಹುಲ್​​ ಐಪಿಎಲ್​ ದಾಖಲೆಯೇನು?

ಐಪಿಎಲ್‌ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಕೆಎಲ್ ರಾಹುಲ್ ಒಬ್ಬರು. ಕೆ.ಎಲ್​ ರಾಹುಲ್​ 2013ರಲ್ಲಿ ತಮ್ಮ ಚೊಚ್ಚಲ ಆವೃತ್ತಿಯನ್ನು ಆರ್‌ಸಿಬಿಯೊಂದಿಗೆ ಪ್ರಾರಂಭಿಸಿದ್ದರು. ಇದಾದ ನಂತರ ಹೈದರಾಬಾದ್‌ ತಂಡ ಸೇರಿದ್ದರು. ಬಳಿಕ 2016ರಲ್ಲಿ ಆರ್‌ಸಿಬಿಗೆ ಕಮ್​ಬ್ಯಾಕ್​ ಮಾಡಿದ್ರು. ಈ ಸೀಸನ್​​ನಲ್ಲಿ ಒಟ್ಟು 397 ರನ್‌ ಗಳಿಸೋ ಆರ್‌ಸಿಬಿ ಪರ ಅತೀ ಹೆಚ್ಚು ಸ್ಕೋರ್​ ಮಾಡಿದ 3ನೇ ಬ್ಯಾಟರ್​ ಆಗಿದ್ರು.

ಇದನ್ನೂ ಓದಿ: ಕೊಹ್ಲಿ ಅಲ್ಲವೇ ಅಲ್ಲ.. ಭಾರತದ ಈ ಓಪನರ್​ ಎಂದರೆ ಬಾಂಗ್ಲಾ ಪ್ಲೇಯರ್ಸ್​ಗೆ ನಿಂತಲ್ಲೇ ನಡುಕ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL 2025: RCB ಟೀಮ್​ ಸೇರುವ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ KL ರಾಹುಲ್; ಏನಂದ್ರು ಗೊತ್ತಾ?​​

https://newsfirstlive.com/wp-content/uploads/2024/05/KL-Rahul-next-captain.jpg

Load More